ಮನೋರಂಜನೆ

ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ರನ್ನು ದೊಡ್ಡ ಸ್ರ್ರೀವಾದಿ ಎಂದು ಬಣ್ಣಿಸಿದ ನಟಿ ತಾಪ್ಸಿ

Pinterest LinkedIn Tumblr


ಮುಂಬೈ: ಬಾಲಿವುಡ್​ ಚಿತ್ರ ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ಪಾಯಲ್​ ಘೋಶ್​ ಮೀಟೂ ಆರೋಪದ ಬೆನ್ನಲ್ಲೇ ನಟಿಯ ಪರವಾಗಿ ನಿಂತ ಕಂಗನಾ, ಅನುರಾಗ್​ ಕಶ್ಯಪ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇಂತಹ ಸಮಯದಲ್ಲಿ ನಟಿ ತಾಪ್ಸಿ, ಅನುರಾಗ್​ ಅವರನ್ನು ದೊಡ್ಡ ಸ್ತ್ರೀವಾದಿ ಎಂದು ಬಣ್ಣಿಸಿದ್ದಾರೆ.

ತಾಪ್ಸಿ ಈ ಹಿಂದೆ ಅನುರಾಗ್​ ಕಶ್ಯಪ್​ ನಿರ್ದೇಶನದಲ್ಲಿ ‘ಮನ್​ಮರ್ಜಿಯಾನ್​’ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಸಂದರ್ಭದಲ್ಲಿ ಒಂದು ಫೋಟೋ ಶೇರ್​ ಮಾಡಿಕೊಂಡಿರುವ ತಾಪ್ಸಿ, ಅನುರಾಗ್​ ಕಶ್ಯಪ್​ ಅವರನ್ನು ಸ್ತ್ರೀವಾದಿ ಎಂದಿದ್ದಾರೆ ಮತ್ತು ಈ ಮೂಲಕ ಅನುರಾಗ್​ ಹಾಗೆ ಕೆಟ್ಟದಾಗಿ ನಡೆದುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

‘ನನಗೆ ಗೊತ್ತಿರುವ ದೊಡ್ಡ ಸ್ತ್ರೀವಾದಿ ಎಂದರೆ ಅದು ಅನುರಾಗ್​. ಪ್ರತಿ ಚಿತ್ರದಲ್ಲೂ ಮಹಿಳೆಯರ ಪರವಾಗಿ ನಿಂತವರು ನೀವು. ನಿಮ್ಮ ಇನ್ನೊಂದು ಚಿತ್ರದಲ್ಲಿ ನಟಿಸುವ ಮತ್ತು ಅದರಲ್ಲೂ ಒಬ್ಬ ದಿಟ್ಟ ಮಹಿಳೆಯರ ಪಾತ್ರವನ್ನು ಪ್ರತಿನಿಧಿಸುವ ಅವಕಾಶ ನನಗೆ ಸಿಗಲಿ’ ಎಂದು ತಾಪ್ಸಿ ಬರೆದುಕೊಂಡಿದ್ದಾರೆ.

Comments are closed.