ಮನೋರಂಜನೆ

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಪ್ರೇಮಬರಹ.?

Pinterest LinkedIn Tumblr


ಕಿರುತೆರೆಯ ಫೇಮಸ್​ ಆನ್​ ಸ್ಕ್ರೀನ್​ ಜೋಡಿ ಲಕ್ಷ್ಮಿ ಬಾರಮ್ಮ ಖ್ಯಾತಿಯ ಚಂದನ್ ಕುಮಾರ್ ಮತ್ತು ಕವಿತಾ ಈಗ ರಿಯಲ್​ ಲೈಫ್​ನಲ್ಲೂ ಜೋಡಿಗಳಾಗ್ತಾರ ಅನ್ನೊ ಮಾತುಗಳು ಎಲ್ಲೆಡೆ ಕೇಳಿಬರ್ತಿದೆ. ವರ್ಷಗಳಿಂದ ಒಳ್ಳೆ ಗೆಳೆಯರಾಗಿರೊ ಈ ಇಬ್ಬರು ಇತ್ತೀಚೆಗೆ​ ಸೋಷಿಯಲ್​ ಮೀಡಿಯಾದಲ್ಲಿ ಒಟ್ಟಿಗೆ ಫೋಟೊಗಳನ್ನ ಹಾಕಿಕೊಳ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಶಿವಗಂಗೆಗೆ ಚಾರಣ ಹೋಗಿದ್ದಾಗ ಅಲ್ಲಿನ ಪ್ರಕೃತಿರಮಣೀಯ ತಾಣಗಳಲ್ಲಿ ತೆಗೆಸಿಕೊಂಡೆ ಫೋಟೊಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್​ ಮಾಡಿದ್ದಾರೆ.

ಇದನ್ನೆಲ್ಲಾ ನೋಡಿರೊ ಈ ಇಬ್ಬರ ಫ್ಯಾನ್ಸ್​ಗಳು ನೀವಿಬ್ರು ಮೇಡ್​ ಫಾರೀಚದರ್ ಥರ ಇದ್ದೀರ. ಮದ್ವೆ ಯಾಕಾಗ್ಬಾರ್ದು..? ಎಂದು ಪುಗಸಟ್ಟೆ ಸಲಹೆ ಕೊಟ್ಟಿದ್ದಾರೆ. ಅದಕ್ಕೆ ಈ ಜೋಡಿಗಳು ನೋ.. ನೋ.. ವೀ ಆರ್ ಜಸ್ಟ್ ಫ್ರೆಂಡ್ಸ್​​ ಅಂತ ಸಾಗಿ ಹಾಕಿದ್ದಾರೆ.

ಕವಿತಾ ಗೌಡ ಕಳೆದ ತಿಂಗಳು ಬರ್ತ್​​ಡೇ ಸೆಲಬ್ಟ್ರೇಟ್​ ಮಾಡಿಕೊಂಡಿದ್ದಾರೆ. ಆಗ ಚಂದನ್​, ಕವಿತಾ ಮನೆಗೆ ಭೇಟಿ ನೀಡಿ ಕವಿತಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಜೊತೆಗೆ ಬರ್ತಡೇ ಸ್ಪೆಷಲ್​ ಗಿಫ್ಟ್​ ಸಹ ಕೊಟ್ಟಿದ್ದು ಅಲ್ಲಿಂದ ನಿರಂತರವಾಗಿ ಕವಿತಾ ಮತ್ತು ಚಂದನ್ ಫೋಟೋಗಳು ಫೇಸ್ಬುಕ್ಕು, ಇನ್ಸ್​ಟಾಗ್ರಾಮ್​ನಲ್ಲಿ ಹರಿದಾಡ್ತಲೇ ಇವೆ.

ಚಂದನ್​-ಕವಿತಾ ಮಧ್ಯೆ ಏನೋ ಇದೆ ಅಂತ ಗುಸು ಗುಸು ಶುರುವಾದಾಗ್ಲೇ , ಚಂದನ್​ನ ಏರ್‌ಪೋರ್ಟ್​​ಗೆ ಡ್ರಾಪ್ ಮಾಡಲು ಕವಿತಾ ಹೋಗಿದ್ದರು. ಈ ವೇಳೆ ತೆಗೆದುಕೊಂಡ ಕ್ಯೂಟ್ ಸೆಲ್ಫಿಯನ್ನೂ ಸಹ ಚಂದನ್ ಶೇರ್​ ಮಾಡಿದ್ದು, ಕವಿತಾ ನಿನಗೆ ಹೊಸ ಕೆಲಸಕ್ಕೆ ಆಫರ್ ಇದೆ’ ಎಂದು ಕ್ಯಾಪ್ಷನ್ ಸಹ ಹಾಕಿದ್ದರು.

ಇವ್ರಿಬ್ಬರ ವೈರಲ್​ ಆಗುತ್ತಿರುವ ಫೋಟೋಗಳಿಗೆ ಫ್ಯಾನ್ಸ್​ಗಳು, ನಿಮ್ಮಿಬ್ಬರ ಜೋಡಿ ಕ್ಯೂಟ್​ ಆಗಿದ್ದೆ, ಬೇಗ ಮದುವೆ ಆಗಿ ಅಣ್ಣ- ಅತ್ತಿಗೆ ಅಂತ ಶುರುವಿಟ್ಟುಕೊಂಡಿದ್ದಾರೆ. ಹೀಗೆ ಸಾವಿರಾರು ಪ್ರೋತ್ಸಾಹದಾಯಕ ಕಾಮೆಂಟುಗಳು ಅಭಿಮಾನಿಗಳು ಮತ್ತು ಫಾಲೋಯೆರ್ಸ್​​ಗಳಿಂದ ಹರದಿ ಬರ್ತಲೇ ಇದೆ. ಆದ್ರೆ ಈ ಇಬ್ರು ಮಾತ್ರ ನೋ ವೇ, ವೀ ಆರ್​ ಫ್ರೆಂಡ್ಸ್​​ ಅಂತಿದ್ದಾರೆ. ಆದ್ರೆ ಯಾವಾಗ ಈ ಇಬ್ರು ಉಂಗುರ ಬದ್ಲಾಯ್ಸ್​ಕೊಂಡು ಸ್ಟೇಜ್​​ ಹತ್ತಿ ಕ್ಯಾಮೆರಾಗೆ ಸ್ಮೈಲ್​ ಕೊಡ್ತಾರೊ ಹೇಳೋಕಾಗಲ್ಲ.

Comments are closed.