ಮನೋರಂಜನೆ

ಸೀರೆಯುಟ್ಟು ಹಾಟ್​ ಲುಕ್​ನಲ್ಲಿ ‘ಬಸಣ್ಣಿ’ ಕ್ಲೀನ್​ ಬೋಲ್ಡ್..!

Pinterest LinkedIn Tumblr


ಸ್ಯಾಂಡಲ್​ವುಡ್​​​ ಬಸಣ್ಣಿ ತಾನ್ಯಾ ಹೋಪ್​​, ಗಾರ್ಜಿಯಸ್​​​ ಲುಕ್​​ನಿಂದ ಬಹುಭಾಷೆಯಲ್ಲಿ ಮಿಂಚಿ, ಸ್ಟಾರ್​​ ಹೀರೋಯಿನ್​​ ಆಗಿ ಮೆರೆಯುತ್ತಿದ್ದಾರೆ. ಸದ್ಯ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ತಾನ್ಯಾ ಸೀರೆ ಹುಟ್ಟಿಕೊಂಡು ಸಖತ್​ ಹಾಟ್​ ಲುಕ್​ನಲ್ಲಿ ಕ್ಯಾಮರ ಕಣ್ಣಿಗೆ ಸೆರೆಯಾಗಿದ್ದಾಳೆ. ಅದ್ರ ಝಲಕ್​​ ಇಲ್ಲಿದೆ ನೋಡಿ.

ತಾನ್ಯ ಹೋಪ್, ಸ್ಯಾಂಡಲ್​ವುಡ್​ನ ಗ್ಲಾಮರ್ ಗೊಂಬೆ, ತೆಳ್ಳಗೆ ಬೆಳ್ಳಗೆ ಬಳುಕು ಬಳ್ಳಿಯಂತಿರೋ ಚೆಲುವಿ. ಶಾರ್ಟ್​ ಟೈಮ್​ನಲ್ಲಿ ಹಿಟ್ ಪಡೆದ ಬ್ಯೂಟಿಫುಲ್ ಹೀರೋಯಿನ್​. ತನ್ಯಾ ಹೋಪ್ ಅನ್ನೋ ಚೆಂದುಳ್ಳಿ ಚೆಲುವೆ ಯಾರ್ ಅಂದ್ರೇ ಯಾರಿಗೆ ಗೊತ್ತಿರಲಿಲ್ಲ. ಅದ್ಯಾವಾಗ ಡಿಬಾಸ್ ದಚ್ಚು ಜೊತೆ ಬಸಣ್ಣಿ ಬಾ ಅಂತಾ ಯರಾಬಿರ್ರೀ ಕುಣಿದು, ಕುಪ್ಪಳಿಸಿದ್ಲೋ ಆಗ್ಲೇ ನೋಡಿ ಈಕೆ ಇಡೀ ಗಾಂಧಿನಗರಕ್ಕೆ ಇಂಟ್ರೂಡ್ಯೂಸ್ ಆಗಿದ್ದು.

ತನ್ಯಾ ಹೋಪ್ ಸದ್ಯ ಸೌತ್ ಜಗತ್ತಿನಲ್ಲಿ ಮಿಂಚುತ್ತಿರೋ ಬ್ಯೂಟಿ. ಸ್ಟಾರ್ ಹೀರೋಗಳ ಜೊತೆ ತೆರೆಮೇಲೆ ಡ್ಯುಯೇಟ್ ಹಾಡ್ತಿರೋ ಗ್ಲಾಮರ್ ಗೊಂಬೆ. ಸದ್ಯ ತನ್ಯಾ ಹೋಪ್ ರೆಡ್​ ಕಲರ್​ ಸೀರೆ ಹುಟ್ಟಿಕೊಂಡು ಸಖತ್ ಸಖತ್​ ಹಾಟ್​ ಹಾಟ್​ ಲುಕ್​ನಲ್ಲಿ ಫೋಟೋಶೂಟ್​ ಮಾಡಿಸಿದ್ದಾರೆ. ಅಷ್ಟೇ ಅಲ್ಲದೆ ಬಸಣ್ಣಿಯ ಈ ಅವತಾರ ನೋಡಿ ಫ್ಯಾನ್ಸ್ ಕ್ಲೀನ್​ ಬೋಲ್ಡ್ ಆಗಿದ್ದಾರೆ.

ತಾನ್ಯ ಹೋಪ್​ ಅಮರ್ ಸೂಪರ್ ಸಕ್ಸಸ್​ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾಳೆ. ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಬಸಣ್ಣಿ ಫುಲ್ ಮಿಂಚಿತ್ತಿದ್ದಾಳೆ. ಏನಿವೇ ಅನ್​ಲಾಕ್​ಡೌನ್​ ಬಳಿಕ ತಾನ್ಯಾ ಸೀರೆ ಉಟ್ಟಿಕೊಂಡು ಹೀಗೆ ಸಖತ್ ಗ್ಲಾಮರ್​ ಆಗಿ ಫೋಟೋಶೂಟ್​ ಮಾಡಿಸಿದ್ದು, ಪಡ್ಡೆ ಹುಡುಗರು ಬಸಣ್ಣಿಯ ಲುಕ್ ಕಂಡು ಕಳೆದೇ ಹೋಗ್ತಿದ್ದಾರೆ.

Comments are closed.