ಮನೋರಂಜನೆ

ಮುಂಬೈ ಪೊಲೀಸರು ಅತ್ಯಂತ ಕ್ರೂರಿಗಳು: ಅರ್ನಾಬ್ ಗೋಸ್ವಾಮಿ

Pinterest LinkedIn Tumblr


ಮುಂಬೈ: ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರು ಜಾಮೀನು ಕೋರಿ ಶನಿವಾರ ಬಾಂಬೆ ಹೈಕೋರ್ಟ್‌ ಅರ್ಜಿ ಸಲ್ಲಿಸಿದ್ದಾರೆ.

ನ್ಯಾಯಮೂರ್ತಿ ಎಸ್‌ಎಸ್ ಶಿಂಧೆ ಮತ್ತು ಎಂಎಂ ಕಾರ್ನಿಕ್ ಅವರನ್ನೊಳಗೊಂಡ ನ್ಯಾಯಪೀಠ ಅರ್ನಬ್ ಅರ್ಜಿ ವಿಚಾರಣೆ ನಡೆಸಲಿದೆ.

ನ್ಯಾಯಾಂಗ ಬಂಧನದಲ್ಲಿರುವ ತಮ್ಮ ಕಕ್ಷಿದಾರನ ಮೇಲೆ ಮುಂಬೈ ಪೊಲೀಸರು ಹಲ್ಲೆ ನಡೆಸಿದ್ದು, ಬೆನ್ನು ಮೂಳಗೆ ಗಾಯಗಳಾಗಿವೆ. ಪೊಲೀಸರು ಅತ್ಯಂತ ಕ್ರೂರಿಗಳು ಎಂದು ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ, ಗೋಸ್ವಾಮಿ ಪರ ವಕೀಲರು ಆರೋಪಿಸಿದ್ದಾರೆ.

“ಬಂಧನದ ಅವಧಿಯಲ್ಲಿ, ಪೊಲೀಸ್ ವ್ಯಾನ್‌ನಲ್ಲಿ ಮತ್ತು ಪೊಲೀಸರ ವಶದಲ್ಲಿದ್ದಾಗ, ನ್ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬೆನ್ನುಮೂಳೆಗೆ ಗಂಭೀರವಾದ ಗಾಯವಾಗಿತ್ತು ಮತ್ತು ಒಬ್ಬ ಪೊಲೀಸ್ ಅಧಿಕಾರಿ ನನ್ನ ಮೇಲೆ ಬೂಟ್‌ನಿಂದ ಹೊಡೆದಿದ್ದಾರೆ ಎಂದು ಗೋಸ್ವಾಮಿ ಜಾಮೀನು ಅರ್ಜಿಯಲ್ಲಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

2018ರಲ್ಲಿ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ಅವರ ತಾಯಿಯ ಆತ್ಮಹತ್ಯೆಗೆ ಅರ್ನಬ್ ಗೋಸ್ವಾಮಿ ಪ್ರಚೋದನೆ ನೀಡಿದ್ದಾರೆ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.

Comments are closed.