ಮನೋರಂಜನೆ

ಕೊರೋನಾ ಪಾಟಿಸಿವ್ ಬಂದ ನಟಿ ನತಾಶಾ ಸೂರಿ ಹೇಳಿದ್ದೇನು…?

Pinterest LinkedIn Tumblr

ನಟಿ ನತಾಶಾ ಸೂರಿಗೆ ಮಹಮಾರಿ ಕೊರೋನಾ ವಕ್ಕರಿಸಿದ್ದು ನಾನು ದೈಹಿಕವಾಗಿ ದುರ್ಬಲ ಮತ್ತು ದಣಿದಿದ್ದೇನೆ ಎಂದು ನಟಿ ಹೇಳಿದ್ದಾರೆ.

ಆಗಸ್ಟ್ ಮೊದಲ ವಾರದಿಂದಲೂ ನಾನು ಮನೆಯಲ್ಲೇ ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಆಗಸ್ಟ್ 1ರಂದು ನಾನು ಕೆಲಸ ನಿಮಿತ್ತ ಪುಣೆಗೆ ಹೋಗಿದ್ದೆ. ಅಲ್ಲಿ ಕೊರೋನಾ ವಕ್ಕರಿಸಿರಬಹುದು. ಸದ್ಯ ನನ್ನಿಂದ ನನ್ನು ತಂಗಿ ರೂಪಾಲಿ ಮತ್ತು ನನ್ನ ಅಜ್ಜಿ ಸಹ ಕೊರೋನಾಗೆ ತುತ್ತಾಗಿದ್ದಾರೆ ಎಂದು ನತಾಶಾ ಹೇಳಿದ್ದಾರೆ.

ಇದೇ ವೇಳೆ ನಾನು ಮತ್ತು ನನ್ನ ಕುಟುಂಬದವರು ಚೇತರಿಸಿಕೊಳ್ಳುತ್ತಿದ್ದೇವೆ. ದೇವರ ಅನುಗ್ರಹದಿಂದ ಶೀಘ್ರದಲ್ಲೇ ಗುಣಮುಖರಾಗುತ್ತೇವೆ. ಆದರೆ ನಾನು ಪ್ರಸ್ತುತ ದೈಹಿಕವಾಗಿ ದುರ್ಬಲ ಮತ್ತು ದಣಿದಿದ್ದೇನೆ, ಆದರೆ ಮಾನಸಿಕವಾಗಿ ಲವಲವಿಕೆಯಿಂದಿದ್ದೇನೆ. ನನ್ನ ಮುಂದಿನ ಚಿತ್ರ ಡೇಂಜರ್ಸ್ ಚಿತ್ರ ಶ್ರೀಘ್ರದಲ್ಲೇ ಬಿಡುಗಡೆಯಾಗಲಿದ್ದು ಅದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇನೆ ಎಂದರು.

ಸದ್ಯ ದೇಶದಲ್ಲಿ ಕೊರೋನಾ ಹಿನ್ನೆಲೆಯಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಇಲ್ಲದಿರುವುದರಿಂ ಡೇಂಜರ್ಸ್ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

Comments are closed.