ರಾಷ್ಟ್ರೀಯ

ಮನೆಗೆ ವಿದ್ಯಾರ್ಥಿನಿಗೆ ಬರಲು ಹೇಳಿ ಶಾಲಾ ಮ್ಯಾನೇಜರ್​ ಮಾಡಿದ್ದೇನು ಗೊತ್ತಾ?

Pinterest LinkedIn Tumblr


ಲಖನೌ: ಹದಿನೈದು ವರ್ಷದ ಶಾಲಾ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಶಾಲೆಯ ಮ್ಯಾನೇಜರ್​ನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್​ಪುರ ಜಿಲ್ಲೆಯಲ್ಲಿ ನಡೆದಿದೆ.

ಆರೋಪಿಯನ್ನು ಗೋಲಾ ಏರಿಯಾದಲ್ಲಿರುವ ಅಭಿಯೊದಯ್​ ಇಂಟರ್​ ಕಾಲೇಜ್ ರಾಜ್​ಗಢ ಬಳಿ​ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ದೂರಿನಲ್ಲಿರುವಂತೆ ಆರೋಪಿಯು ಆರ್​ಎಂ ಪಬ್ಲಿಕ್​ ಸ್ಕೂಲ್​ ಮ್ಯಾನೇಜರ್​ ಆಗಿದ್ದು, ಜುಲೈ 30 ರಂದು ಏಳನೇ ತರಗತಿ ವಿದ್ಯಾರ್ಥಿನಿಯನ್ನು ಗೋಲಾ ಏರಿಯಾದಲ್ಲಿರುವ ತನ್ನ ಮನೆಗೆ ಕರೆದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ವಿಡಿಯೋ ರೆಕಾರ್ಡ್​ ಮಾಡಿಕೊಂಡು ಯಾರಿಗಾದರೂ ಹೇಳಿದರೆ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಕೊನೆಗೊಂದು ದಿನ ವಿದ್ಯಾರ್ಥಿನಿ ತಮ್ಮ ಕುಟುಂಬಕ್ಕೆ ನಡೆದ ಘಟನೆಯನ್ನು ವಿವರಿಸಿದ್ದಾಳೆ. ತಕ್ಷಣ ಎಚ್ಚೆತ್ತ ಪಾಲಕರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಆತನ ಮೇಲೆ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

Comments are closed.