
ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ನಟಿ ರಾಗಿಣಿ ಜೈಲೂಟ ತಿನ್ನುತ್ತಿದ್ದಾರೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ರಾಗಿಣಿ ನಟಿಸಿದ್ದಾರೆ. ಆದ್ರೆ ಆ ಒಂದು ಸಿನಿಮಾ ಇಂದು ಬಾಲಿವುಡ್ ಅಂಗಳದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದೆ. ಯಾವುದು ಆ ಸಿನಿಮಾ..? ಹೀಗ್ಯಾಕೆ ಅದಕ್ಕೆ ಬೇಡಿಕೆ ಬಂತು ಅನ್ನೋದರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಡ್ರಗ್ಸ್ ದಂಧೆಯಲ್ಲಿ ಈಗಾಗಲೇ ನಟಿ ರಾಗಿಣಿ ಪೊಲೀಸರ ಅತಿಥಿಯಾಗಿದ್ದಾರೆ. ಪೊಲೀಸರಿಗೆ ಸೆರೆಯಾಗುವುದಕ್ಕೂ ಮುನ್ನ ಸುಮಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಂದೇನು, ಕೊಟ್ಟ ಹಣದ ಕಥೆಯೇನು ಎಂಬುದು ನಿರ್ಮಾಪಕರ ಚಿಂತೆಯಾಗಿದೆ. ಆದ್ರೆ ಇದೇ ಸಮಯದಲ್ಲಿ ಬಾಲಿವುಡ್ನಲ್ಲಿ ರಾಗಿಣಿಗೆ ಬೇಡಿಕೆ ಹೆಚ್ಚಾಗಿದೆ.
2018ರಲ್ಲಿ ರಾಗಿಣಿ ಅಭಿನಯದ ದಿ ಟೆರರಿಸ್ಟ್ ಅನ್ನೊ ಹೆಸರಿನ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರವನ್ನು ಪಿ.ಸಿ ಶೇಖರ್ ನಿರ್ದೇಶನ ಮಾಡಿದ್ದರು. ಆದ್ರೆ ಹೇಳಿಕೊಳ್ಳುವಷ್ಟರ ಮಟ್ಟಿಗೇನು ಟೆರರಿಸ್ಟ್ ಯಶಸ್ಸು ಗಳಿಸಲಿಲ್ಲ. ಸಿನಿಮಾದಲ್ಲಿ ರಾಗಿಣಿ ಟೆರರಿಸ್ಟ್ ಪಾತ್ರದಲ್ಲಿ ನಟಿಸಿದ್ದರು. ಬಾಕ್ಸಾಫಿಸ್ ಗಳಿಕೆಯಲ್ಲಿ ಈ ಸಿನಿಮಾ ಹಿಂದೆ ಬಿದ್ದರೂ, ಬಾಲಿವುಡ್ನಲ್ಲಿ ಈಗ ಬೇಡಿಕೆ ಪಡೆಯುತ್ತಿದೆ.
ಈ ಚಿತ್ರವನ್ನು ಬಾಲಿವುಡ್ನಲ್ಲಿ ತೆರೆಗೆ ತರಲು ವಿಶಾಲ್ ರಾಣಾ ಆಸಕ್ತಿ ತೋರಿಸಿದ್ದಾರೆ. ಈಗಾಗಲೇ ಸಿನಿಮಾದ ರಿಮೇಕ್ ಹಕ್ಕನ್ನು ವಿಶಾಲ್ ರಾಣಾ ಖರೀದಿಸಿರೋದನ್ನ ನಿರ್ದೇಶಕ ಶೇಖರ್ ಟ್ವೀಟ್ ಮೂಲಕ ಹೇಳಿಕೊಂಡಿದ್ದಾರೆ. ಹಿಂದಿಯಲ್ಲಿ ರಾಗಿಣಿ ಪಾತ್ರವನ್ನು ವಿದ್ಯಾಬಾಲನ್ ಅಥವಾ ಸೋನಮ್ ಕಪೂರ್ ನಿರ್ವಹಿಸಲಿದ್ದಾರೆ ಅನ್ನೊ ಸುದ್ದಿಯೂ ಇದೆ.
ಸ್ಯಾಂಡಲ್ವುಡ್ನಲ್ಲಿ ಅಷ್ಟೊಂದು ಸದ್ದು ಮಾಡದ ಸಿನಿಮಾದ ರೈಟ್ಸ್ನ್ನು ಬಾಲಿವುಡ್ ಪಡೆದುಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಸದ್ಯ ಬಾಲಿವುಡ್ ಹಾಗೂ ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾದ್ದೇ ಸದ್ದು ಜೋರಾಗಿದೆ. ದಿ ಟೆರರಿಸ್ಟ್ ಸಿನಿಮಾದಲ್ಲಿ ನಾಯಕಿಯಾಗಿ, ಹಲವು ಕ್ರಿಮಿನಲ್ ಐಡಿಯಾಗಳನ್ನ ತೆರೆ ಮೇಲೆ ಪ್ರಯತ್ನಿಸಿದ್ದ ರಾಗಿಣಿ ನಿಜಜೀವನದಲ್ಲೂ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ.
Comments are closed.