ಟೋಕಿಯೋ: ಜಗತ್ತು ಕರೊನಾ ಸೋಂಕಿನ ಭೀತಿ ಆತಂಕದಲ್ಲಿದ್ದರೆ, ‘rojo-ne'(ರೋಜೋ-ನೆ) ಎಂಬ ವಿಚಿತ್ರ ಕಾಯಿಲೆಯ ಬಗ್ಗೆ ಜಪಾನಿನ ವಾಹನ ಚಾಲಕರು ಆತಂಕಿತರಾಗಿದ್ದಾರೆ. ರಾತ್ರೆ ಹೊತ್ತು ಡ್ರೈವಿಂಗ್ ಮಾಡೋಕೆ ಜನ ಹೆದರ್ತಿದ್ದಾರೆ. ಇಂತಹ ವಿಚಿತ್ರ ಸೀಕು ಹೆಚ್ಚಾಗಿ ಕಂಡುಬಂದಿರುವುದು ಜಪಾನಿನ ಒಕಿನಾವಾ ಪ್ರಾಂತ್ಯದಲ್ಲಿ!
ಒಕಿನಾವಾ ಪ್ರಾಂತ್ಯದಲ್ಲಿ ಕಳೆದ ಒಂದೇ ವರ್ಷ 7,000 ಇಂತಹ ಕೇಸ್ ದಾಖಲಾಗಿವೆ. ಇಂತಹ ಸೀಕ್ ಬಂದವರ ಪೈಕಿ ಕೆಲವರು ರಸ್ತೆಯಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೇಸರದ ಸಂಗತಿ ಎಂದರೆ ಈ ರೋಗವನ್ನು ನಿವಾರಿಸೋದಕ್ಕೆ ಪ್ರಯತ್ನಿಸಿದ್ರೂ ಪ್ರಯೋಜನ ಆಗಿಲ್ವಂತೆ. ಅಂದ ಹಾಗೆ, ರೋಜೊ-ನೇ ಎಂದರೆ ರಸ್ತೆ ಮೇಲೆ ಮಲ್ಕೊಳ್ಳೋದು ಎಂಬುದು ಆ ಪದದ ಯಥಾವತ್ ಅರ್ಥ.
ಜನ ಯಾಕೆ ರಾತ್ರೆ ಹೊತ್ತು ರಸ್ತೆಯಲ್ಲಿ ಮಲಗ್ತಾರೆ? ನೀವು ಗೆಸ್ ಮಾಡಿರ್ತೀರಿ. ಕುಡ್ದು ಬಿದ್ಕೊಂಡಿರಬೇಕು ಅಂತ.. ಅದೂ ನಿಜಾನೇ.. ಕಂಠಮಟ್ಟ ಕುಡಿದವರಿಗೆ ರಸ್ತೆಯೇ ಬೆಡ್ ಅಂತೆ ಅಲ್ಲಿ.. ಕಳೆದ ವರ್ಷವಂತೂ ಇಂತಹ ಕೇಸ್ಗಳ ಸಂಖ್ಯೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಮಾಡುತ್ತಿದ್ದು, ನಿರೀಕ್ಷಿತ ಫಲ ಕೊಟ್ಟಿಲ್ಲ ಎಂಬುದು ಇಲಾಖೆಯ ಖೇದ.
ಗೂಗಲ್ ಸರ್ಚ್ ಗೆ ಹೋಗಿ ‘rojo-ne’ ಎಂದು ಟೈಪ್ ಮಾಡಿದ್ರೆ ನೂರಾರು ಫೋಟೋಗಳು ಕಾಣುತ್ತವೆ. ಎಲ್ಲದರಲ್ಲೂ ರಸ್ತೆ ಮೇಲೆ ಮಲಗಿದವರನ್ನು ಕಾಣಬಹುದು. ಅವರ ಪಕ್ಕದಲ್ಲೇ ವಾಹನಗಳು ಸಂಚರಿಸುತ್ತಿರುತ್ತವೆ. ಕೆಲವೊಮ್ಮೆ ಇದು ಅಪಘಾತಕ್ಕೂ ಕಾರಣವಾಗಿ ಮಲ್ಕೊಂಡಿದ್ದವರು ಪ್ರಾಣ ಕಳೆದುಕೊಂಡ ಘಟನೆಯೂ ನಡೆದಿವೆ. ಇನ್ನೂ ವಿಚಿತ್ರ ಏನಪ್ಪ ಅಂದ್ರೆ, ಈ ರೀತಿ ಮಲ್ಕೊಳ್ಳುವವರ ಪೈಕಿ ಯುವತಿಯರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರದ್ದು ವಿಚಿತ್ರ ವರ್ತನೆ. ಮನೆಗೆ ತಲುಪಿದ್ದೇವೆ ಎಂಬ ಭಾವನೆಯಲ್ಲಿ ರಸ್ತೆ ಮಧ್ಯದಲ್ಲೇ ಬೆತ್ತಲಾಗಿ ಬಿಡುತ್ತಾರಂತೆ!
ಸರ್ಕಾರ ಈ ಕಾಯಿಲೆಯನ್ನು ಅಪರಾಧ ಎಂದು ಪರಿಗಣಿಸಿದ್ದು, ಉಲ್ಲಂಘನೆಗೆ 50,000 ಯೆನ್ ದಂಡ ವಿಧಿಸಲಾರಂಭಿಸಿದೆ. ಅಲ್ಲದೆ ಜಾಗೃತಿ ಮೂಡಿಸುವ ಸಲುವಾಗಿ rojo-ne ಫೋಟೋಗಳನ್ನು ಬಳಸತೊಡಗಿದೆ. ಆದ್ರೆ ಏನು ಮಾಡೋದು ಇನ್ನೂ ಜಾಗೃತಿ ಮೂಡಿಲ್ವಂತೆ..
Comments are closed.