ಮನೋರಂಜನೆ

ಮನೆಯ ಸದಸ್ಯರ ಎದುರೇ ಕ್ಯಾನ್ಸರ್​ಗೆ ಬಲಿಯಾದ ಹಾಲಿವುಡ್​ ನಟ ಚಾಡ್ವಿಕ್ ಬೋಸ್‌ಮನ್

Pinterest LinkedIn Tumblr


ಲಾಸ್ ಏಂಜಲಸ್​ (ಆಗಸ್ಟ್​ 29): ಬ್ಲ್ಯಾಕ್​ ಪ್ಯಾಂಥರ್​ ಪಾತ್ರದ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದ ಹಾಲಿವುಡ್​ ನಟ ಚಾಡ್ವಿಕ್ ಬೋಸ್‌ಮನ್ ಶುಕ್ರವಾರ ಕ್ಯಾನ್ಸರ್​​ನಿಂದ ಮೃತಪಟ್ಟಿದ್ದಾರೆ. ಅವರಿಗೆ 43 ವರ್ಷ ವಯಸ್ಸಾಗಿತ್ತು.

ಚಾಡ್ವಿಕ್ ಬೋಸ್‌ಮನ್ ಮೃತಪಡುವಾಗ ನಿವಾಸದಲ್ಲೇ ಇದ್ದರು. ಅವರ ಹೆಂಡತಿ ಹಾಗೂ ಕುಟುಂಬದ ಇತರ ಸದಸ್ಯರ ಎದುರಲ್ಲೇ ಚಾಡ್ವಿಕ್ ಬೋಸ್‌ಮನ್ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪ್ರಚಾರಕ ನಿಕ್ಕಿ ಫಿಯೋರವಾಂಟೆ ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಚಾಡ್ವಿಕ್​ಗೆ ಕೊಲೊನ್​ ಕ್ಯಾನ್ಸರ್​ ಇರುವ ವಿಚಾರ ತಿಳಿದಿತ್ತು.

ಕರುಳಿನ ಕೊನೆಯಲ್ಲಿ ಕೊಲೊನ್​ ಎನ್ನುವ ಭಾಗ ಇರುತ್ತದೆ. ಇಲ್ಲಿ ಕ್ಯಾನ್ಸರ್​ ಕಾರಕಗಳು ಬೆಳೆದು ಕೊಲೋನ್​ ಕ್ಯಾನ್ಸರ್​ ಉಂಟಾಗುತ್ತದೆ. ಯಾವುದೇ ವಯಸ್ಸಿನಲ್ಲೂ ಈ ಕ್ಯಾನ್ಸರ್​ ಕಾಣಿಸಿಕೊಳ್ಳಬಹುದು ಎಂದು ವೈದ್ಯರು ಹೇಳಿದ್ದಾರೆ.

ಚಾಡ್ವಿಕ್ ಬೋಸ್‌ಮನ್ ನಿಜವಾದ ಫೈಟರ್​ ಎಂದಿರುವ ಕುಟುಂಬ, “ಸರ್ಜರಿ ಹಾಗೂ ಕೀಮೋಥೆರಪಿ ನಡೆಯುತ್ತಿರುವಾಗಲೇ, ಮಾರ್ಷಲ್, ಡಾ 5 ಬ್ಲಡ್ಸ್​​, ಬ್ಲಾಕ್​ ಪ್ಯಾಂಥರ್​​ ಸಿನಿಮಾಗಳ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಅವರು ಜೀವನದಲ್ಲಿ ನಿಜಕ್ಕೂ ಹೋರಾಟ ನಡೆಸಿದ್ದರು,” ಎಂದಿದೆ.

ಬೋಸ್​ಮನ್​ ಕ್ಯಾನ್ಸರ್​ ಇರುವ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ, ಏಪ್ರಿಲ್​ ತಿಂಗಳಲ್ಲಿ ಅವರ ಫೋಟೋ ಒಂದು ಹರಿದಾಡಿತ್ತು. ಈ ಫೋಟೋದಲ್ಲಿ ಬೋಸ್​ಮನ್ ಸಾಕಷ್ಟು ತೂಕ ಕಳೆದುಕೊಂಡಿದ್ದು ಕಂಡು ಬಂದಿತ್ತು. ಅಭಿಮಾನಿಗಳು ಈ ಬಗ್ಗೆ ಸಾಕಷ್ಟು ಆತಂಕ ವ್ಯಕ್ತಪಡಿಸಿದ್ದರು.

ದಕ್ಷಿಣ ಕ್ಯಾರೋಲಿನಾದಲ್ಲಿ ಜನಿಸಿದ ಬೋಸ್​ಮನ್​ ಹಾರ್ವರ್ಡ್​ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಮುಗಿಸಿದರು. ಹಿರಿತೆರೆಗೆ ಬರುವುದಕ್ಕೂ ಮೊದಲು ಟೆವಿಯಲ್ಲಿ ಬರುವ ಕಾರ್ಯಕ್ರಮಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ನಿರ್ವಹಿಸಿದ್ದರು. 2013ರಲ್ಲಿ ತೆರೆಕಂಡಿದ್ದ 42 ಹೆಸರಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಅಲ್ಲಿಂದ ಅವರ ಕೆರಿಯರ್​ ಬದಲಾಗಿತ್ತು.

ಮಾರ್ವೆಲ್​ ಮೂವಿಸ್​ ಸೀರಿಸ್​ಗಳಲ್ಲಿ ಒಂದಾದ ಕ್ಯಾಪ್ಟನ್​ ಅಮೆರಿಕ ಸಿನಿಮಾದಲ್ಲಿ ಮೊಟ್ಟ ಮೊದಲ ಬಾರಿಗೆ ಟಿ ಚಲ್ಲಾ/ಬ್ಲ್ಯಾಕ್​ ಪ್ಯಾಂಥರ್​ ಕ್ಯಾರೆಕ್ಟರ್​ ಅನ್ನು ಪರಿಚಯಿಸಲಾಗಿತ್ತು. ಈ ಪಾತ್ರ ಎಲ್ಲರ ಗಮನ ಸೆಳೆದಿತ್ತು.

Comments are closed.