ರಾಷ್ಟ್ರೀಯ

ನಿಶ್ಚಿತಾರ್ಥವಾಗಿದ್ರೂ ಬೇರೆ ಹೆಣ್ಣಿನ ಜತೆ ಭಾವಿ ಪತಿ ತಿರುಗಾಟ: ಉಗ್ರರೂಪ ತೋರಿದ ಯುವತಿ!

Pinterest LinkedIn Tumblr


ಉದಯಪುರ್:​ ನಿಶ್ಚಿತಾರ್ಥ ಮಾಡಿಕೊಂಡ ಬಳಿಕವೂ ಬೇರೆ ಹೆಣ್ಣಿನ ಜತೆ ತನ್ನ ಭಾವಿ ಪತಿ ಹೋಗುತ್ತಿರುವುದನ್ನು ನೋಡಿದ ಯುವತಿ ಇಬ್ಬರನ್ನು ಹಿಡಿದು ನಡುರಸ್ತೆಯಲ್ಲೇ ಥಳಿಸಿರುವ ಘಟನೆ ರಾಜಸ್ಥಾನ ಉದಯಪುರ್​ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಜಿಲ್ಲೆಯ ರಿಷಭ್​ದೇವ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ವಿಡಿಯೋವೊಂದು ಸಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕೆಲ ದಿನಗಳ ಹಿಂದೆ ಯುವತಿಗೆ ನಿಶ್ಚಿತಾರ್ಥವಾಗಿತ್ತು. ಇದಾದ ಬೆನ್ನಲ್ಲೇ ತನ್ನ ಬಾವಿ ಪತಿಗೆ ಮತ್ತೊಂದು ಹೆಣ್ಣಿನ ಜತೆ ಸಂಬಂಧ ಇದೆ ಎಂದು ತಿಳಿದುಬಂದಿದೆ.

ಇಬ್ಬರನ್ನು ನೇರವಾಗಿ ಹಿಡಿಯಯಬೇಕೆಂದು ಯುವತಿ ಕಾದು ಕುಳಿತ್ತಿದ್ದಳು. ಅದರಂತೆ ನಿನ್ನೆ ಭಾವಿ ಪತಿ ಮತ್ತು ಆತನ ಲವ್ವರ್​ ಬೈಕ್​ನಲ್ಲಿ ಹೋಗುವಾಗ ಮಾರ್ಗ ಮಧ್ಯೆಯೇ ಅವರನ್ನು ಯುವತಿ ತಡೆದಿದ್ದಾಳೆ. ಭಾವಿ ಪತಿಯ ಲವ್ವರ್​ ಬೈಕ್​ ಮೇಲೆ ಕುಳಿತಿರುವಾಗಲೇ ಯುವತಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ.

ಇಬ್ಬರಿಗೂ ಯುವತಿ ಥಳಿಸುವುದನ್ನು ನೋಡಿ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿ ಬರುತ್ತಾರೆ. ಈ ವೇಳೆ ಯುವತಿ ನಡೆದ ಘಟನೆಯನ್ನು ವಿವರಿಸುತ್ತಾಳೆ. ಆದರೂ ತನ್ನ ಕಿಚ್ಚು ಬಿಡದ ಯುವತಿ ಭಾವಿ ಪತಿಯ ಲವ್ವರ್​ ಮೇಲೆ ಚಪ್ಪಲಿ ಎಸೆದು, ಕೊನೆಯಲ್ಲಿ ಭಾವಿ ಪತಿಯ ಬೈಕ್​ ಏರಿ ಅಲ್ಲಿಂದ ಹೊರಡುತ್ತಾಳೆ.

Comments are closed.