ಮನೋರಂಜನೆ

‘ಜೇಮ್ಸ್‌ ಬಾಂಡ್‌’, ನಟ ಶಾನ್‌ ಕಾನರಿ ನಿಧನ

Pinterest LinkedIn Tumblr

ವಾಷ್ಟಿಂಗನ್: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಜನಪ್ರಿಯ ‘ಜೇಮ್ಸ್‌ ಬಾಂಡ್‌’ ಸರಣಿ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಶಾನ್‌ ಕಾನರಿ ಶನಿವಾರ (ಆ.31) ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1962ರಿಂದ 1971ರವರೆಗೆ ಮೂಡಿಬಂದ 6 ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಶಾನ್‌ ಕಾನರಿ ಹೀರೋ ಆಗಿ ನಟಿಸಿದ್ದರು. ಆ ಮೂಲಕ ಅವರು ಸ್ಟಾರ್‌ ನಟನಾಗಿ ಮಿಂಚಿದರು. ‘ಜೇಮ್ಸ್‌ ಬಾಂಡ್‌’ ಸಿನಿಮಾಗಳ ಮೂಲಕ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.

ಜನಪ್ರಿಯ ‘ಜೇಮ್ಸ್‌ ಬಾಂಡ್‌’ ಸರಣಿ ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದ ಶಾನ್‌ ಕಾನರಿ ಶನಿವಾರ (ಆ.31) ಕೊನೆಯುಸಿರೆಳೆದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1962ರಿಂದ 1971ರವರೆಗೆ ಮೂಡಿಬಂದ 6 ಜೇಮ್ಸ್‌ ಬಾಂಡ್‌ ಸಿನಿಮಾಗಳಲ್ಲಿ ಶಾನ್‌ ಕಾನರಿ ಹೀರೋ ಆಗಿ ನಟಿಸಿದ್ದರು. ಆ ಮೂಲಕ ಅವರು ಸ್ಟಾರ್‌ ನಟನಾಗಿ ಮಿಂಚಿದರು.

ಜೇಮ್ಸ್‌ ಬಾಂಡ್‌ ಸಿರೀಸ್‌ನ ಮೊದಲ ಚಿತ್ರವಾಗಿ ಮೂಡಿಬಂದಿದ್ದ ‘Dr. No’ ಸಿನಿಮಾದಲ್ಲಿ ಶಾನ್‌ ಕಾನರಿ ಅವರು ಜೇಮ್ಸ್‌ ಬಾಂಡ್‌ ಪಾತ್ರ ಮಾಡಿದ್ದರು. ಈವರೆಗೂ ಬಾಂಡ್‌ ಪಾತ್ರವನ್ನು ಮಾಡಿದ ನಟರ ಪೈಕಿ ದಿ ಬೆಸ್ಟ್‌ ನಟ ಎಂದೇ ಅವರು ಅಭಿಮಾನಿಗಳ ಮನದಲ್ಲಿ ಸ್ಥಾನ ಪಡೆದುಕೊಂಡಿದ್ದರು. ಶಾನ್‌ ಕಾನರಿ ಅಗಲಿಕೆಗೆ ಜಗತ್ತಿನಾದ್ಯಂತ ಇರುವ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

‘ದಿ ಅನ್‌ಟಚಬಲ್ಸ್‌’ ಚಿತ್ರದಲ್ಲಿನ ಅಭಿನಯಕ್ಕಾಗಿ ಶಾನ್‌ ಕಾನರಿ ಅವರು 1988ರಲ್ಲಿ ಅತ್ಯುತ್ತಮ ಪೋಷಕ ನಟ ಆಸ್ಕರ್‌ ಪ್ರಶಸ್ತಿ ಪಡೆದುಕೊಂಡಿದ್ದರು. ಮೂರು ಬಾರಿ ‘ಗೋಲ್ಡನ್‌ ಬ್ಲೋಬ್‌’ ಅವಾರ್ಡ್‌ ಪಡೆದುಕೊಂಡಿದ್ದು ಅವರು ಹೆಚ್ಚುಗಾರಿಕೆ. ‘ಮರ್ಡರ್‌ ಆನ್‌ ದಿ ಓರಿಯಂಟ್‌ ಎಕ್ಸ್‌ಪ್ರೆಸ್‌’, ‘ದ ಮ್ಯಾನ್‌ ಹೂ ವುಡ್‌ ಬಿ ಕಿಂಗ್‌’, ‘ದ ನೇಮ್‌ ಆಫ್‌ ದ ರೋಸ್‌’ ಮುಂತಾದವು ಶಾನ್‌ ಕಾನರಿ ನಟನೆಯ ಇತರೆ ಪ್ರಮುಖ ಸಿನಿಮಾಗಳು.

ಶಾನ್‌ ಕಾನರಿ ಸೂಪರ್‌ ಹಿಟ್‌ ಸಿನಿಮಾಗಳು:
ಡಾಕ್ಟರ್‌ ನೋ
ಗೋಲ್ಡ್‌ ಫಿಂಗರ್‌
ಫ್ರಮ್‌ ರಷ್ಯಾ ವಿಥ್‌ ಲವ್‌
ಥಂಡರ್ ಬಾಲ್‌
ಯೂ ಓನ್ಲಿ ಲೀವ್‌ ಟ್ವೈಸ್‌
ಡೈಮಂಡ್ಸ್‌ ಆರ್‌ ಫಾರ್ ಎವರ್
ಇಂಡಿಯಾನಾ ಜೋನ್ಸ್‌ ಆ್ಯಂಡ್‌ ದ ಲಾಸ್ಟ್‌ ಕ್ರೂಸೆಡ್
ದ ಅನ್‌ಟಚಬಲ್ಸ್‌
ದ ರಾಕ್‌
ಎನ್‌ಟ್ರ್ಯಾಪ್‌ಮೆಂಟ್‌

Comments are closed.