‘ಸತ್ಯ ಏನು ಎಂಬುದು ಸುಶಾಂತ್ ಕುಟುಂಬಕ್ಕೆ ಗೊತ್ತಾಗಬೇಕಿದೆ’ ಎಂದ ನಟ ಅನುಪಮ
ನಟ ಸುಶಾಂತ್ ಸಿಂಗ್ ನಿಧನದ ಬಳಿಕ ಬಾಲಿವುಡ್‌ನಲ್ಲಿ ಅನೇಕ ಬೆಳವಣಿಗೆಗಳಾಗಿವೆ. ಪೊಲೀಸರು ಅನೇಕ ಆಯಾಮಗಳಿಂದ ತನಿಖೆ ಮಾಡುತ್ತಿದ್ದಾರೆ. ಇದೀಗ ಹಿರಿಯ ನಟ ಅನುಪಮ್ ಖೇರ್ ಕೂಡ ಸುಶಾಂತ್ ಸಾವಿನ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಹಂಚಿಕೊಂಡಿರುವ ಅನುಪಮ್, ‘ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಯು ಜೂನ್‌ನಿಂದ ಇಲ್ಲಿವರೆಗೂ ಸಾಕಷ್ಟು ಏರಿಳಿತಗಳನ್ನು ಕಂಡಿದೆ. ಇದು ದುಃಖದ ವಿಷಯ. ಸಾಕಷ್ಟು ಮಂದಿ ಈ ಬಗ್ಗೆ ಮಾತನಾಡುತ್ತಿಲ್ಲ. ನನಗೂ ಏನು ಮಾತನಾಡಬೇಕೆಂದು ಗೊತ್ತಿಲ್ಲ. ಆದರೆ, ನೋಡಿಕೊಂಡು ಸುಮ್ಮನೇ ಇರಲು ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿಯನ್ನು ಗಮನಿಸುತ್ತಿದ್ದರೆ, ಯಾರನ್ನೂ ದೂಷಿಸಲು ಆಗುತ್ತಿಲ್ಲ’ ಎಂದಿದ್ದಾರೆ.
ನಂತರ ಮಾತು ಮುಂದುವರಿಸಿರುವ ಅವರು, ‘ನಾನೊಬ್ಬ ಕಲಾವಿದನಾಗಿ, ಸುಶಾಂತ್ ಜೊತೆಗೆ ನಟಿಸಿದ್ದೇನೆ. ನಾವೆಲ್ಲರು ಅವರ ಅಭಿನಯವನ್ನು ತುಂಬ ಹೋಗಳಿದ್ದೇವೆ. ಸುಶಾಂತ್ ಬೇರೊಬ್ಬರ ಮಗ, ಬೇರೊಬ್ಬರ ಸಹೋದರ. ಅವರ ಸಾವಿನ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಸಿಗಲೇಬೇಕು. ಅದು ತುಂಬ ಅವಶ್ಯಕವಾಗಿದೆ. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ, ಯಾರು ಭಾಗಿಯಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಅವರ ಕುಟುಂಬದವರು, ಅವರ ಅಭಿಮಾನಿಗಳು, ಅವರ ಆತ್ಮೀಯರಿಗಾಗಿ ಸತ್ಯ ಏನೆಂಬುದು ಬಹಿರಂಗವಾಗಬೇಕಿದೆ’ ಎಂದು ಹೇಳಿದ್ದಾರೆ
Comments are closed.