ಮನೋರಂಜನೆ

ನಟಿ ಶರ್ಮಿಳಾ ಮಾಂಡ್ರೆ ಡ್ರಗ್ಸ್​ ಅಡಿಕ್ಟ್​​ ಆಗಿದ್ರಾ ? ಫಿಲ್ಮ್​​ ಡಿಸ್ಟ್ರಿಬ್ಯೂಟರ್​​ ಪ್ರಶಾಂತ್​ ಸಂಬರಗಿ ಮಾಡೋ ಆರೋಪ ಏನು ?

Pinterest LinkedIn Tumblr

ಚಂದನವನದಲ್ಲಿ ಸ್ಟಾರ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಸ್ಫೋಟಕ ಡ್ರಗ್ ಮಾಫಿಯಾ ಬಗ್ಗೆ ಆರೋಪ ಪ್ರತ್ಯಾರೋಪಗಳು​ ಜೋರಾಗಿ ಚರ್ಚೆಯಾಗುತ್ತಿವೆ.

ಇತ್ತೀಚೆಗೆ ಸಾವನ್ನಪ್ಪಿದ ಯುವ ನಟನ ಸಾವಿಗೂ ಡ್ರಗ್ಸ್ ಕಾರಣವಾಗಿತ್ತು ಎಂದು ಇಂದ್ರಜಿತ್ ಪರೋಕ್ಷವಾಗಿ ಚಿರಂಜೀವಿ ಮೇಲೆ ಆರೋಪ ಮಾಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಚಿರು ಸರ್ಜಾ ಮಾವ ಸುಂದರ್ ರಾಜ್ ನಮ್ಮ ಕುಟುಂಬಕ್ಕೆ ಮತ್ತಷ್ಟು ನೋವು ಕೊಡಬೇಡಿ, ಅಂತಹ ಯಾವುದೇ ದುರಾಭ್ಯಾಸಗಳೂ ಚಿರುಗೆ ಇರಲಿಲ್ಲ ಎಂದು ಹೇಳಿದ್ದಾರೆ.

ಸಿನಿಮಾ ವಿತರಕ, ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​​​​​​ ಸಂಬರಗಿ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಚಿರು ನನಗೆ ಬಹಳ ಆತ್ಮೀಯ ವ್ಯಕ್ತಿ, ಅವನ ಅಗಲಿಕೆಯಿಂದ ನಾವು ಬಹಳ ನೋವಿನಲ್ಲಿದ್ದೇವೆ. ಚಿರು ಯಾವುದೇ ಡ್ರಗ್ ನಿಂದ ಸಾವನಪ್ಪಿಲ್ಲ ಎಂದು ನಾನು ಸ್ಪಷ್ಟ ಮಾಹಿತಿಯನ್ನು ಕೊಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಕೋವಿಡ್​ ಪಾಸಿಟಿವ್​ ಅಥವಾ ನೆಗೆಟಿವ್ ಮಾತ್ರ ಮುಖ್ಯವಾಗಿತ್ತು ನಮಗೆ, ಚಿರು ಹಾರ್ಟ್​ ಅಟ್ಯಾಕ್​ ಆಗಿದ್ರಿಂದ ಪೋಸ್ಟ್ ಮಾರ್ಟಂ ಬೇಡ ಎಂದು ಅಲ್ಲಿನ ವೈದ್ಯರು ಸ್ಪಷ್ಟವಾಗಿ ಹೇಳಿದ್ದರಿಂದ ಪೋಸ್ಟ್ ಮಾರ್ಟಂ ಮಾಡಿಸಲಿಲ್ಲ ಎಂದು ತಿಳಿಸಿದರು.

ಇಂದ್ರಜಿತ್ ಈ ರೀತಿ ಆರೋಪ ಮಾಡಿದ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ಶರ್ಮಿಳಾ ಮಾಂಡ್ರೆಗೆ ಇತ್ತೀಚೆಗೆ ಆಗಿದ್ದ ಅಪಘಾತ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಲಾಕ್ ಡೌನ್ ವೇಳೆ ಶರ್ಮಿಳಾ ಮಧ್ಯರಾತ್ರಿಯಲ್ಲಿ ಹೊರಗೆ ಹೋಗಿ ಕಾರು ಅಪಘಾತ ಮಾಡಿದ್ರು. ಆ ವೇಳೆ ಅವರ ಜತೆಗೆ ಡ್ರಗ್ ಪೆಡ್ಲರ್ ಇದ್ದ . ಇದರ ಬಗ್ಗೆ ಯಾಕೆ ತನಿಖೆ ಮಾಡಿಲ್ಲ ಎಂದು ತಿರುಗೇಟು ಕೊಟ್ಟಿದ್ರು.

ಶರ್ಮಿಳಾ ತಮ್ಮ ಮೇಲೆ ಆರೋಪ ಬರುತ್ತಿದ್ದಂತೆ ವಿಡಿಯೋ ಸಂದೇಶ ಮೂಲಕ ಸ್ಪಷ್ಟನೆ ನೀಡಿದ್ದು, ನಾನು ಅಂಥಾ ಯಾವುದೇ ಚಟುವಟಿಕೆಯಲ್ಲಿ ಭಾಗಿ ಆಗಿಲ್ಲ, ನಮ್ಮ ಕುಟುಂಬ ಉತ್ತಮ ಹಿನ್ನೆಲೆಯಿಂದ ಬಂದಿದೆ . ನಮಗೆ ಯಾರಿಗೂ ಇಂತಹ ಅಭ್ಯಾಸಗಳಿಲ್ಲ. ನನ್ನ ಮೇಲೆ ಆರೋಪ ಮಾಡಿರುವುದು ನೋಡಿದರೆ ನಿಜಕ್ಕೂ ಶಾಕಿಂಗ್ ಎಂದಿದ್ದಾರೆ.

Comments are closed.