ರಾಷ್ಟ್ರೀಯ

ರೋಗ ನಿರೋಧಶಕ್ತಿ ಹೆಚ್ಚಿಸಲು ಕೊವಾಕ್ಸಿನ್ ನೊಂದಿಗೆ ವಿರೊವಾಕ್ಸ್: ಭರತ್ ಬಯೋಟೆಕ್

Pinterest LinkedIn Tumblr


ಹೈದರಾಬಾದ್: ರೋಗ ನಿರೋಧ ಶಕ್ತಿ ವರ್ಧನೆಗೆ ಆಲ್ಹೈಡ್ರಾಕ್ಸಿಕ್ವಿಮ್- IIನ್ನು ಮಾನವ ಪ್ರಯೋಗಕ್ಕೆ ಬಳಸಿಕೊಳ್ಳಲಾಗುವುದು ಎಂದು ಕೊವಾಕ್ಸಿನ್ ಎಂಬ ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಹೈದರಾಬಾದ್ ಮೂಲದ ಭರತ್ ಬಯೋಟೆಕ್ ಫಾರ್ಮಕ್ಯುಟಿಕಲ್ ಸಂಸ್ಥೆ ತಿಳಿಸಿದೆ.

ಕನ್ಸಾಸ್ ಮೂಲದ ವಿರೊವಾಕ್ಸ್ ಎಲ್ ಎಲ್ ಸಿ ಜೊತೆಗೆ ಪರವಾನಗಿ ಒಪ್ಪಂದದಡಿಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಭರತ್ ಬಯೋಟೆಕ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಕೊವಾಕ್ಸಿನ್ ಎನ್ನುವುದು ಎಸ್‌ಎಆರ್ ಎಸ್-ಕೋವಿ -2 ವೈರಸ್‌ನಿಂದ ಪಡೆದ ನಿಷ್ಕ್ರಿಯ ಲಸಿಕೆಯಾಗಿದ್ದು, ಇದನ್ನು ಭಾರತೀಯ ವೈರಾಲಜಿ ಸಂಶೋಧನಾ ಸಂಸ್ಥೆಯಾದ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ನಲ್ಲಿ ಪ್ರತ್ಯೇಕಿಸಲಾಗಿದೆ.ನಿಷ್ಕ್ರಿಯಗೊಳಿಸಿದ ವೈರಸ್ ಅನ್ನು ವಿರೊವಾಕ್ಸ್ ನೊಂದಿಗೆ ಲಸಿಕೆ ಉತ್ಪಾದಿಸಲು ಬಳಸಲಾಗಿದೆ.

ಭರತ್ ಬಯೋಟೆಕ್ ಪ್ರಸ್ತುತ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದ ನಂತರ ಕೊವಾಕ್ಸಿನ್‌ನ ಎರಡನೇ ಹಂತದ ಮಾನವ ಪ್ರಯೋಗಗಳನ್ನು ನಡೆಸುತ್ತಿದೆ.

ಭರತ್ ಬಯೋಟೆಕ್ ಜೊತೆ ಪಾಲುದಾರರಾಗಲು ಸಂತೋಷವಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಬೆಂಬಲದಿಂದಾಗಿ ಇದು ಸಾಧ್ಯವಾಗಿದೆ ಎಂದು ವಿರೋವಾಕ್ಸ್ ಸಂಸ್ಥಾಪಕ ಸುನಿಲ್ ಡೇವಿಡ್ ಹೇಳಿದ್ದಾರೆ.

Comments are closed.