ಹಾಟ್ & ಬೋಲ್ಡ್ ನಟಿ ತ್ರಿಶಾ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಟಿಸಿ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡೋರು. ದಶಕದಿಂದಲೂ ಸ್ಟಾರ್ ನಟಿಯಾಗಿರುವ ತ್ರಿಶಾ, ನಾಯಕಿಯಾಗಲು ಹಿಡಿದಿದ್ದಾರೆ ಅಂತ ಮತ್ತೊಬ್ಬ ನಟಿ ಆರೋಪಿಸಿದ್ದಾರೆ.
ಮಾಡೆಲ್ ಹಾಗೂ ನಟಿಯಾಗಿರುವ ಮೀರಾ ಮಿಥುನ್ ತ್ರಿಶಾ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದು, ತ್ರಿಶಾ ನಾಯಕಿಯಾಗಲು, ಹಾಗೂ ಅವಕಾಶಗಳನ್ನು ಪಡೆದುಕೊಳ್ಳಲು ಅಡ್ಡದಾರಿ ಹಿಡಿದಿದ್ದಾರೆ. ನನ್ನ ಬಳಿ ವಿಡಿಯೋ ಇದೆ ಎಂದು ಹೇಳಿದ್ದಾರೆ. ಕಿಂಗ್‌ಫಿಶರ್ ಸೂಪರ್ ಮಾಡೆಲ್ ಆಗಿದ್ದ ಮೀರಾ ಮಿಥುನ್ ಕೆಲವು ಸಿನಿಮಾಗಳಲ್ಲಿ ನಟಿಸಿದ್ದು, ತ್ರಿಶಾ ವಿರುದ್ಧ ಮೊದಲಿನಿಂದಲೂ ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಇದೀಗ ತ್ರಿಶಾ ಅವರಿವರ ಜೊತೆ ಮಲಗಿ ನಾಯಕಿಯಾಗಿದ್ದು. ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಈಗಲೂ ಅದೇ ದಾರಿ ಹಿಡಿದು ಚಿತ್ರರಂಗದಲ್ಲಿ ಉಳಿದುಕೊಂಡಿದ್ದಾರೆ ಎಂದು ಮೀರಾ ಮಿಥುನ್ ಟ್ವೀಟ್ ಮಾಡಿದ್ದಾರೆ.
ಎನ್ನೈ ಅರಿಂದಾಳ್’ ಸಿನಿಮಾದಲ್ಲಿ ನಾನು ನಟಿಸಿದ್ದ ಸೀನ್‌ಗಳನ್ನು ಕಟ್ ಮಾಡಿಸಿದ್ದ ತ್ರಿಶಾ ನಂತರ ಪೆಟ್ಟಾ ಸಿನಿಮಾದಿಂದಲೂ ನನ್ನನ್ನು ಹೊರಗೆ ಹಾಕಿಸಿದಳು ಎಂದು ಹೇಳಿದ್ದಾರೆ ಮೀರಾ ಮಿಥುನ್.
ಇನ್ನು ಸೂರ್ಯ ವಿರುದ್ಧವೂ ಟ್ವೀಟ್ ಮಾಡಿರುವ ಮೀರಾ, ಸೂರ್ಯಾಗೆ ಅಭಿನಯವೇ ಬರುವುದಿಲ್ಲ ಅಂತ ಹೇಳಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ತಾವು ರಜನೀಕಾಂತ್ ಹಾಗೂ ವಿಜಯ್ ವಿರುದ್ಧ ದೂರು ನೀಡುವುದಾಗಿ ಟ್ವೀಟ್ ಮಾಡಿದ್ದರು. ಕೀರ್ತಿ ಸುರೇಶ್ ವಿರುದ್ಧವೂ ಕಿಡಿ ಕಾರಿದ್ದಾರೆ ಮೀರಾ ಮಿಥುನ್.
Comments are closed.