ಮನೋರಂಜನೆ

‘ಮಹಾಭಾರತ’ ಧಾರಾವಾಹಿ ಕಲಾವಿದರಿಗೆ ಸಿಗುವ ಸಂಭಾವನೆ ಎಷ್ಟು ಗೊತ್ತಾ?

Pinterest LinkedIn Tumblr


ಭಾರತೀಯ ಚಿತ್ರರಂಗದಲ್ಲಿ ಯಾವುದೇ ಕಥೆ ಇಟ್ಟುಕೊಂಡು ಧಾರಾವಾಹಿ ಮಾಡಿದರೂ ಕೂಡ ಮಹಾಭಾರತ-ರಾಮಾಯಣ ಧಾರಾವಾಹಿಗಳನ್ನು ಹಿಂದೆ ತಳ್ಳಿ, ಮುನ್ನುಗ್ಗುವುದು ಸುಲಭವಲ್ಲ. ಪೌರಾಣಿಕ ಧಾರಾವಾಹಿಗಳನ್ನು ಚಿಕ್ಕ ಮಕ್ಕಳಿಂದ ಹಿಡಿದು, ವೃದ್ಧರೂ ಕೂಡ ತುಂಬ ಪ್ರೀತಿ-ಶ್ರದ್ಧೆಯಿಂದ ನೋಡುತ್ತಾರೆ. ಲಾಕ್‌ಡೌನ್ ಟೈಮ್‌ನಲ್ಲಿ ಶೂಟಿಂಗ್ ಸಂಪೂರ್ಣ ಸ್ಥಗಿತವಾಗಿತ್ತು. ಧಾರಾವಾಹಿಗಳ ಎಪಿಸೋಡ್‌ ಬ್ಯಾಂಕಿಂಗ್ ಇಲ್ಲದೆ ‘ಮಹಾಭಾರತ’ ಹಾಗೂ ‘ರಾಮಾಯಣ’ ಮುಂತಾದ ಪೌರಾಣಿಕ ಧಾರಾವಾಹಿಗಳನ್ನು ಪುನಃ ಪ್ರಸಾರ ಮಾಡಲಾಯ್ತು. ಇದರಿಂದ ದಾಖಲೆಯ ಟಿಆರ್‌ಪಿ ಕೂಡ ಬಂತು. ‘ಮಹಾಭಾರತ’ ಧಾರಾವಾಹಿಯಲ್ಲಿ ಕೃಷ್ಣ ಪಾತ್ರವನ್ನು ಹಲವರು ಮೆಚ್ಚಿಕೊಂಡಿದ್ದರು. ಅದರಲ್ಲೂ ಈ ಪೌರಾಣಿಕ ಸೀರಿಯಲ್‌ನಲ್ಲಿ ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ನಟಿಸಿದ್ದರು.

‘ಮಹಾ ಭಾರತ’ ಧಾರಾವಾಹಿಯಲ್ಲಿರುವ ಮುಖ್ಯ ಪಾತ್ರಗಳಿಗೆ ಜೀವ ತುಂಬಿದವರ ನಿಜವಾದ ಹೆಸರು
ಕೃಷ್ಣ-ಸೌರಭ್ ಜೈನ್
ಅರ್ಜುನ-ಶಾಹೀರ್ ಶೇಖ್
ಪೂಜಾ ಶರ್ಮಾ-ದ್ರೌಪದಿ
ಕರ್ಣ-ಆಹಂ ಶರ್ಮಾ
ಭೀಷ್ಮ-ಆರವ್ ಚೌಧರಿ
ಅರ್ಪಿತ್ ರಂಕಾ-ಧುಯೋಧನ
ಸೌರವ್ ಗುರ್ಜರ್-ಭೀಮ್
ರೋಹಿತ್ ಭಾರದ್ವಾಜ್-ಯುಧಿಷ್ಠಿರ

ಧಾರಾವಾಹಿ, ಸಿನಿಮಾವಾಗಲೀ ಕಲಾವಿದರಿಗೆ ಒಳ್ಳೆಯ ಸಂಭಾವನೆ ಸಿಗುತ್ತದೆ ಎಂದು ಕೆಲವರು ಅಂದುಕೊಳ್ಳುವುದುಂಟು. ಆದರೆ ಎಲ್ಲ ಕಲಾವಿದರಿಗೆ ಒಳ್ಳೆಯ ಸಂಭಾವನೆ ಸಿಗೋದಿಲ್ಲ. ಬಾಲಿವುಡ್‌ನಲ್ಲಿ ಕಲಾವಿದರಿಗೆ ಒಳ್ಳೆಯ ಸಂಭಾವನೆ ಇದೆ ಎಂದು ಹೇಳುವುದುಂಟು.

‘ಮಹಾಭಾರತ’ ಧಾರಾವಾಹಿಯ ಕಲಾವಿದರು (net worth)

ಸೌರಭ್ ಜೈನ್- 37,06,58,000 ರೂಪಾಯಿ
ಶಾಹೀರ್ ಶೇಖ್-22,24,11,150 ರೂಪಾಯಿ

ಪೂಜಾ ಶರ್ಮಾ-4,44,82,230 ರೂಪಾಯಿ
ಆಹಂ ಶರ್ಮಾ-(1-5 ಮಿಲಿಯನ್ ಡಾಲರ್ ಒಳಗಡೆ)
ಆರವ್ ಚೌಧರಿ-14,82,70,100 ರೂಪಾಯಿ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಮಹಾಭಾರತ’ ಹಿಂದಿ ಧಾರಾವಾಹಿಯ ಕನ್ನಡ ಅವತರಣಿಕೆ ಪ್ರಸಾರ ಆಗುತ್ತಿದೆ. ಡಬ್ಬಿಂಗ್ ಧಾರಾವಾಹಿಯಾದರೂ ಕೂಡ ಇದರ ಟಿಆರ್‌ಪಿ ಹೆಚ್ಚಿದೆ. ಸ್ತಿಕ್‌‌ ಪ್ರೊಡಕ್ಷನ್ಸ್‌ ಕಂಪನಿ ನಿರ್ಮಿಸಿದ ಈ ಧಾರಾವಾಹಿಯು ಸೆಪ್ಟೆಂಬರ್‌ 2013ರಿಂದ ಆಗಸ್ಟ್‌ 2014ರವರೆಗೆ ಒಟ್ಟು 276 ಸಂಚಿಕೆಗಳಲ್ಲಿ ಮೂಡಿಬಂದಿರುವ ಈ ಧಾರಾವಾಹಿಯು, ಹಿಂದಿಯ ‘ಸ್ಟಾರ್‌ ಪ್ಲಸ್‌’ ವಾಹಿನಿಯಲ್ಲಿ ಪ್ರಸಾರ ಆಗಿತ್ತು.

Comments are closed.