ಕನಸುಗಾರ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್ ‘ತ್ರಿವಿಕ್ರಮ’ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡ್ತಿದ್ದಾರೆ… ಅಪ್ಪ ರವಿಚಂದ್ರನ್ ಸ್ಟಾರ್ ಆಗಿದ್ರೂ ಕೂಡ, ಅಪ್ಪನ ಸ್ಟಾರ್ ವ್ಯಾಲ್ಯೂವನ್ನ ಬಳಸಿಕೊಳ್ಳದೆ ಬೇರೆ ಸಿನಿಮಾಗಳಲ್ಲಿ ಒಬ್ಬ ಕಾರ್ಮಿಕನಂತೆ ದುಡಿದು ಸಿನಿಮಾ ಎಕ್ಸ್ ಪೀರಿಯನ್ಸ್ ಪಡೆದುಕೊಂಡ ವಿಕ್ರಂ ರವಿಚಂದ್ರನ್.. ಸಹನಾ ಮೂರ್ತಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಈಗಾಗ್ಲೆ ತ್ರಿವಿಕ್ರಮ ಸಿನಿಮಾ ಫಸ್ಟ್ ಲುಕ್, ಟೀಸರ್ ರಿಲೀಸ್ ಆಗಿದ್ದು , ಸಿನಿ ಪ್ರಿಯರಲ್ಲಿ ಚಿತ್ರದ ಬಗ್ಗೆ ಸಾಕಷ್ಟು ನಿರಿಕ್ಷೆಗಳನ್ನ ಹೆಚ್ಚಿಸಿದೆ.
ಜ್ಯೂನಿಯರ್ ಕನಸುಗಾರ ವಿಕ್ರಂ ರವಿಚಂದ್ರನ್ ಚಿತ್ರರಂಗಕ್ಕೆ ಡೆಬ್ಯೂ ಆಗ್ತಿರೋ ಸಿನಿಮಾ ತ್ರಿವಿಕ್ರಮ. ನಿರ್ಮಾಪಕ ಸೋಮಣ್ಣ ‘ತ್ರಿವಿಕ್ರಮ’ನಿಗಾಗಿ ಕೋಟಿ ಕೋಟಿ ಬಂಡವಾಳ ಸುರಿದಿದ್ದಾರೆ.. ವಿಶೇಷ ಅಂದ್ರೆ ಇದೀಗ ವಿಕ್ರಂ ಭಾರತ, ಚೀನಾ ವಿವಾದಿತ ಗಡಿಯಲ್ಲಿ ‘ತ್ರಿವಿಕ್ರಮ’ನ ಪರಾಕ್ರಮ ತೋರಿಸಲಿದ್ದಾರೆ. ‘ತ್ರಿಮಿಕ್ರಮ’ ಚಿತ್ರದ ಶೂಟಿಂಗ್ ಆಲ್ ಮೋಸ್ಟ್ ಕಂಪ್ಲೀಟ್ ಆಗಿದ್ದು, ಉಳಿದ ಹಾಡುಗಳನ್ನು ಗಾಲ್ವಾನ್ ಗಡಿಯಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ. ಈ ಎಫರ್ಟ್ ಗೆ ಈಗ ಚಿನ್ನದಂತಾ ಬೆಲೆ ಬಂದಿದೆ. ಯಾಕಂದ್ರೆ ತ್ರಿವಿಕ್ರಮ ಸಿನಿಮಾದ ಹಾಡುಗಳು ಮಾರಾಟವಾಗಿದ್ದು ವಿಕ್ರಂ ಮೊದಲ ಸಿನಿಮಾದಲ್ಲೇ ದಾಖಲೆ ಬರೆದಿದ್ದಾರೆ…
ಜ್ಯೂನಿಯರ್ ಕನಸುಗಾರ ವಿಕ್ಕಿಯ ‘ತ್ರಿವಿಕ್ರಮ’ ಸಾಂಗ್ ಗೆ ಬಾರಿ ಡಿಮ್ಯಾಂಡ್ ಬಂದಿದೆ. ಇದರ ಮೊದಲ ಹೆಜ್ಜೆಯಂತೆ ತ್ರಿವಿಕ್ರಮ ಸಿನಿಮಾದ ಆಡಿಯೋ ಹಕ್ಕು 50 ಲಕ್ಷಕ್ಕೆ ಮಾರಾಟವಾಗಿದೆ. ಒಬ್ಬ ಸ್ಟಾರ್ ಹೀರೋನಾ ಸಿನಿಮಾದ ಹಾಡುಗಳೇ 50 ಲಕ್ಷಕ್ಕೆ ಸೇಲ್ ಆಗಿರೋದು ತೀರಾ ಅಪರೂಪ, ಅಂತದ್ರಲ್ಲಿ ವಿಕ್ರಂ ಮೊದಲ ಸಿನಿಮಾದ ಹಾಡುಗಳು ಇಷ್ಟು ದೊಡ್ಡ ಮೊತ್ತಕ್ಕೆ ಸೇಲ್ ಆಗಿರೋದು, ತ್ರಿವಿಕ್ರಮ ಸಿನಿಮಾದ ಕ್ರೆಡಿಬಲಿಟಿಯನ್ನ ತೋರಿಸುತ್ತೆ.. ತ್ರಿವಿಕ್ರಮ ಸಿನಿಮಾದಲ್ಲಿ ಒಟ್ಟು 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್, ಹಾಗು ಯೋಗರಾಜ್ ಭಟ್ ಹಾಡುಗಳನ್ನ ಬರೆದಿದ್ದಾರೆ. ಅರ್ಜುನ್ ಜನ್ಯ ಭರ್ಜರಿ ಮ್ಯೂಸಿಕ್ ಟ್ಯೂನ್ ಕೊಟ್ಟಿದ್ದು, ವಿಜಯ್ ಪ್ರಕಾಶ್, ಹಾಗು ಸಂಚಿತ್ ಹೆಗಡೆ ಹಾಡುಗಳಿಗೆ ಧ್ವನಿಯಾಗಿದ್ದಾರೆ.. ತ್ರಿವಿಕ್ರಮ ಸಿನಿಮಾದ ಹಾಗಳ ಸೌಂಡು ಮಾರುಕಟ್ಟೆಯಲ್ಲಿ ಜೋರಾಗಿದ್ದು, ಸಿನಿಮಾದ ಮೇಲಿರೋ ನಿರೀಕ್ಷೆಯನ್ನ ಚಿತ್ರತಂಡ ಉಳಿಸಿಕೊಳ್ಳುತ್ತ ಇಲ್ವಾ ಅನ್ನೋದನ್ನ ಕಾದು ನೋಡಬೇಕು
Comments are closed.