ಮನೋರಂಜನೆ

ತೆರಿಗೆ ವಂಚನೆ ಆರೋಪ: ಎ ಆರ್ ರೆಹಮಾನ್‌ಗೆ ನೋಟಿಸ್

Pinterest LinkedIn Tumblr


ಚೆನ್ನೈ: ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಐಟಿ ಇಲಾಖೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಟಿ ಎಸ್ ಶಿವಜ್ಞಾನಂ ಮತ್ತು ವಿ ಭವಾನಿ ಸುಬ್ಬರಾಯನ್ ನೇತೃತ್ವದ ವಿಭಾಗೀಯ ಪೀಠ ರೆಹಮಾನ್‌ಗೆ ನೋಟಿಸ್ ನೀಡಿದೆ. ಮೇಲ್ಮನವಿಯಲ್ಲಿ, ರಹಮಾನ್ ತಮ್ಮ ಚಾರಿಟಬಲ್ ಟ್ರಸ್ಟ್ ಗೆ ಅಕ್ರಮವಾಗಿ 3.47 ಕೋಟಿ ರೂ.ವರ್ಗಾಯಿಸುವ ಮೂಲಕ ತೆರಿಗೆ ವಂಚಿಸಿದ್ದಾರೆ ಎಂದು ಐಟಿ ಇಲಾಖೆ ತಿಳಿಸಿದೆ.

ರೆಹಮಾನ್ ಅವರ 2011-12ನೇ ಸಾಲಿನ ತೆರಿಗೆ ಸಲ್ಲಿಕೆಯಲ್ಲಿ ಐಟಿ ಇಲಾಖೆ ವ್ಯತ್ಯಾಸವನ್ನು ಗುರುತಿಸಿದೆ. ಬೃಹತ್ ಮೊತ್ತವನ್ನು ಗಾಯಕ-ಸಂಯೋಜಕರಿಂದ ಸಂಬಳವಾಗಿ ಸ್ವೀಕರಿಸಲಾಗಿದೆ. ಇಂಗ್ಲೆಂಡ್ ಮೂಲದ ಲಿಬ್ರಾ ಮೊಬೈಲ್ಸ್ ಟೆಲಿಕಾಂಗಾಗಿ ವಿಶೇಷ ರಿಂಗ್‌ ಟೋನ್‌ಗಳನ್ನು ರಚಿಸುವುದಕ್ಕಾಗಿ ಕಂಪನಿ 2011ರಲ್ಲಿ 3 ವರ್ಷಗಳ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ ಎ.ಆರ್.ರಹಮಾನ್‌ರವರು ಟೆಲಿಕಾಂ ಕಂಪೆನಿಗೆ ತನ್ನ ಸಂಭಾವನೆಯನ್ನು ನೇರವಾಗಿ ಚಾರಿಟೇಬಲ್ ಫೌಂಡೇಶನ್‌ಗೆ ಪಾವತಿಸುವಂತೆ ಸೂಚಿಸಿದ್ದಾರೆ.

Comments are closed.