ಮನೋರಂಜನೆ

ಲಾಕ್​ಡೌನ್ ಸಮಯದಲ್ಲಿ​ ಬದುಕುವುದೇ ಬೇಡ ಎಂದುಕೊಂಡಿದ್ದೆ; ರಘು ದೀಕ್ಷಿತ್

Pinterest LinkedIn Tumblr


ಲಾಕ್​ಡೌನ್​ ಅವಧಿಯಲ್ಲಿ ಅನೇಕರಿಗೆ ಖಿನ್ನತೆ ಕಾಡಿತ್ತು. ಡಿಪ್ರೆಷನ್​ ಕಾಡಿದ ನಂತರ ಅನೇಕರು ಸಾಯುವ ನಿರ್ಧಾರ ಮಾಡುತ್ತಾರೆ. ಸುಶಾಂತ್​ ಸಿಂಗ್​ ಖಿನ್ನತೆಗೆ ಆತ್ಮಹತ್ಯೆ ಮಾಡಿಕೊಂಡರು ಎನ್ನುವ ವಿಚಾರ ಹೊರ ಬಿದ್ದ ನಂತರವಂತೂ ಅನೇಕರು ಈ ಬಗ್ಗೆ ಹೇಳಿಕೊಂಡಿದ್ದರು. ಈಗ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್ ಕೂಡ ತಮಗೆ ಕಾಡಿದ ಖಿನ್ನತೆ ಬಗ್ಗೆ ಮೌನ ಮುರಿದಿದ್ದಾರೆ.

ಆ್ಯಂಕರ್​ ಅನುಶ್ರೀ ಅವರ ಜೊತೆಗಿನ ಸಂದರ್ಶನದ ವೇಳೆ ರಘು ದೀಕ್ಷಿತ್​ ಈ ವಿಚಾರ ಹೇಳಿಕೊಂಡಿದ್ದಾರೆ. “ಲಾಕ್​ಡೌನ್​ ವೇಳೆ ನನ​ಗೆ ತುಂಬಾನೇ ಡಿಪ್ರೆಷನ್​ ಕಾಡಿತ್ತು. ನಾನು ಬುದುಕ ಬೇಕೋ ಅಥವಾ ಬೇಡವೋ ಎನ್ನುವ ಗೊಂದಲ ಕೂಡ ನನ್ನಲ್ಲಿ ಹುಟ್ಟಿಕೊಂಡಿತ್ತು. ಮೊದಲ ಒಂದು ತಿಂಗಳು ಕೇವಲ ತಿನ್ನುವುದು ಹಾಗೂ ಮಲಗುವುದರಲ್ಲೇ ಕಳೆದ. ಒಂದು ದಿನ ಕನ್ನಡಿಯಲ್ಲಿ ನನ್ನ ಮುಖ ನೋಡಿ ನನಗೇ ಅಸಹ್ಯ ಎನಿಸಿತ್ತು. ನನ್ನ ದೇಹದ ತೂಕ ಕೂಡ ಜಾಸ್ತಿ ಆಗಿತ್ತು. ನಂತರ ಡಯಟ್​ ಮಾಡಿ, ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲಿ ಥೆರೆಪಿಸ್ಟ್​ಗಳನ್ನು ಕನ್ಸಲ್ಟ್​ ಮಾಡಿದ್ದೆ. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದೇನೆ,” ಎಂದಿದ್ದಾರೆ.

“ಈ ಸಿನಿಮಾ ಮಾಡಿದರೆ ಖುಷಿ ಸಿಗುತ್ತದೆ. ಇಷ್ಟು ಹಣ ಮಾಡಿದರೆ ಖುಷಿ ಸಿಗುತ್ತದೆ ಎನ್ನುವ ಕಲ್ಪನೆ ಇರುತ್ತದೆ. ನಾನು ಥೆರೆಪಿಸ್ಟ್​ಗಳನ್ನು ಭೇಟಿ ಮಾಡಿದ ನಂತರ ನನ್ನ ಆಲೋಚನೆಗೆ ಹೊಸ ರೂಪ ಸಿಕ್ಕಿತ್ತು. ಅವರಿಂದ ನನ್ನ ಬಾಳು ಹಾಳಾಯ್ತು ಎಂದು ಅನೇಕರು ಓಡಾಡಿಕೊಂಡಿರುತ್ತಾರೆ. ಆದರೆ, ಈ ಕೋರ್ಸ್​ ಮುಗಿದ ನಂತ ನನ್ನ ಆಲೋಚನೆಗಳು ತಪ್ಪು, ಎಂಬುದು ಅರಿವಾಗಿದೆ,” ಎಂದಿದ್ದಾರೆ.

“ಖಿನ್ನತೆ ಎಂಬುದು ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಿಗೆ ಕಾಡಿರುತ್ತದೆ ಎಂದಿರುವ ರಘು ದೀಕ್ಷಿತ್​, ಡಿಪ್ರೆಷನ್​ ಬಹುತೇಕರಿಗೆ ಕಾಡಿರುತ್ತದೆ. ಇಂಥ ಸಂದರ್ಭದಲ್ಲಿ ಕುಟುಂಬ, ಗೆಳೆಯರು ಬೆಂಬಲ ನೀಡುವುದಿಲ್ಲ. ಹಾಗಾಗಾಬಾರದು,” ಎಂದಿದ್ದಾರೆ.

Comments are closed.