ಕರಾಚಿ: ಭಾರತ ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ದೀಪಾಬಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಪಾಕಿಸ್ತಾನದಲ್ಲಿ ಹಿಂದೂ ಸಮುದಾಯದಿಂದ ಸಂಭ್ರಮದ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು.
ಈ ಮಧ್ಯೆ ಪಾಕಿಸ್ತಾನದಲ್ಲೂ ಸಂಭ್ರಮದ ದೀಪಾವಳಿಯನ್ನು ಆಚರಿಸಲಾಗಿದ್ದು, ಕರಾಚಿಯ ಸ್ವಾಮಿ ನಾರಾಯಣ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.
ಕರಾಚಿಯಲ್ಲಿ ನೆಲೆಸಿರುವ ಹಿಂದೂ ಸಮುದಾಯ ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ನೆರವೇರಿಸಿತು. ಅಲ್ಲದೇ ಇಡೀ ದೇವಸ್ಥಾನವನ್ನು ದೀಪಾಲಂಕಾರ ಮಾಡಿ ದೀಪಾವಳಿ ಹಬ್ಬವನ್ನು ಸಂಭ್ರಮಸಿದರು.
ನಿನ್ನೆ(ನ.14) ರಾತ್ರಿಯೇ ಸ್ಬಾಮಿ ನಾರಾಯಣ ದೇವಸ್ಥಾನವನ್ನು ದೀಪಾವಳಿಗೆ ಸಜ್ಜುಗೊಳಿಸಿದ ಕರಾಚಿಯ ಹಿಂದೂ ಸಮುದಾಯ, ಹಣತೆಗಳನ್ನು ಬೆಳಗುವ ಮೂಲಕ ದೀಪಾವಳಿಯನ್ನು ಬರಮಾಡಿಕೊಂಡಿತು.
ಬೆರಳೆಣಿಕೆಯಷ್ಟಿದ್ದರೂ ಬೆಟ್ಟದಷ್ಟು ಭರವಸೆ ಇಟ್ಟುಕೊಂಡು ಬಂದಿದ್ದ ಹಿಂದೂ ಸಮುದಾಯ, ದೀಪಾವಳಿ ಹಿನ್ನೆಲೆಯಲ್ಲಿ ಪರಸ್ಪರ ಬೆರೆತು ಹಬ್ಬವನ್ನು ಆಚರಿಸಿದ್ದು ವಿಶೇಷವಾಗಿತ್ತು.
ಇನ್ನು ದೀಪಾವಳಿ ಹಿನ್ನೆಲೆಯಲ್ಲಿ ಕರಾಚಿಯ ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಬಿಗಿ ಪೊಲೀಸ್ ಭಧ್ರತೆಯನ್ನು ಒದಗಿಸಲಾಗಿತ್ತು.