ಮನೋರಂಜನೆ

ಸಾರಾ ಅಲಿ ಖಾನ್ ಳಿಂದ ಮಾದಕ ಪದಾರ್ಥ ಪಡೆದಿದ್ದಳಂತೆ ರಿಯಾ ಚಕ್ರವರ್ತಿ

Pinterest LinkedIn Tumblr


ನವದೆಹಲಿ:  ಇಲ್ಲಿಯವರೆಗೆ ಡ್ರಗ್ಸ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿಯ ಜೊತೆಗೆ ಸಂಬಂಧ ಹೊಂದಿರುವ ಬಹುತೇಕ ಪೆಡ್ಲರ್ ಗಳನ್ನೂ ಬಂಧಿಸಲಾಗಿದೆ. ಇದೀಗ ಸಾರಾ ಅಲಿ ಖಾನ್‌ ಜೊತೆಗೆ ಸಂಪರ್ಕ ಹೊಂದಿರುವ ಡ್ರಗ್ ಪೆಡ್ಲರ್ ಗಳ ಬಂಧನಕ್ಕೆ ಜಾಲ ಬೀಸಲಾಗಿದೆ.

ರಿಯಾ ಚಕ್ರವರ್ತಿಯ ಜೊತೆಗೆ ಸಂಪರ್ಕ ಹೊಂದಿರುವ ಬಹುತೇಕ ಮಾದಕ ಪದಾರ್ಥ ಸಪ್ಲೈ ಮಾಡುವ ಪೆಡ್ಲರ್ ಗಳನ್ನು ಬಂಧಿಸಲಾಗಿದೆ. ರಿಯಾ ಹಾಗೂ ಸಾರಾ ಹಲವು ಡ್ರಗ್ಸ ಪೆಡ್ಲರ್ ಗಳ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಇಲ್ಲಿ ಶಾಕಿಂಗ್ ವಿಷಯ ಎಂದೆಂದರೆ ಖುದ್ದು ರಿಯಾ.. ಸಾರಾ ಬಳಿ ಹಲವು ಬಾರಿ ಡ್ರಗ್ಸ್ ಪಡೆದುಕೊಂಡಿದ್ದಾಳೆ. ರಿಯಾ ಸಂಪರ್ಕದಲ್ಲಿರುವ ಪೆಡ್ಲರ್ ಗಳನ್ನೂ ಹೊರತುಪಡಿಸಿ ಸಾರಾ ತನ್ನದೇ ಆದ ಡ್ರಗ್ಸ್ ಪೆಡ್ಲರ್ ಹೊಂದಿದ್ದಾಳೆ. ಹೀಗಾಗಿ ಸಾರಾ ತನ್ನ ಡ್ರಗ್ಸ್ ಪೆಡ್ಲರ್ ನಿಂದ ರಿಯಾಗೆ ಪ್ರತ್ಯೇಕ ಡ್ರಗ್ಸ್ ಕೊಡಿಸಿದ್ದಳು ಮತ್ತು ರಿಯಾ ಅದನ್ನು ಸುಶಾಂತ್ ಸಿಂಗ್ ವರೆಗೆ ತಲುಪಿಸಿದ್ದಳು ಎನ್ನಲಾಗಿದೆ.

ರಿಯಾ ಹಾಗೂ ಸಾರಾ ಇಬ್ಬರಿಗೂ ಕೂಡ ಯಾವ ಯಾವ ಡ್ರಗ್ಸ್ ಪೆಡ್ಲರ್ ಗಳು ಡ್ರಗ್ಸ್ ನೀಡುತ್ತಿದ್ದರು ಅವರ ಹುಡುಕಾಟದಲ್ಲಿ ಇದೀಗ NCB ಅಧಿಕಾರಿಗಳು ತೊಡಗಿದ್ದಾರೆ.

ವಿಡಿಯೋ ಕಾನ್ಫೆರೆನ್ಸಿಂಗ್ ಮೂಲಕ ಈ ಆರೋಪಿಗಳನ್ನು ಮುಂಬೈ ನ NCB ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮುಂಬೈನಲ್ಲಿ ಒಟ್ಟು ಐದು ಹಾಗೂ ಗೋವಾದಲ್ಲಿ ಓರ್ವ ಡ್ರಗ್ ಪೆಡ್ಲರ್ ನನ್ನು ಬಂಧಿಸಲಾಗಿದೆ. ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಇವರಲ್ಲಿ ಕರಂಜೀತ್, ಡ್ವೇನ್ ಫರ್ನಾಂಡಿಸ್, ಅಂಕುಶ ಅರೆಂಜಾ ಶಾಮೀಲಾಗಿದ್ದಾರೆ.

Comments are closed.