ಮನೋರಂಜನೆ

ನಮಗೆ ಮಕ್ಕಳಾಗಿಲ್ಲ, ಎಲ್ಲವೂ ದೇವರ ಕೈಯಲ್ಲಿದೆ: ಬಾಲಿವುಡ್ ನಟಿ ಬಿಪಾಶಾ ಬಸು

Pinterest LinkedIn Tumblr

ಬಾಲಿವುಡ್ ನಟಿ, ಗ್ಲಾಮರಸ್ ಚೆಲುವೆ, ಕೃಷ್ಣ ಸುಂದರಿ ಬಿಪಾಶಾ ಬಸು ಕುಟುಂಬವನ್ನು ವಿಸ್ತರಿಸುವ ಪ್ಲ್ಯಾನ್‌ನಲ್ಲಿದ್ದಾರಂತೆ. ಆದರೆ ಅವರು ಇದೆಲ್ಲ ದೇವರ ಕೈಯಲ್ಲಿದೆ ಎಂದಿದ್ದಾರೆ. ಸಮಸ್ಯೆ ಇರೋದರಿಂದ ಅವರು ಮಕ್ಕಳನ್ನು ದತ್ತು ಪಡೆಯುವ ಆಲೋಚನೆಯಲ್ಲಿದ್ದಾರೆ.

ಮಕ್ಕಳನ್ನು ದತ್ತು ಪಡೆಯುತ್ತೇವೆ: ಬಿಪಾಶಾ ಬಸು!
‘ನಮಗೆ ಇನ್ನೂ ಮಕ್ಕಳಾಗಿಲ್ಲ, ಪರವಾಗಿಲ್ಲ. ದೇವರು ಏನು ಅಂದುಕೊಳ್ತಾನೋ ಅದೇ ಆಗುತ್ತದೆ. ದೇಶದಲ್ಲಿ ಸಾಕಷ್ಟು ಮಕ್ಕಳಿವೆ. ನಾವು ಅವುಗಳ ಕಾಳಜಿ ಕೂಡ ಮಾಡಬಹುದು. ನಾವೆಲ್ಲ ನಿಜಕ್ಕೂ ಅದೃಷ್ಟವಂತರು. ಆದರೆ ವಿಶ್ವದಲ್ಲಿ ಮೂಲಭೂತ ಅವಶ್ಯಕತೆಯಿಲ್ಲದ ಎಷ್ಟೋ ಮಕ್ಕಳಿದ್ದಾರೆ. ಅವರನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಭವಿಷ್ಯದಲ್ಲಿ ಏನಾಗತ್ತೆ ನೋಡೋಣ’ ಎಂದು ಮಾಧ್ಯಮವೊಂದಕ್ಕೆ ನಟಿ ಬಿಪಾಶಾ ಬಸು ಹೇಳಿದ್ದಾರೆ.

ಯಾವುದು ನಮ್ಮ ಕೈಯಲ್ಲಿಲ್ಲ ಎಂದ ಕರಣ್ ಗ್ರೋವರ್
‘ಬಿಪಾಶಾ ಮಕ್ಕಳಾಗುವ ವಿಚಾರದ ಬಗ್ಗೆ ದೇವರಿಗೆ ಬಿಟ್ಟಿದ್ದಾಳೆ. ಜಗತ್ತಿನಲ್ಲಿರುವ ಶಕ್ತಿಯು ತನ್ನದೇ ಆದ ಪ್ಲ್ಯಾನ್ ಹಾಗೂ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಆಗಾಗ ಮರೆಯುತ್ತೇವೆ. ಯಾವುದು ನಮ್ಮ ಕೈಯಲ್ಲಿಲ್ಲ’ ಎಂದು ಬಿಪಾಶಾ ಬಸು ಪತಿ ಕರಣ್ ಗ್ರೋವರ್ ಹೇಳಿದ್ದಾರೆ.

ಪ್ರೀತಿಸಿ ಮದುವೆಯಾಗಿರುವ ಬಿಪಾಶಾ-ಕರಣ್
ನಟ ಡಿನೋ ಮೋರಿಯಾ ಜೊತೆ ಬಿಪಾಶಾ ಬಸು 4 ವರ್ಷಗಳ ಕಾಲ ರಿಲೇಶನ್‌ಶಿಪ್‌ನಲ್ಲಿದ್ದರು. ಆಮೇಲೆ ಜಾನ್ ಅಬ್ರಹಾಂ ಜೊತೆ ಕೂಡ ಡೇಟ್ ಮಾಡಿದ್ದರು. ಆಮೇಲೆ 2005ರಲ್ಲಿ ‘ಅಲೋನ್‌’ ಸಿನಿಮಾ ಮೂಲಕ ಕರಣ್ ಗ್ರೋವರ್ ಸಿಂಗ್ ಭೇಟಿ ಮಾಡಿದ್ದ ಬಿಪಾಶಾ ಬಸು ಪ್ರೀತಿಯಲ್ಲಿ ಬಿದ್ದು, 2016ರಲ್ಲಿ ಕರಣ್‌ರನ್ನೇ ಮದುವೆಯಾಗಿದ್ದರು. ಕರಣ್‌ಗೆ ಇದು ಮೂರನೇ ಮದುವೆಯಾಗಿದೆ.

ತೆರೆ ಮೇಲೆ ಮತ್ತೆ ಒಂದಾದ ಈ ಜೋಡಿ
‘ಡೇಂಜರಸ್’ ಸಿನಿಮಾಕ್ಕೋಸ್ಕರ 5 ವರ್ಷಗಳ ನಂತರದಲ್ಲಿ ಈ ಜೋಡಿ ತೆರೆ ಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಬಿಪಾಶಾ ಕೂಡ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದರು. ಈ ಸಿನಿಮಾವನ್ನು ಗಾಯಕ ಮಿಕಾ ನಿರ್ಮಿಸಿದ್ದರು. ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಕಳೆದ ವಾರ ರಿಲೀಸ್ ಆಗಿತ್ತು.

Comments are closed.