ಮನೋರಂಜನೆ

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗಡೆ ಕ್ಷಮೆ ಕೇಳಿದ ಕವಿತಾ ರೆಡ್ಡಿ!

Pinterest LinkedIn Tumblr


ಕೊನೆಗೂ ತಪ್ಪೊಪ್ಪಿಕೊಂಡು ಕಿರಿಕ್ ಪಾರ್ಟಿ ಸಿನಿಮಾ ಖ್ಯಾತಿಯ ಸಂಯಕ್ತಾ ಹೆಗ್ಡೆ ಬಳಿ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಇದೇ ತಿಂಗಳ ಸೆಪ್ಟೆಂಬರ್ 4 ರಂದು ಹೆಚ್ ಎಸ್ ಆರ್ ಲೇಔಟ್​ ನ ಅಗರದ ಪಾರ್ಕ್​​​ನಲ್ಲಿ ನಟಿ ಸಂಯುಕ್ತ ಸೇರಿದಂತೆ ಆಕೆಯ ಸ್ನೇಹಿತರು ಸ್ಫೋರ್ಟ್ಸ್ ಡ್ರೆಸ್ ತೊಟ್ಟು, ವ್ಯಾಯಾಮ ಮಾಡುತ್ತಿರುವುದಕ್ಕೆ, ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಸಂಯಕ್ತಾರವರ ಸ್ನೇಹಿತಿಯ ಮೇಲೆ ಹಲ್ಲೆ ನಡೆಸುವುದಕ್ಕೂ ಮುಂದಾಗಿದ್ದರು.

ಅಗರದ ಪಾರ್ಕ್​ ನಲ್ಲಿ ನಡೆದ ಈ ರಂಪ ರಾಮಾಯಣವನ್ನ ಸಂಯುಕ್ತಾ ವಿಡಿಯೋ ಮಾಡಿ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿ ಆಕೆಯ ಮೇಲೆ ಹಲ್ಲೆ ಮಾಡಲು ಯತ್ನಿಸಿದವರ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ ಕವಿತಾ ಅವರ ವಿರುದ್ಧ ನಟಿ ಸಂಯುಕ್ತಾ ಹೆಗಡೆ ಪೊಲೀಸ್​ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

ನಟಿ ಸಂಯುಕ್ತಾ, ಪಾರ್ಕಿನಲ್ಲಿ ಸ್ಪೋರ್ಟ್ಸ್ ವೇರ್ ಧರಿಸಿದ್ದಕ್ಕೆ ಕವಿತಾ ರೆಡ್ಡಿ ನಡೆದುಕೊಂಡ ರೀತಿಯನ್ನು ಖಂಡಿಸಿ ಹಿರಿಯ ನಟ ನವರಸ ನಾಯಕ ಜಗ್ಗೇಶ್​, ನಟಿ ರಮ್ಯಾ, ನಿರ್ದೇಶಕರಾದ ಸಿಂಪಲ್​ ಸುನಿ, ಸಂತೋಷ್,​ ಶೃತಿ ಹರಿಹರನ್, ಶ್ರದ್ದಾ ಶ್ರೀನಾಥ್ ಸೇರಿದಂತೆ ಸಾಕಷ್ಟು ಮಂದಿ ಸಂಯುಕ್ತಾ ಹೆಗಡೆ ಗೆ ಬೆಂಬಲ ಸೂಚಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕವಿತಾ ರೆಡ್ಡಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದೀಗ ಕವಿತಾ ರೆಡ್ಡಿ ನಟಿ ಸಂಯಕ್ತಾ ಬಳಿ ಬಹಿರಂಗ ಕ್ಷಮೆ ಯಾಚಿಸಿದ್ದಾರೆ. ‘ಈ ಘಟನೆ ನಡೆಯಬಾರದಿತ್ತು. ನಾನು ಸಂಯುಕ್ತಾ ಅವರ ಗೆಳೆತಿಯರ ಮೇಲೆ ಹಲ್ಲೆ ಮಾಡಲಿಲ್ಲ. ನಾನು ನನ್ನ ಸಂಯಮ ಕಳೆದುಕೊಂಡು ವರ್ತಿಸಿದ್ದು ಸರಿಯಲ್ಲ. ನಾನು ಸದಾ ನೈತಿಕ ಪೊಲೀಸ್​ ಗಿರಿಯನ್ನು ವಿರೋಧಿಸಿದ್ದೇನೆ. ಅಂದು ಆಕ್ರಮಣಕಾರಿಯಾಗಿ ವರ್ತಿಸಿದ್ದು, ಅಲ್ಲಿ ನೆರೆದಿದ್ದ ಎಲ್ಲರ ಬಳಿಯೂ ಕ್ಷಮೆ ಯಾಚಿಸುತ್ತಿದ್ದೇನೆ’ ಎಂದು ವಿಡಿಯೋ ಮಾಡಿ ತಮ್ಮ ಟ್ವಿಟರ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ಕವಿತಾ ರೆಡ್ಡಿಯ ಟ್ವೀಟ್​ ಗೆ ರಿಯಾಕ್ಟ್ ಮಾಡಿರುವ ಸಂಯುಕ್ತಾ ಹೆಗಡೆ, ಕವಿತಾ ರೆಡ್ಡಿ ರವರ ಕ್ಷಮೆಯನ್ನು ನಾನು ಸ್ವೀಕರಿಸಿದ್ದೇನೆ. ಇದಕ್ಕೆ ಇಲ್ಲೇ ಅಂತ್ಯ ಹಾಡೋಣ. ಮತ್ತು ಮಹಿಳೆಯರಿಗೆ ಎಲ್ಲೆಡೆ ಸರಕ್ಷಿತ ಭಾವನೆ ಉಂಟುಮಾಡುವಂತಹ ವಾತಾವರಣ ನಿರ್ಮಾಣವಾಗಲಿ ಎನ್ನುತ್ತಾ, ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

Comments are closed.