ಮನೋರಂಜನೆ

ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪರಸ್ಪರ ಜಗಳವಾಡಿದ ಸಂಜನಾ ಮತ್ತು ರಾಗಿಣಿ!

Pinterest LinkedIn Tumblr


ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿ ಮತ್ತು ನಟಿ ಸಂಜನಾ ಗಲ್ರಾನಿ ಮಹಿಳಾ ಸಾಂತ್ವಾನ ಕೇಂದ್ರದ ಒಂದೇ ಕೊಠಡಿಯಲ್ಲಿ ದಿನಕಳೆಯುತ್ತಿದ್ದು, ಇಂದು ಪರಸ್ಪರ ಕಿತ್ತಾಡಿಕೊಂಡಿರುವ ಘಟನೆ ವರದಿಯಾಗಿದೆ.

5 ಹಾಸಿಗೆಯುಳ್ಳ ರೂಂ ನಲ್ಲಿ ಮೊದಲ ಹಾಸಿಗಯನ್ನು ಒಬ್ಬರಿಗೆ ಕೊನೆಯ ಹಾಸಿಗೆಯನ್ನು ಮತ್ತೊಬ್ಬರಿಗೆ ನೀಡಿದ್ದಾರೆ. ಇನ್ನುಳಿದ ಮೂರು ಬೆಡ್‌ಗಳನ್ನು ಭದ್ರತೆಗೆ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸರಿಗೆ ನೀಡಿದ್ದಾರೆ.

ಕಳೆದ 5 ದಿನಗಳಿಂದ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ರಾಗಿಣಿ ಸಮಯಕ್ಕೆ ಸರಿಯಾಗಿ ಊಟ, ನಿದ್ದೆ, ಯೋಗ ಮಾಡುತ್ತ ಅಲ್ಲಿನ ವಾತಾವರಣಕ್ಕೆ ಅಡ್ಜಸ್ಟ್ ಆಗಿದ್ದಾರೆ, ಆದ್ರೆ ಸಂಜನಾ ಮಾಡುತ್ತಿರುವ ರಂಪಾಟ ಪೊಲೀಸರಿಗೆ ತಲೆ ನೋವಾಗಿದೆ.

ತಡ ರಾತ್ರಿ ಇದಕ್ಕಿದಂತೆ ಸಂಜಾನಗೆ ಎದೆ ನೋವು ಕಾಣಿಸಿಕೊಂಡು ಒದ್ದಾಡಲು ಆರಂಭಿಸಿದ್ದಾರೆ, ಸಂಜನಾಳ ಅಳಲನ್ನು ನೋಡಲಾಗದೆ ಪೊಲೀಸರು ಕಂಗಾಲಾಗಿದ್ದಾರೆ. ತಕ್ಷಣ ನಿಲಯದಲ್ಲಿರುವ ರೆಸಿಡೆಂಟ್ ಡಾಕ್ಟರ್ ನಿಂದ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆ ನೀಡಿ ಡಾಕ್ಟರ್ ವರ್ಷ ಎರಡು ದಿನಗಳಿಗಾಗುವಷ್ಟು ಮಾತ್ರೆ ಬರೆದುಕೊಟ್ಟಿದ್ದಾರೆ.

ಇಲ್ಲಿಂದ ನಾನು ಹೋಗಬೇಕು ಎಂಬ ಒತ್ತಾಯ ಮಾಡಿದ ಸಂಜನಾ, ನಿನ್ನೆಯಿಂದ ಒಂದೇ ಒಂದು ಲೋಟ ಹಾಲು ಮಾತ್ರ ಕುಡಿದಿದ್ದಾರೆ. ರಾತ್ರಿ ಊಟದ ಮೇಲೂ ಕೋಪ ತೋರಿಸಿರುವ ನಟಿ ಸಂಜನಾ, ಊಟ ಮಾಡುವಂತೆ ಪೊಲೀಸರು ಒತ್ತಾಯ ಮಾಡಿದ್ರೂ ಊಟ ಸೇವಿಸದೆ ತಗಾದೆ ತೆಗೆದು, ಇಡೀ ರಾತ್ರಿ ನಿದ್ದೆ ಮಾಡದೆ ಒದ್ದಾಡಿದ್ದಾರೆ.

ಅಲ್ಲದೆ ಒಂದೇ ರೂಮ್ ನಲ್ಲಿ ಸಂಜನಾ ..ರಾಗಿಣಿ ಇರಿಸು ಮುರಿಸು ಶುರುವಾಗಿದ್ದು, ನಾನು ಬಂದಿದ್ದು ನಿನಗೆ ಸಮಾಧಾನ ಆಯ್ತಾ ಎಂದು ಸಂಜನಾ ರಾಗಿಣಿಯೊಂದಿಗೆ ಹಾವು ಮುಂಗುಸಿಯಂತೆ ಕಿತ್ತಾಡಿದ್ದಾರೆ.

ಕೆಪಿಎಲ್‌ ವಿಚಾರದಲ್ಲಿ ಇಬ್ಬರು ನಟಿಯ ನಡುವೆ ಭಿನ್ನಾಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಮೊದಲೇ ಮಾತುಕತೆ ಕಡಿಮೆ ಇತ್ತು. ಹೀಗಾಗಿ ಮಂಗಳವಾರ ರಾತ್ರಿ ಒಂದೇ ಕೊಠಡಿಯಲ್ಲಿದ್ರು ಈ ಇಬ್ಬರು ನಟಿಯರು ಒಬ್ಬರಿಗೊಬ್ಬರು ಮುಖ ನೋಡಿಲ್ಲವಂತೆ.

ಕೊಠಡಿಯೊಳಗೆ ಹೋದ ತಕ್ಷಣ ರಾಗಿಣಿಯನ್ನ ಕಂಡು “ಆರ್ ಯು ಹ್ಯಾಪಿ ನೌ” ಎಂದು ಸಂಜನಾ ರಾಗಿಣಿಯೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕಿಳಿದಿದ್ದಾಳೆ. ಸಂಜನಾಳ ಮಾತನ್ನು ಕಿವಿಗೆ ಹಾಕಿಕೊಳ್ಳದ ರಾಗಿಣಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನೆ ಕುಳಿತಿದ್ದಾರೆ.

ರಾತ್ರಿ ಲೈಟ್ ಆಫ್ ಮಾಡುವ ವಿಷಯಕ್ಕೆ ಸಂಬಂಧಿಸಿ ಇಬ್ಬರ ನಟಿಯರ ನಡುವಿನ ಜಗಳದಿಂದಾಗಿ ಪೊಲೀಸರು ಬೆಸ್ತು ಬಿದ್ದಿದ್ದಾರೆ.

Comments are closed.