ಮನೋರಂಜನೆ

ಕೊರೋನ ಸೋಂಕಿನ ನಡುವೆ ಬಿಡುಗಡೆ ಮಾಡಿದ ಕನ್ನಡದ ಪ್ರಥಮ ಚಿತ್ರ ACT-1978ನ ಚಿತ್ರ ತಂಡಕ್ಕೆ ‘ಆನೆ ಬಲ’ ತುಂಬಿದ ದರ್ಶನ್!

Pinterest LinkedIn Tumblr


ಕರೋನ ಸೋಂಕಿನ ನಡುವೆ ‘ಆಕ್ಟ್ 1978’ ಸಿನಿಮಾ ಬಿಡುಗಡೆಯಾಗಿದೆ. ಈ ಸಿನಿಮಾವನ್ನ ನಿರ್ದೇಶಕ ಮಂಸೋರೆ ಅವರು ಚಿತ್ರ ಮಂದಿರಗಳ್ಳಲಿ ರಿಲೀಸ್ ಮಾಡಿದ್ದಾರೆ. ಈಗ ‘ಡಿ ಬಾಸ್’ ದರ್ಶನ್‌ ಅವರು ಕೂಡ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಕೊರೊನಾ ಆತಂಕದ ನಡುವೆಯೂ ಸಿನಿಮಾ ರಿಲೀಸ್ ಮಾಡಿದ ತಂಡದ ಧೈರ್ಯಕ್ಕೆ ಹ್ಯಾಟ್ಸ್ ಆಫ್ ಅಂದಿದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ(Darshan) ಅವರು ‘ಆಕ್ಟ್-1978′ ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ವಿಶ್ ಮಾಡಿರುವುದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಡಿ ಬಾಸ್ ಆಹ್ವಾನ ಕುರಿತು ಸಂಚಾರಿ ವಿಜಯ್ ಅವರು ಲವ್ ಯು ಸರ್. ನೀವು ನಮ್ಮನ್ನು ನಿಮ್ಮ ಮನೆಗೆ ಆಹ್ವಾನಿಸಿ ACT-1978 ಸಿನಿಮಾಗೆ ತೋರಿಸುತ್ತಿರುವ ಬೆಂಬಲ ತಂಡಕ್ಕೆ ಆನೆ ಬಲ ಬಂದಂತಾಗಿದೆ ಎಂದು ತಮ್ಮ ಟ್ವಿಟ್ಟರ್ ಅಲ್ಲಿ ಬರೆದು ಕೊಂಡಿದ್ದಾರೆ.

ಈ ಚಿತ್ರದಲ್ಲಿ ಯಜ್ಞಾ ಶೆಟ್ಟ, ಬಿ. ಸುರೇಶ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ಶ್ರುತಿ, ದತ್ತಣ್ಣ, ಸಂಚಾರಿ ವಿಜಯ್, ಶರಣ್ಯಾ, ಶೋಭರಾಜ್, ಅವಿನಾಶ್, ರಾಘು ಶಿವಮೊಗ್ಗ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

Comments are closed.