ಮನೋರಂಜನೆ

ಅಪ್ಪನ ಫಿಟ್ನೆಸ್‌ ಟ್ರೇನರ್‌ ನೊಂದಿಗೆ ಆಮೀರ್‌ ಖಾನ್‌ ಮಗಳ ಪ್ರೀತಿ-ಪ್ರೇಮ?

Pinterest LinkedIn Tumblr


ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದಾರೆ ಇರಾ ಖಾನ್‌. ಅವರು ಗುಟ್ಟಾಗಿ ಇರಿಸಿರುವ ಡೇಟಿಂಗ್ ವಿಚಾರ ಕೂಡ ಬಹಿರಂಗ ಆಗಿದೆ. ಆಮೀರ್‌ ಖಾನ್‌ ಪುತ್ರಿಯ ಲವ್‌ ಸ್ಟೋರಿ ಬಗ್ಗೆ ಎಲ್ಲೆಡೆ ಚರ್ಚೆ ಆಗುತ್ತಿದೆ.

ಈ ಹಿಂದೆ ಮಿಶಾಲ್‌ ಕೃಪಲಾನಿ ಜೊತೆ ಇರಾ ಖಾನ್‌ ಪ್ರೀತಿಯಲ್ಲಿ ಮುಳುಗಿದ್ದರು. ಇಬ್ಬರ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದ್ದವು. ಆದರೆ ಆ ಪ್ರೀತಿಗೆ ಅಂತ್ಯ ಹಾಡಲಾಯಿತು. ಮಿಶಾಲ್‌ ಜೊತೆಗೆ ಬ್ರೇಕಪ್‌ ಮಾಡಿಕೊಂಡ ಬಳಿಕ ಇರಾ ಈಗ ಹೊಸ ಪ್ರೀತಿ ಕಂಡುಕೊಂಡಿದ್ದಾರೆ. ಸೆಲೆಬ್ರಿಟಿ ಟ್ರೇಲರ್‌ ನೂಪುರ್‌ ಶಿಖಾರೆ ಮತ್ತು ಇರಾ ಖಾನ್‌ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಕೇಳಿಬಂದಿದೆ.

ಫಿಟ್ನೆಸ್‌ ಬಗ್ಗೆ ಆಮೀರ್ ಖಾನ್‌ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರಿಗೆ ಟ್ರೇನಿಂಗ್‌ ನೀಡಲು ನೂಪುರ್‌ ಬರುತ್ತಿದ್ದರು. ಅಲ್ಲದೆ, ಇರಾ ಅವರಿಗೂ ನೂಪುರ್‌ ಫಿಟ್ನೆಸ್‌ ಪಾಠ ಮಾಡಿದ್ದಾರೆ. ಈ ಲಾಕ್‌ಡೌನ್‌ ಸಮಯದಲ್ಲಿ ಇಬ್ಬರ ನಡುವೆ ಆಪ್ತತೆ ಹೆಚ್ಚಾಗಿದೆ. ಅದು ಈಗ ಪ್ರೀತಿಗೆ ತಿರುಗಿದೆ ಎಂಬ ಮಾತು ಬಾಲಿವುಡ್‌ ವಲಯದಿಂದ ಕೇಳಿಬಂದಿದೆ. ತಮ್ಮ ಖಿನ್ನತೆ ಬಗ್ಗೆ ಮನಬಿಚ್ಚಿ ಮಾತನಾಡಿರುವ ಇರಾ, ಲವ್‌ ಬಗ್ಗೆ ಸದ್ಯಕ್ಕೆ ಮೌನ ತಾಳಿದ್ದಾರೆ.

ನೂಪುರ್‌ ಮತ್ತು ಇರಾ ಖಾನ್‌ ಜೊತೆಗೆ ಇರುವ ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿವೆ. ಇತ್ತೀಚೆಗೆ ಇವರಿಬ್ಬರೂ ಜೊತೆಯಾಗಿ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಅಲ್ಲದೆ, ಒಟ್ಟಿಗೆ ವರ್ಕೌಟ್‌ ಮಾಡುತ್ತಿರುವ ಅನೇಕ ವಿಡಿಯೋಗಳನ್ನು ನೂಪುರ್‌ ಹಂಚಿಕೊಂಡಿದ್ದಾರೆ. ಇಬ್ಬರ ನಡುವೆ ಇರುವ ಆಪ್ತತೆ ನೋಡಿದರೆ ಗಂಭೀರವಾಗಿಯೇ ಪರಸ್ಪರ ಪ್ರೀತಿಸುತ್ತಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ ನೆಟ್ಟಿಗರು.

Comments are closed.