ಮನೋರಂಜನೆ

ಕಾಜಲ್​ ಅಗರ್ವಾಲ್ ಹನಿಮೂನ್​ ಖರ್ಚು ಎಷ್ಟು ಗೊತ್ತಾ..?

Pinterest LinkedIn Tumblr


ಇತ್ತೀಚೆಗೆ ಮದುವೆಯಾಗಿದ್ದ ನಟಿ ಕಾಜಲ್​ ಅಗರ್ವಾಲ್​  ಮಾಲ್ಟೀವ್ಸ್​ಗೆ ಹನಿಮೂನ್ ಪ್ರವಾಸಕ್ಕಾಗಿ ಹೋಗಿದ್ದಾರೆ. ನಟಿ​ ಹನಿಮೂನ್​ ಪ್ಯಾಕೇಜ್​ಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದಾರಂತೆ.

ಅಂಡರ್​ ವಾಟರ್​ನಲ್ಲಿ ಬೆಡ್​ ರೂಮ್ ಇರುವ ರೆಸಾರ್ಟ್​ನಲ್ಲಿ ತಂಗಿದ್ದು, ತಮ್ಮ ಬೆಡ್​ರೂಮಿನ ಚಿತ್ರಗಳನ್ನು ಇತ್ತೀಚೆಗಷ್ಟೆ ಹಂಚಿಕೊಂಡಿದ್ದಾರೆ. ಅಲ್ಲದೆ ಅಲ್ಲಿ ಕಾಲ ಕಳೆಯುತ್ತಿರುವ ಲೊಕೇಷನ್​ಗಳಲ್ಲಿ ಸಖತ್​ ಫೋಟೋಶೂಟ್​ ಸಹ ಮಾಡಿಸುತ್ತಿದ್ದಾರೆ.

ಕಾಜಲ್​ ಅಗರ್ವಾಲ್​ ಅವರ ವಿವಾಹದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಇವುಗಳ ಜೊತೆಗೆ ಈಗ ಅವರ ಹನಿಮೂನ್​ ಪ್ರವಾಸದ ಚಿತ್ರಗಳು ಸೇರಿಕೊಂಡಿವೆ. ಈ ಜೋಡಿ ತಮ್ಮ ಹನಿಮೂನ್​ ಪ್ರವಾಸಕ್ಕಾಗಿ 40 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದಾರಂತೆ.

ಕಾಜಲ್​ ಸದ್ಯಕ್ಕೆ ಸಿನಿಮಾ ಶೂಟಿಂಗ್​ಗೆ ಮರಳುವಂತೆ ಕಾಣುತ್ತಿಲ್ಲ. ಆದರೂ ಕಾಜಲ್​ ಕೈಯಲ್ಲಿ ಮೋಸಗಾಳ್ಳು, ಆಚಾರ್ಯ ಸಿನಿಮಾಗಳಿವೆ. ತಮಿಳಿನಲ್ಲಿ ಭಾರತೀಯುಡು 2 ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯಕ್ಕೆ ಆಚಾರ್ಯ ಸಿನಿಮಾದ ಚಿತ್ರೀಕರಣ ಮುಂದಿನ ವರ್ಷಕ್ಕೆ ಹೋಗಿದೆ. ಇನ್ನು ಭಾರತೀಯುಡು 2 ಬಗ್ಗೆ ಯಾವುದೇ ಅಪ್ಡೇಟ್ ಇಲ್ಲ.

Comments are closed.