ಮನೋರಂಜನೆ

ಸುಶಾಂತ್​ ಪ್ರಕರಣದಲ್ಲಿ ಸಿಲುಕಿಕೊಂಡ ಮಹೇಶ್​​ ಭಟ್!

Pinterest LinkedIn Tumblr


ಆಲಿಯಾ ಭಟ್ ಮತ್ತು ಅವರ ತಂದೆ ಮಹೇಶ್ ಭಟ್ ಯಾಕೋ ಟೈಮೇ ಸರಿ ಇದ್ದಂತಿಲ್ಲ. ರಿಯಾ ಜೊತೆಗಿನ ವಾಟ್ಸ್ಯಾಪ್​ ಸಂಭಾಷಣೆ ಬಹಿರಂಗಗೊಂಡು ಮಹೇಶ್​ ಭಟ್​​ಗೆ ಭಾರಿ ಮುಜುಗರವಾಗಿತ್ತು. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದ ನಟಿಯೊಂದಿಗಿನ ಒಂದು ಹಳೇ ವೀಡಿಯೊ ಎಲ್ಲರ ಹುಬ್ಬೇರುವಂತೆ ಮಾಡ್ತಿದೆ. ಆಲಿಯಾ ತಂದೆ ಬಗ್ಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಒಮ್ಮೆ ಹೆಬ್ಬಾವು ಸುತ್ಕೊಂಡ್ರೆ, ಪೂರ್ತಿ ಆಪೋಶನ ತೆಗೆದುಕೊಳ್ಳೊವರೆಗೆ ಸುರುಳಿ ಸುತ್ತಿಕೊಂಡು ಉಸಿರುಗಟ್ಟಿಸುತ್ತಲೇ ಇರುತ್ತೆ. ಈಗ ಆಲಿಯಾ ಮತ್ತು ಮಹೇಶ್ ಭಟ್​ ಫ್ಯಾಮಿಲಿ ಪರಿಸ್ಥಿತಿ ಹಾಗೇ ಆಗಿದೆ. ಜಿಯಾ ಖಾನ್ ಜೊತೆ ಬೆರಳುಗಳಲ್ಲಿ ನಕ್ಷತ್ರ ಎಣಿಸುತ್ತಿದ್ದ ಮಹೇಶ್​ ಭಟ್​ ವೀಡಿಯೊ ಲೀಕಾಗಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸ್ತಿದೆ.

ಸುಶಾಂತ್​ ಸಿಂಗ್​ ಆತ್ಮಹತ್ಯೆ, ಸ್ವಜನಪಕ್ಷಪಾತದ ಚರ್ಚೆಗಳು ಆರಂಭವಾದ್ಮೇಲೆ ಒಂದೊಂದೇ ಶಾಕಿಂಗ್​ ವೀಡಿಯೊ, ವಾಟ್ಸ್ಯಾಪ್​ ಸಂಭಾಷಣೆಗಳು ಹೊರಬೀಳ್ತಾ ಇವೆ. ಇತ್ತೀಚೆಗೆ ರಿಯಾ ಮತ್ತು ಮಹೇಶ್​ ಭಟ್​ ನಡುವೆ ನಡೆದಿದ್ದ ಸಂಭಾಷಣೆ ಜೊತೆಗೊಂದಷ್ಟು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ರಿಲೀಸಾಗಿದ್ದವು. ಮಗಳ ವಯಸ್ಸಿನ ನಟಿಯೊಂದಿಗೆ ಇದೇನು ಹೀಗೆ ಮಹೇಶ್​ ಭಟ್​​ ಅಂತ ನಡೆದುಕೊಂಡಿದ್ದರು ಇಡೀ ಬಾಲಿವುಡ್​ ಕಣ್ಣಲ್ಲೇ ಪ್ರಶ್ನೆ ಮಾಡಿತ್ತು. ಆದ್ರೆ ಅದಕ್ಕೆ ತಕ್ಕುದಾದ ಉತ್ತರ ಮಹೇಶ್​ ಭಟ್​ ಬಳಿ ಇದ್ದಂತಿಲ್ಲ.

ಮಹೇಶ್​ ಭಟ್​ನ ಈ ದಶಾವತರಾರ ಮನೆಯವರಿಗೆಲ್ಲಾ ಮೊದಲಿಂದ ಗೊತ್ತಿದೆಯೊ. ಅಥವ ಅವ್ರಿಗೂ ಇದೆಲ್ಲಾ ಹೊಸತಾಗಿ ಶಾಕ್​ ಮೇಲೆ ಶಾಕ್ ಆಗ್ತಿದ್ಯೊ ಅವರೇ ಹೇಳ್ಬೇಕು. ಹಾಗೊಮ್ಮೆ ಆಲಿಯಾ, ಮಹೇಶ್​ ಭಟ್​ ಅಥವ ಅವ್ರ್​​ ಫ್ಯಾಮಿಲಿಯಿಂದ ಯಾರಾದ್ರು ಮಾಧ್ಯಮದ ಮುಂದೆ ಬಂದ್ರೆ ಪ್ರಶ್ನೆಗಳು ಬಾಹುಬಲಿ ಬಾಣಗಳಂತೆ ಬರ್ತಾ ಇವೆ. ಹಾಗಾಗಿ ಇಡೀ ಫ್ಯಾಮಿಲಿ ಹೋಂಕ್ವಾರಂಟೈನ್​​ ಆಗ್ಬಿಟ್ಟಿದೆ.

ಕೊರೋನಾಗಿಂತ ಹೆಚ್ಚಾಗಿ ಈ ನೆಪೋಟಿಸಮ್​ ಅನ್ನೋದು ದೊಡ್ಡ ದೊಡ್ಡ ಸ್ಟಾರ್​ ಫ್ಯಾಮಿಲಿಗಳನ್ನ ಕಾಡ್ತಿರೊದಂತೂ ಸುಳ್ಳಲ್ಲ. ಬಡವರ ಮಕ್ಕಳನ್ನ, ಮಧ್ಯಮವರ್ಗದ, ಸಣ್ಣಕುಟುಂಬದಿಂದ ಬಂದ ಪ್ರತಿಭಾವಂತರನ್ನ ಹೀನಾಯವಾಗಿ ನಡೆಸಿಕೊಳ್ತಿದ್ದ ಬಾಲಿವುಡ್​ ತಲೆಗೆ ಸುಶಾಂತ್​ ಸಾವು ಸಿಡಿಲು ಬಡಿದಂತಾಗಿದೆ.

Comments are closed.