ಈ ಮನುಷ್ಯನಿಗೆ ಇದೆಂಥಾ ಗೀಳೋ ಗೊತ್ತಿಲ್ಲ…ಆದರೆ ಅತ್ಯಂತ ಅಪಾಯಕಾರಿಯಂತೂ ಹೌದು. ಈತನೊಬ್ಬ ಟ್ಯಾಟೂ ಅಡಿಕ್ಟೆಡ್. ಮೈತುಂಬ ಟ್ಯಾಟೂಗಳೇ ತುಂಬಿವೆ. ಅದಾದರೂ ಪರವಾಗಿಲ್ಲ. ಆದರೆ ಈತ ಮತ್ತೊಂದು ಹೆಜ್ಜೆ ಮುಂದುವರಿದು ವಿಚಿತ್ರ ಕೆಲಸ ಮಾಡಿದ್ದಾನೆ.
ಜರ್ಮನಿಯವನಾದ ಈ ವ್ಯಕ್ತಿ ತನ್ನ ದೇಹವನ್ನು ರೂಪಾಂತರ ಮಾಡಿಕೊಳ್ಳಲು 5.85 ಲಕ್ಷ ರೂಪಾಯಿ (6,000 ಪೌಂಡ್)ಯನ್ನು ಖರ್ಚು ಮಾಡಿದ್ದಾನೆ…ತನ್ನ ಎರಡೂ ಕಿವಿಯನ್ನು ಕತ್ತರಿಸಿಕೊಂಡಿದ್ದು, ತಲೆಯನ್ನು ಥೇಟ್ ತಲೆಚಿಪ್ಪಿನಂತೆ ಕಾಣುವಂತೆ ಮಾಡಿಕೊಂಡಿದ್ದಾನೆ.
ಸ್ಯಾಂಡ್ರೋ ಎಂದು ಈತನ ಹೆಸರು. 39 ವರ್ಷದ ಈತನೀಗ ‘ಮಿಸ್ಟರ್ ಸ್ಕಲ್ ಫೇಸ್’ ಎಂದೇ ಪ್ರಸಿದ್ಧ. ಸ್ಯಾಂಡ್ರೋ ದೇಹದಲ್ಲಿ ಒಟ್ಟು 17 ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಹಣೆ, ಮುಂದೋಳಿನ ಕಸಿ, ಕೈಯ ಹಿಂಭಾಗದ ಕಸಿ ಸೇರಿ 17 ಬಗೆಯ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇನ್ನು 2019ರಲ್ಲಿ ಎರಡೂ ಕಿವಿಗಳನ್ನು ತೆಗೆಸಿಬಿಟ್ಟಿದ್ದಾರೆ. ಅದನ್ನವರು ಜಾರ್ನಲ್ಲಿ ಭದ್ರವಾಗಿ ಇಟ್ಟಿದ್ದಾರೆ. ಇದನ್ನೂ ಓದಿ: ತಂದೆಯನ್ನು ಕೊಂದ ಮಗನ ಬಂಧನ, 2 ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದ ಆರೋಪಿ
ಇದನ್ನೆಲ್ಲ ನೋಡಿದ ಸ್ಥಳೀಯ ಜನರು ಸ್ಯಾಂಡ್ರೋ ಒಬ್ಬ ಕ್ರೇಜಿ ವ್ಯಕ್ತಿ, ಅನಾರೋಗ್ಯಕರ ಮತ್ತು ಗೊಂದಲಕ್ಕೀಡಾಗಿರುವ ವ್ಯಕ್ತಿ ಎಂದೇ ಕರೆಯುತ್ತಿದ್ದಾರೆ. ಆದರೆ ಆತ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ನನ್ನ ದೇಹದಲ್ಲಿ ನಾನು ಮಾಡಿಕೊಂಡ ಬದಲಾವಣೆಗಳೆಲ್ಲ ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಎಂದು ಹೇಳಿದ್ದಾನೆ.
ಯಾರೇನೇ ಟೀಕೆ ಮಾಡಿದರೂ ನನಗೇನೂ ಸಮಸ್ಯೆಯಿಲ್ಲ..ಹಾಗೇ ಹೊಗಳುವವರಿಗೆ ಖಂಡಿತ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾನೆ.
Comments are closed.