ಮನೋರಂಜನೆ

ಚಿತ್ರ ಸಾಹಿತಿ ಕೆ. ಕಲ್ಯಾಣ್ ಪತ್ನಿಗೆ ಮನೆ ಬಾಡಿಗೆ ಕೊಟ್ಟಿದ್ದ ಮಂತ್ರವಾದಿ ಯಾರು?

Pinterest LinkedIn Tumblr


ಬಾಗಲಕೋಟೆ: ಚಿತ್ರ ಸಾಹಿತಿ ಕೆ ಕಲ್ಯಾಣ್ ಹಾಗೂ ಪತ್ನಿ ಮಧ್ಯೆ ಬಿರುಕು ತಂದಿರುವ ಶಿವಾನಂದ ವಾಲಿ ಮೂಲತಃ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ನಿವಾಸಿ. ತನ್ನ ಹೆಂಡತಿ ಮನೆ ಬೀಳಗಿ ತಾಲೂಕಿನ ಬಾಡಗಿ ಬೂದಿಹಾಳ ಎಸ್ ಜೆ ಗ್ರಾಮದಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದನು. ಈತ ಮಂತ್ರ ತಂತ್ರದಲ್ಲಿ ಪ್ರಸಿದ್ಧಿ ಪಡೆದಿದ್ದ ಎನ್ನಲಾಗಿದೆ. ಮೂಲತಃ ಈತ ಕಾರು ಚಾಲಕ. ಕೆ ಕಲ್ಯಾಣ್ ಪತ್ನಿ ಈತನ ತಂತ್ರಕ್ಕೆ ಮಾರುಹೋಗಿರುವ ಅನುಮಾನ ದಟ್ಟವಾಗಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ಕೆಲ ತಿಂಗಳಿಂದ ಕೆ ಕಲ್ಯಾಣ್ ಪತ್ನಿ ಅಶ್ವಿನಿ ವಾಸವಾಗಿದ್ದಳು ಎನ್ನುವುದು ಬೆಳಕಿಗೆ ಬಂದಿದೆ.

ಬೆಳಗಾವಿಯಲ್ಲಿ ಕೆ ಕಲ್ಯಾಣ್ ತನ್ನ ಪತ್ನಿ ಕಿಡ್ನಾಪ್ ಆಗಿದ್ದಾಳೆ. ಶಿವಾನಂದ ವಾಲಿ ಮಂತ್ರ ತಂತ್ರದಿಂದ ಹಣ ,ಆಸ್ತಿ ಬರೆಯಿಸಿಕೊಂಡಿದ್ದಾನೆ ಎಂದು ದೂರು ದಾಖಲಾಗುತ್ತಿದ್ದಂತೆ ಶಿವಾನಂದ ವಾಲಿ ಪತ್ತೆಗೆ ಬೆಳಗಾವಿ ಪೊಲೀಸರು ಮುಂದಾಗಿದ್ದರು‌. ಈ ವೇಳೆ ಬೀಳಗಿ ಪೊಲೀಸರ ಸಹಾಯದಿಂದ ಶಿವಾನಂದ ವಾಲಿ, ಬೀಳಗಿ ಪಟ್ಟಣದ ಬಾಡಿಗೆ ಮನೆಯಲ್ಲಿ ಅಶ್ವಿನಿ ಪತ್ತೆ ಹಚ್ಚಿ ಬೀಳಗಿ ಪಟ್ಟಣದ ಬಾಡಿಗೆ ಮನೆಯಿಂದಲೇ ಅಶ್ವಿನಿ, ಶಿವಾನಂದ ವಾಲಿ ವಶಕ್ಕೆ ಪಡೆದು ಬೆಳಗಾವಿ ಪೊಲೀಸರು ಕರೆದೊಯ್ದಿದ್ದಾರೆ ಎನ್ನುವುದು ಪೊಲೀಸ್ ಮೂಲಗಳ ಮಾಹಿತಿ.

ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯ ಬಿರುಕಿಗೆ ಶಿವಾನಂದ ವಾಲಿ, ಹಾಗೂ ಜ್ಯೋತಿ ಕುಲಕರ್ಣಿ ಎನ್ನುವುದು ತನಿಖೆಯಿಂದ ಹೊರಬರುತ್ತಿದ್ದು. ಶಿವಾನಂದ ವಾಲಿ ಯಾರು,ಈತನ ಹಿನ್ನೆಲೆಯೇನು!? ಎನ್ನುವ ಪ್ರಶ್ನೆಗೆ, ಶಿವಾನಂದ ತಂದೆ ಬಸಪ್ಪ ವಾಲಿ ಮೂಲತಃ ಬಾಗಲಕೋಟೆ ಜಿಲ್ಲೆ ಮುಧೋಳದವನು. ತನ್ನ ಪತ್ನಿ ಊರು ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಬಾಡಗಿ ಬೂದಿಹಾಳ ಎಸ್ ಜೆ ಗ್ರಾಮದಲ್ಲಿ ಬಂದು ಹಲವು ವರ್ಷಗಳಿಂದ ವಾಸವಾಗಿದ್ದು. ಬೂದಿಹಾಳ ಎಸ್ ಜಿ ಗ್ರಾಮದಲ್ಲಿ ಕಿರಾಣಿ ಅಂಗಡಿಯಿಟ್ಟುಕೊಂಡು ಜೀವನ ಸಾಗಿಸುತ್ತಿದ್ದರು. ಜೊತೆಗೆ ಆರಂಭದಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ. ಶಿವಾನಂದ ವಾಲಿಗೆ ಓರ್ವ 13 ವರ್ಷದ ಬುದ್ದಿಮಾಂದ್ಯ ಪುತ್ರ, ಪತ್ನಿ ಮುಗ್ಧೆಯಾಗಿದ್ದು. ಈತನ ಪ್ರಮುಖ ಕಾಯಕ ಸರ್ಕಾರಿ ನೌಕರಿ ಕೊಡಿ‌ಸ್ತಿನಿ ಎಂದು ಹಣ ವಸೂಲಿ, ಮಾಟ ಮಂತ್ರ,ನಿಧಿ ತೆಗೆಯುವಂತದ್ದು, ಜೊತೆಗೆ ವಶೀಕರಣದ ಮೂಲಕ ಈತ ವಂಚಿಸಿದ್ದಾನೆ. ಆದರೆ ಪೊಲೀಸರ ಮುಂದೆ ತಾನೊಬ್ಬ ಕಾರು ಚಾಲಕನೆಂದು ಹೇಳಿಕೊಂಡಿದ್ದಾನೆ.

ಇನ್ನು ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಜ್ಯೋತಿ ಕುಲಕರ್ಣಿ ಹಾಗೂ ಶಿವಾನಂದ ವಾಲಿ ಇಬ್ಬರು ಸೇರಿ ವಂಚಿಸಿರೋದು ಬೆಳಕಿಗೆ ಬಂದಿದ್ದು.ಇದರ ಮೂಲಕ ಸಾಕಷ್ಟು ಸಂಪತ್ತು ಮಾಡಿದ್ದಾನೆ ಎನ್ನಲಾಗಿದೆ. ಸದ್ಯ 10ಕ್ರೂಸರ್, ಕಾರು, ಬೈಕ್ ಜೊತೆಗೆ ಪತ್ನಿ ಹೆಸರಲ್ಲಿ ಬೂದಿಹಾಳ ಗ್ರಾಮದಲ್ಲಿ ಮನೆ ಹೊಂದಿದ್ದಾನೆ. ಮುಧೋಳ, ಬೀಳಗಿಯಲ್ಲಿ ಕ್ರೂಸರ್ ಬಾಡಿಗೆ ಮೇಲೆ ಬಿಟ್ಟಿದ್ದಾನೆ ಎನ್ನುವ ಮಾಹಿತಿ ದೊರೆತಿದೆ.

ಇನ್ನು ತಿಂಗಳಿಗೊಂದರಂತೆ ಹೊಸ ಬೈಕ್ ಖರೀದಿಸುತ್ತಿದ್ದನಂತೆ. ಈತನ ಬಗ್ಗೆ ಮಾಹಿತಿ ನೀಡುವುದಕ್ಕೆ ಗ್ರಾಮದ ಜನ ಹಿಂದೇಟು ಹಾಕುತ್ತಿದ್ದಾರೆ‌. ಯಾಕೆಂದರೆ ಈ ಹಿಂದೆ ಈತನ ಬಗ್ಗೆ ಹೇಳಿದ್ದಕ್ಕೆ ಮಂತ್ರ ತಂತ್ರದಿಂದ ಅವರಿಗೆ ಹೆದರಿಸಿದ್ದಾನಂತೆ. ಹೀಗಾಗಿ ಈತ ಖತರ್ನಾಕ್ ಆಸಾಮಿ. 2017ರಲ್ಲಿ ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ನೌಕರಿ ಕೊಡಿಸುವುದಾಗಿ ವಂಚನೆ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ, ಹೊರಬಂದಿದ್ದಾನೆ. ಶಿವಾನಂದ ವಾಲಿ ವಿರುದ್ಧ ಬೆಂಗಳೂರಿನ ಸಿಸಿಬಿಯಲ್ಲೂ ವಂಚನೆ ಕೇಸ್ ದಾಖಲಾಗಿವೆ. ಆದರೆ ಶಿವಾನಂದ ವಾಲಿ ವಿರುದ್ಧ ಬೀಳಗಿ ಪೊಲೀಸ್ ಠಾಣೆಯಲ್ಲಿ ವಂಚನೆ, ಮಾಟ ಮಂತ್ರ, ನಿಧಿ ಸಂಗ್ರಹದ ಬಗ್ಗೆ ಕೇಸ್ ದಾಖಲು ಆಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಒಟ್ಟಿನಲ್ಲಿ ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವಾನಂದ ವಾಲಿ ಜಾಡು ಬೆನ್ನು ಹತ್ತಿದ್ದಾರೆ ಬೆಳಗಾವಿ ಪೊಲೀಸರು. ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯ ಬಿರುಕು ಪ್ರಕರಣದಲ್ಲಿ ಶಿವಾನಂದ ವಾಲಿ ಕೈಚಳಕವಿರುವುದು ಸ್ಪಷ್ಟವಾಗಿದೆ.

Comments are closed.