ಮನೋರಂಜನೆ

ತನ್ನ ಮಹಾ ತಾಯಿಗೋಸ್ಕರ ದೇವಸ್ಥಾನವನ್ನೇ ನಿರ್ಮಾಣ ಮಾಡುತ್ತಿರುವ ನಟ

Pinterest LinkedIn Tumblr


ಖ್ಯಾತ ನಟ, ನಿರ್ದೇಶಕ, ‘ಜೋಗಿ’ ಚಿತ್ರದ ಖ್ಯಾತಿಯ ತಾಯಿ ಭಾಗ್ಯಮ್ಮ ಇತ್ತೀಚೆಗೆ ವಿಧಿವಶರಾಗಿದ್ದರು. ಸಿನಿಮಾ ಪಬ್ಲಿಸಿಟಿಗಾಗಿ, ಸಿನಿಮಾಗಾಗಿ ಅದೆಷ್ಟೇ ಕಮರ್ಷಿಯಲ್ಲಾಗಿರಲಿ ಆದ್ರೆ ತಾಯಿ ಅಂತ ಎರಡಕ್ಷರದ ವಿಷಯ ಬಂದುಬಿಟ್ಟರೆ ಅಕ್ರಶಃ ಮಗುವೇ ಆಗಿಬಿಡ್ತಾರೆ ಪ್ರೇಮ್​. ಇದೀಗ ಪ್ರೇಮ್ ತನ್ನ ಮಹಾ ತಾಯಿಗೋಸ್ಕರ ದೇವಸ್ಥಾನವನ್ನೇ ನಿರ್ಮಾಣ ಮಾಡುತ್ತಿದ್ದಾರೆ.

ಆರಾಧ್ಯ ದೈವ ಅಮ್ಮನ ನೆನೆಪಿಗೋಸ್ಕರ ಕೈಗೊಂಡಿರುವ ಈ ಕಾರ್ಯದ ಬಗ್ಗೆ ಪ್ರೇಮ್ ತಮ್ಮ ಅತ್ಯಾಪ್ತರು ಮತ್ತು ಕುಟುಂಬದವರ ಜೊತೆ ಬಿಟ್ಟರೆ ಬೇರ್ಯಾರೊಂದಿಗೂ ಹಂಚಿಕೊಂಡಿಲ್ಲ.

ಅಮ್ಮನ ತೋಟ ಅಂತ ಮದ್ದೂರಿನ ಬಳಿ ಇರೊ ಜಾಗದಲ್ಲಿ, ಪ್ರಕೃತಿ ಮಾತೆ ಮೆಚ್ಚುವಂಥ ತೋಟವನ್ನ ಮಾಡಿದ್ದಾರೆ. ಈಗಾಗ್ಲೆ ಹಲಸು, ತೆಂಗು, ಮಾವು ಹೀಗೆ ತನ್ನಮ್ಮ ಭಾಗ್ಯಮ್ಮನಿಗೆ ಇಷ್ಟವಾದ ಹಲವಾರು ಸಸಿಗಿಡಗಳನ್ನ ನೆಡುತ್ತಿದ್ದಾರೆ ಪ್ರೇಮ್​. ಎರಡ್ಮೂರು ಸ್ಕೆಚ್ಚುಗಳನ್ನ ರೆಡಿಮಾಡಿಸಿ, ಅದರಲ್ಲಿ ಒಂದು ಚಿತ್ರಪಟವನ್ನ ಫೈನಲ್​ ಮಾಡಿದ್ದಾರೆ. ಅದನ್ನೇ ಶಿಲ್ಪಿಗಳ ಕೈಗಿತ್ತು ಕಪ್ಪುಶಿಲೆಯಲ್ಲಿ ತನ್ನಮ್ಮನ ವಿಗ್ರಹವನ್ನ ಮಾಡಿಸಿ ಅಮ್ಮನಿಗೊಂದು ಪುಟ್ಟ ಸೇವೆ ಮಾಡಲಿದ್ದಾರೆ ಸ್ಯಾಂಡಲ್ವುಡ್​ನ ಈ ನಿರ್ದೇಶಕ.

ಹೆತ್ತ ತಂದೆತಾಯಿಗಳನ್ನ ಬೀದಿಪಾಲು ಮಾಡಿ, ಆಸ್ತಿಯ ಮೇಲೆ ಕುಂತು ಮಜಾಮಾಡುವಂಥ ಮಕ್ಕಳಿರೊ ಈ ಕಾಲದಲ್ಲಿ ತನ್ನನ್ನ ಅಗಲಿದ ಅಮ್ಮನ ನೆನಪು ಸದಾ ಚಿರಾಕಾಲವಾಗಿರಬೇಕು ಅಂತ ಪ್ರೇಮ್​ ಮಾಡ್ತಿರೊ ಕಾರ್ಯ ನಿಜಕ್ಕೂ ಶ್ಲಾಘನೀಯ. ತಾಯಿ ಆಶೀರ್ವಾದವೊಂದಿದ್ದರೆ ಯಾವ ದೇವರಿಗೂ ಕಷ್ಟಕೊಡೊ ಧೈರ್ಯಬರೋಲ್ಲ ಅನ್ನೋದಕ್ಕೆ ಪ್ರೇಮ್ ಅವರ ಜೀವನವೇ ಸಾಕ್ಷಿ.

Comments are closed.