ಮನೋರಂಜನೆ

ರಾಧಿಕಾ ಪಂಡಿತ್​ ಕೊಟ್ಟ ಸರ್​ಪ್ರೈಸ್​ ಇದು!

Pinterest LinkedIn Tumblr

ಸೋಮವಾರ ಬೆಳಿಗ್ಗೆಯೇ ಒಂದು ಸರ್​ಪ್ರೈಸ್​ ಕೊಡುವುದಾಗಿ ಹೇಳಿದ್ದರು ರಾಧಿಕಾ ಪಂಡಿತ್​. ಅದಕ್ಕೆ ಸರಿಯಾಗಿ ಸಂಜೆಯ ಹೊತ್ತಿಗೆ ಅವರು ಒಂದಿಷ್ಟು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

ಆ ಸರ್​ಪ್ರೈಸ್​ ಏನು ಗೊತ್ತಾ? ಅವರ ಮುದ್ದು ಮಕ್ಕಳ ಫೋಟೋಗಳು. ಸೋಮವಾರ ರಕ್ಷಾ ಬಂಧನ ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಸಂದರ್ಭದಲ್ಲಿ ಯಶ್​ ಮತ್ತು ರಾಧಿಕಾ ಪಂಡಿತ್​ ಅವರ ಮಕ್ಕಳು ರಕ್ಷಾ ಬಂಧನ ಆಚರಿಸಿದ್ದಾರೆ. ಯಶ್ -ರಾಧಿಕಾ ಪುತ್ರಿ ಪುಟ್ಟ ಸಹೋದರನಿಗೆ ಆರತಿ ಬೆಳಗಿ ರಾಖಿ ಕಟ್ಟಿದ್ದಾಳೆ.

ಐರಾ ಮತ್ತು ತಮ್ಮನಿಗೆ ಇದು ಜೀವನದ ಮೊತ್ತ ಮೊದಲ ರಕ್ಷಾ ಬಂಧನ. ಸ್ವತಃ ರಾಧಿಕಾ ಪಂಡಿತ್​ ಅವರು ಮುಂದೆ ನಿಂತು, ಈ ತಮ್ಮ ಮಗಳ ಕೈಯಲ್ಲಿ ಆಕೆಯ ತಮ್ಮನಿಗೆ ರಾಖಿ ಕಟ್ಟಿಸಿದ್ದಾರೆ.

ಇತ್ತ ಐರಾ ತನ್ನ ತಮ್ಮನಿಗೆ ರಾಖಿ ಕಟ್ಟಿ ಸಂಭ್ರಮಿಸಿದರೆ, ಆ ಕಡೆ ಯಶ್​ಗೆ ಅವರ ಕಿರಿಯ ಸಹೋದರಿ ನಂದಿನಿ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಹಲವು ವರ್ಷಗಳಿಂದ, ರಕ್ಷಬಂಧನದ ದಿನ ತಮ್ಮ ಅಣ್ಣನಿಗೆ ರಾಖಿ ಕಟ್ಟಿ ಆಶೀರ್ವಾದ ಪಡೆಯುವ ನಂದಿನಿ, ಈ ಬಾರಿ ಸಹ ಯಶ್ ಅವರಿಗೆ ರಾಖಿ ಕಟ್ಟಿ, ಅಣ್ಣನ ಆಶೀರ್ವಾದ ಪಡೆದಿದ್ದಾರೆ.

 

Comments are closed.