
ಬೆಂಗಳೂರು: ನಟಿ ಮೇಘನಾ ರಾಜ್ ಮನೆಯವರು ಪುಟ್ಟ ಕಂದನ ಬರುವಿಕೆಗಾಗಿ ಬಹಳ ಸಂಭ್ರಮದಿಂದ ತಯಾರಿ ಮಾಡಿಕೊಳ್ಳುತ್ತಿವೆ.
ಧೃವ ಸರ್ಜಾ ಪೊಗರು ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದು. ಮತ್ತೆರಡು ಸಿನಿಮಾಗಳಲ್ಲಿ ತೊಡಗಿಕೊಂಡಿರುವುದನ್ನು ಘೋಷಿಸಿದ್ದು ಅದ್ಧೂರಿ ನಿರ್ದೇಶಕ ಎ ಪಿ ಅರ್ಜುನ್ ಅವರ ಜೊತೆಗೆ ಇನ್ನೊಂದು ಸಿನಿಮಾ ಮಾಡುವುದಾಗಿ ಹೇಳಿದ್ದಾರೆ.
ಮೇಘನಾ ರಾಜ್ ಅವರ ಅಣ್ಣ ಕನ್ನಡ ಹಾಗೂ ತಮಿಳು ನಟ ತೇಜ್ ಕೂಡಾ ಸಂತೋಷದ ಸುದ್ದಿಯೊಂದನ್ನ ಶೇರ್ ಮಾಡಿದ್ದಾರೆ. ಮೇಘನಾ ರಾಜ್ ಸೀಮಂತ ಸಮಾರಂಭದ ಮುಗಿದ ನಂತರ, ತೇಜ್ ಅವರು ತಮ್ಮ ಸಿನಿಮಾಗಳ ಕೆಲಸಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ಖ್ಯಾತಿಗಳಿಸಿರುವ ತೇಜ್ ಕನ್ನಡದಲ್ಲಿ ಬಾಲನಟನಾಗಿ ಶಂಕರ್ ನಾಗ್ ಅವರ ಜೊತೆ ಹಾಗೂ ರಾಜ್ ಕುಮಾರ್ ಅವರ ಜೊತೆ ಅಭಿನಯಿಸಿದ್ದಾರೆ.
ಕನ್ನಡದಲ್ಲಿನ ತಮ್ಮ ರಾಮಾಚಾರಿ 2.0 ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದು ಪಾತ್ರದ ಆಯ್ಕೆ ನಡೆಯುತ್ತಿದೆ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಅಶ್ವಿನ್ ಹಾಸನ್, ಕರ್ವ ಖ್ಯಾತಿಯ ವಿಜಯ್ ಚೆಂದೂರ್, ಪ್ರಭು ಸೂರ್ಯ, ಶಿಲ್ಪಾ ಶೆಟ್ಟಿ, ಸಂದೀಪ್ ಮಲಾನಿ, ಕೃಷ್ಣ ಕುಮಾರ್ ಹಾಗೂ ಸುಧಾರಾಣಿ ಅವರೂ ಸಹ ಸಿನಿಮಾ ತಂಡದಲ್ಲಿರುವ ಸಾಧ್ಯತೆ ಇದೆ ಎಂದು ತಮ್ಮ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.
ಬಹು ದೊಡ್ಡ ತಾರಾ ಬಳಗವನ್ನೇ ಹೊಂದಿರುವ ರಾಮಾಚಾರಿ 2.0 ಸಿನಿಮಾ ಸದ್ಯದಲ್ಲಿಯೇ ಚಿತ್ರೀಕರಣ ಶುರು ಪ್ರಾರಂಭ ಮಾಡುತ್ತಿದ್ದು. 2021ಕ್ಕೆ ತೆರೆ ಮೇಲೆ ಮಿಂಚಲಿದೆ ಎಂದು ತಿಳಿದು ಬಂದಿದೆ. ನಟನೆ ಮಾತ್ರವಲ್ಲದೇ ನಿರ್ದೇಶನದ ಕಡೆಯೂ ಆಸಕ್ತಿ ಇರುವ ತೇಜ್ ಅವರು ಮುಂದಿನ ದಿನಗಳಲ್ಲಿ ಧೃವ ಸರ್ಜಾ ಅವರಿಗೆ ಆಕ್ಷನ್ ಕಟ್ ಹೇಳುವ ಪ್ಲಾನ್ನಲ್ಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
Comments are closed.