ರಾಷ್ಟ್ರೀಯ

ಕೊರೋನಾ ಪ್ರಕರಣಗಳಲ್ಲಿ ಹೆಚ್ಚಳ: ಕೇಂದ್ರದಿಂದ ಹೊಸ ಮಾರ್ಗಸೂಚಿ ಪ್ರಕಟ

Pinterest LinkedIn Tumblr


ಹೊಸದಿಲ್ಲಿ: 2ನೇ ಅಲೆ ಕೊರೋನಾ ಪ್ರಕರಣಗಳು ಕಂಡು ಬರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಚಳಿಗಾಲದ ಸಮಯದಲ್ಲಿ ಪ್ರಕರಣ ಹೆಚ್ಚಾಗುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಇಂದು ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ಡಿ.1ರಿಂದ ಅನ್ವಯವಾಗುವಂತೆ ಈ ಮಾರ್ಗಸೂಚಿ ಪ್ರಕಟವಾಗಲಿದೆ. ಅಲ್ಲದೇ ಕಂಟೈನ್‌ಮೆಂಟ್ ವಲಯಗಳಲ್ಲಿ ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಲಾಗಿದೆ.

ಕೋವಿಡ್​ ಎರಡು, ಮೂರನೇ ಅಲೆಗೆ ದೆಹಲಿ, ಹರಿಯಾಣ, ಪಂಜಾಬ್​, ಮಹಾರಾಷ್ಟ್ರ ಸೇರಿದಂತೆ ಏಂಟು ರಾಜ್ಯಗಳು ತತ್ತಿರಿಸಿವೆ. ಈ ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದ ಸೋಂಕು ಒಮ್ಮೆಲ್ಲೆ ಹೆಚ್ಚಾಗಿದೆ.

ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಜನ ಸೇರುವುದಕ್ಕೆ ಹೆಚ್ಚುವರಿ ದಂಡ ಹಾಗೂ ನಿರ್ಬಂಧ ವಿಧಿಸಬಹುದು. ಆದರೆ, ಕಂಟೈನ್​ಮೆಂಟ್​ ವಲಯದ ಹೊರಗೆ ಯಾವುದೇ ಅನುಮತಿಯಿಲ್ಲದೇ ಲಾಕ್​ಡೌನ್​ ಮಾಡುವಂತಿಲ್ಲ.ಮಾಸ್ಕ್​ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು. ಮಾರುಕಟ್ಟೆ ಮತ್ತು ವಾರಾಂತ್ಯದ ಬಜಾರ್​ಗಳಿಗೆ ನಿಯಮ ಹೊರಡಿಸುವಂತಹ ಕಟ್ಟು ನಿಟ್ಟಿನ ಕ್ರಮವನ್ನು ಸರ್ಕಾರಗಳು ಜಾರಿಗೆ ಗೊಳಿಸುವಂತೆ ಸೂಚನೆ ನೀಡಲಾಗಿದೆ.

ಕಂಟೈನ್​ಮೆಟ್​ ವಲಯಗಳಲ್ಲಿ ಅಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ. ವೈದ್ಯಕೀಯ ತುರ್ತು ಸ್ಥಿತಿ ಹೊರತು ಪಡಿಸಿ ಹಾಗೂ ಅಗತ್ಯ ಸೇವೆ ಸರಕುಗಳ ಪೂರೈಕೆಗೆ ಮಾತ್ರ ಜನರು ಓಡಾಡುತ್ತಿದ್ದಾರೆ ಎಂಬುದನ್ನು ಖಾತ್ರಿ ಪಡಿಸಿ ಅವಕಾಶ ನೀಡುವುದು, ಇದಕ್ಕಾಗಿ ಕಣ್ಗಾವಲು ಕಾಯುವುದು

ಅಂತಾರಾಷ್ಟ್ರೀಯ ವಿಮಾನ‌ಹಾರಾಟ ರದ್ದುಗೊಳಿಸಲಾಗಿದ್ದು, ಕಂಟೈನ್​ಮೆಂಟ್​ ವಲಯಗಳ ಚಿತ್ರಮಂದಿರಗಳಲ್ಲಿ ಶೇ.‌ 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ. ಈಜುಕೊಳ ವ್ಯಾಪಾರ ಪ್ರದರ್ಶನ ಹಾಲ್, ಸಾರ್ವಜನಿಕ ಕಾರ್ಯಕ್ರಮದಲ್ಲಿ 20 ಕ್ಕೂ ಹೆಚ್ಚು ಜನರಿಗೆ ಅವಕಾಶ ಇಲ್ಲ.

Comments are closed.