ಮನೋರಂಜನೆ

ಇತ್ತೀಚೆಗೆ ವಿವಾಹವಾಗಿದ್ದ 3ನೇ ಪತಿಯನ್ನು ಮನೆಯಿಂದ ಹೊರಗೆಹಾಕಿದ ಬಿಗ್ ಬಾಸ್ ಸ್ಪರ್ಧಿ, ನಟಿ ವನಿತಾ

Pinterest LinkedIn Tumblr


ನಟಿ, ಬಿಗ್ ಬಾಸ್ ಸ್ಪರ್ಧಿ ವನಿತಾ ವಿಜಯ್‌ಕುಮಾರ್ ಅವರು ಇತ್ತೀಚೆಗೆ ವಿವಾಹವಾಗಿದ್ದ 3ನೇ ಪತಿ ಪೀಟರ್ ಪೌಲ್ ಅವರನ್ನು ಮನೆಯಿಂದ ಹೊರಗಡೆ ಕಳಿಸಿದ್ದಾರೆ ಎಂಬ ಗಾಸಿಪ್ ಹರಡುತ್ತಿದೆ. ಇದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ನಿಜಕ್ಕೂ ನಡೆದಿದ್ದೇನು?
ನಿರ್ಮಾಪಕ ರವೀದ್ರ ಚಂದ್ರಶೇಖರನ್ ಅವರು ಫೇಸ್‌ಬುಕ್‌ನಲ್ಲಿ ವನಿತಾ ಅವರು ಪೀಟರ್‌ ಪೌಲ್ ಅವರನ್ನು ಮನೆಯಿಂದ ಹೊರಗೆ ಹಾಕಿರುವ ವಿಷಯವನ್ನು ಖಚಿತಪಡಿಸಿದ್ದಾರೆ. 40ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲು ಚೆನ್ನೈನಿಂದ ಗೋವಾಗೆ ಮಕ್ಕಳು, ಪೀಟರ್ ಪೌಲ್ ಜೊತೆ ವನಿತಾ ಹೋಗಿದ್ದರು. ಪೀಟರ್ ಪೌಲ್ ವನಿತಾ ಜೊತೆಗೆ ಅನುಚಿತವಾಗಿ ನಡೆದುಕೊಂಡರಂತೆ. ಚೆನ್ನೈಗೆ ಬರುವವರೆಗೂ ಅವರು ಮದ್ಯದ ನಶೆಯಲ್ಲಿದ್ದರು. ಇದನ್ನು ಸಹಿಸದ ವನಿತಾ ಅವರನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನಲಾಗಿದೆ.

2 ಬಾರಿ ಪೀಟರ್‌ನನ್ನು ಕಳೆದುಕೊಳ್ಳುತ್ತಿದ್ದೆ: ವನಿತಾ
‘ಯಾವುದು ಕೂಡ ನಮ್ಮನ್ನು ಬೇರೆ ಮಾಡದು ಅಂತ ನಂಬ್ತೀನಿ. ಒಂದು ತಿಂಗಳೊಳಗೆ 2 ಬಾರಿ ಆರೋಗ್ಯ ಹಾಳಾಗಿ ಅವರನ್ನು ಕಳೆದುಕೊಳ್ಳುತ್ತೇನೆ ಎಂದುಕೊಂಡಿದ್ದೆ. ಇದು ತುಂಬ ಹಿಂಸೆ ನೀಡಿತು. ಈ ವರ್ಷ ಎರಡು ಬಾರಿ ಕೂಡ ದೇವರು ಆತನನ್ನು ಗುಣಮುಖರನ್ನಾಗಿಸಿದ್ದಕ್ಕೆ ದೇವರಿಗೆ ಧನ್ಯವಾದ ಹೇಳುತ್ತೇನೆ. ನೀವು ಪ್ರೀತಿಸುತ್ತಿರುವವರ ಆರೋಗ್ಯ ಹಾಳಾದಾಗ ನಿಮ್ಮ ಜೀವನ ಕೂಡ ಬದಲಾಗುತ್ತದೆ. ನಾನು ಅವರ ಬಗ್ಗೆ ಯೋಚಿಸಬೇಕು, ಕಾಳಜಿ ಮಾಡಬೇಕು. ಅವರನ್ನು ಕಳೆದುಕೊಂಡೆ ತಡೆದುಕೊಳ್ಳುವ ಶಕ್ತಿ ನನಗಿಲ್ಲ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ ಕೆಲವರು ದುಡ್ಡು, ಹೆಸರು ಮಾಡುತ್ತಿದ್ದಾರೆ. ಬೇರೆಯವರ ನೋವಿನಲ್ಲಿ ಅವರು ಖುಷಿ ಪಡ್ತಾರೆ. ನಾನು ಪ್ರಾಮಾಣಿಕಳು, ಎಲ್ಲವನ್ನೂ ಹೇಳುತ್ತೇನೆ’ ಎಂದು ವನಿತಾ ಟ್ವೀಟ್ ಮಾಡಿ ಹೇಳಿದ್ದಾರೆ.

ನಾನು ಲವ್ ವಿಚಾರಕ್ಕೆ ಹೆದರೋದು: ವನಿತಾ ವಿಜಯ್‌ಕುಮಾರ್
‘ನಾನು ಏನನ್ನೂ ಮುಚ್ಚಿಟ್ಟಿಲ್ಲ, ಮುಚ್ಚಿಡಲು ಏನೂ ಇಲ್ಲ. ಇದನ್ನೇ ಉಪಯೋಗಿಸಿಕೊಳ್ಳೋದು ಒಳ್ಳೆಯದಲ್ಲ. ನಾನು ನನ್ನ ಲೈಫ್‌ನಲ್ಲಿ ದೊಡ್ಡ ಸವಾಲು ಎದುರಿಸುತ್ತಿದ್ದೇನೆ. ಸಾವು-ಬದುಕಿನ್ನು ನಾನು ಬದಲಾಯಿಸಲಾಗದ ಕಾರಣ ನಾನು ನನ್ನ ಹತ್ತಿರ ಆದಷ್ಟು ಇದನ್ನು ಸರಿಮಾಡಲು ಪ್ರಯತ್ನಪಡ್ತೀನಿ. ನಾನು ತುಂಬ ನೋವಿನಲ್ಲಿದ್ದೇನೆ, ಹೃದಯ ಭಾರವಾಗಿದೆ. ನಾನು ಲವ್ ವಿಚಾರಕ್ಕೆ ಮಾತ್ರ ಹೆದರೋದು. ನನ್ನ ಮಕ್ಕಳು, ಕೆಲಸಕ್ಕೆ ತೊಂದರೆಯನ್ನುಂಟು ಮಾಡಿಕೊಳ್ಳದೆ ನಾನು ಇದನ್ನು ಎದುರಿಸಬೇಕಿದೆ’ ಎಂದು ವನಿತಾ ವಿಜಯ್‌ಕುಮಾರ್ ಹೇಳಿದ್ದಾರೆ.

ಎಲ್ಲವನ್ನು ಎದುರಿಸುತ್ತೇನೆ: ವನಿತಾ
‘ನಾನೇನೂ ತಪ್ಪು ಮಾಡಿಲ್ಲ. ಫೇಕ್ ನ್ಯೂಸ್ ನಂಬಬೇಡಿ. ನನ್ನ ಕನಸನ್ನು ತಲುಪುವ ಹಾದಿಯಲ್ಲಿದ್ದೇನೆ. ನನ್ನ ಲೈಫ್ ಬಗ್ಗೆ ನಾನೇನೂ ಸ್ಪಷ್ಟನೆ ನೀಡುವ ಅಗತ್ಯವಿಲ್ಲ. ನನ್ನ ಗಂಡನಿಗೆ ಹಿಂಸೆ ಕೊಡುವ ಚಾಳಿ ನನಗಿಲ್ಲ. ನಾನು ಗಟ್ಟಿಗಿತ್ತಿ. ಹೀಗಾಗಿ ಎಲ್ಲವನ್ನು ಎದುರಿಸುತ್ತೇನೆ. ಯಾರ ಅನುಕಂಪವೂ ನನಗೆ ಬೇಕಿಲ್ಲ’ ಎಂದು ವನಿತಾ ಹೇಳಿದ್ದಾರೆ.

Comments are closed.