ಮನೋರಂಜನೆ

ಲೈವ್ ವಿಡಿಯೋ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ನಟಿ ವಿಜಯಲಕ್ಷ್ಮಿ

Pinterest LinkedIn Tumblr


ನಾನು ಕನ್ನಡದ ನಟಿ ಎಂಬ ಒಂದೇ ಒಂದು ಕಾರಣಕ್ಕೆ ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಎಂಬ ಕಾರಣಕ್ಕೆ ಸೀಮನ್ ಎಂಬ ನಟ ಮತ್ತು ರಾಜಕಾರಣಿ ಹಾಗೂ ಹರಿನಾಡರ್ ಎಂಬುವವರು ನನ್ನನ್ನು ಬದುಕಲು ಬಿಡುತ್ತಿಲ್ಲ. ನಾನು ಈಗಾಗಲೇ ಮೂರು ಮಾತ್ರೆಗಳನ್ನು ತೆಗೆದುಕೊಂಡಿದ್ದೇನೆ. ನನ್ನ ಬಿಪಿ ಲೋ ಆಗುತ್ತಿದೆ. ನನ್ನ ಸಾವಿಗೆ ಕಾರಣವಾದ ಸೀಮನ್ ಮತ್ತು ಹರಿನಾಡರ್​ ಇಬ್ಬರನ್ನೂ ಯಾವುದೇ ಕಾರಣಕ್ಕೂ ಬಿಡಬೇಡಿ ಎಂದು ಖ್ಯಾತ ನಟಿ ವಿಜಯಲಕ್ಷ್ಮೀ ವಿಡಿಯೋ ಮಾಡಿ ಟ್ವಿಟ್ಟರ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ.

ನಟಿ ವಿಜಯಲಕ್ಷ್ಮೀ ಅವರ ಈ ವಿಡಿಯೋ ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲ ಚಿತ್ರರಂಗಕ್ಕೂ ಆಘಾತ ಉಂಟುಮಾಡಿದೆ. ನಾನು ಕರ್ನಾಟಕದಲ್ಲಿ ಹುಟ್ಟಿದವಳು. ಆದರೆ, ನನ್ನ ಮಾತೃಭಾಷೆ ತಮಿಳು. ನಾನು ಕರ್ನಾಟಕದವಳು ಎಂಬ ಒಂದೇ ಒಂದು ಕಾರಣಕ್ಕೆ ನನಗೆ ಸೀಮನ್ ಸಾಕಷ್ಟು ಹಿಂಸೆ ನೀಡಿದ್ದಾರೆ. ನನ್ನನ್ನು ವೇಶ್ಯೆಯೆಂದು ಕರೆದು, ಅವಮಾನಿಸಿದ್ದಾರೆ. ಕನ್ನಡಿಗರು ಆತನನ್ನು ಸುಮ್ಮನೆ ಬಿಡಬೇಡಿ. ನನ್ನ ಸಾವಿಗೆ ಅವರಿಬ್ಬರೇ ಕಾರಣ ಎಂದು ವಿಜಯಲಕ್ಷ್ಮೀ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಜಯಲಕ್ಷ್ಮೀ ಅವರ ಕುಟುಂಬದವರು ಮತ್ತು ಸ್ನೇಹಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯಕ್ಕೆ ಅವರು ಅಪಾಯದಿಂದ ಪಾರಾಗಿದ್ದಾರೆ. ಸಾಕಷ್ಟು ದಿನಗಳಿಂದ ಒತ್ತಡದಲ್ಲಿದ್ದೇನೆ. ಅದನ್ನ ನಿಭಾಯಿಸಲು ಆಗುತ್ತಿಲ್ಲ. ಹೀಗಾಗಿ ಸಾಯಲು ಇಚ್ಛೀಸಿದ್ದೇನೆ ಎಂದು ವಿಜಯಲಕ್ಷ್ಮಿ ವಿಡಿಯೋ ಮಾಡಿದ್ದರು.ಬಾಲಿವುಡ್​ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಅದರ ಬೆನ್ನಲ್ಲೇ ಸ್ಯಾಂಡಲ್ ವುಡ್ ನಟಿ ಜಯಶ್ರೀ ರಾಮಯ್ಯ ಕೂಡ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ, ನಂತರ ತಾವು ಆರೋಗ್ಯವಾಗಿರುವುದಆಗಿ ಹೇಳಿದ್ದರು. ಇಂದು ಸಂಜೆ ಫೇಸ್​ಬುಕ್ ಹಾಗೂ ಟ್ವಿಟ್ಟರ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿರುವ ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನಿರುವುದಾಗಿ ತಿಳಿಸಿದ್ದರು. ಇದರಿಂದ ಅಭಿಮಾನಿಗಳು ಮತ್ತು ಅವರ ಆಪ್ತವಲಯದವರು ಬಹಳ ಆಘಾತಗೊಂಡಿದ್ದರು.

40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಚೆನ್ನೈನಲ್ಲಿ ಜನಿಸಿದವರು. ಆದರೆ, ಕರ್ನಾಟಕದಲ್ಲೇ ವಿದ್ಯಾಭ್ಯಾಸ ಪೂರೈಸಿ, ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಅವರು ಸುಮಾರು 25 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಿರ್ದೇಶಕ ಟಿ. ಎಸ್. ನಾಗಾಭರಣ ಚಿತ್ರ ನಾಗಮಂಡಲದಲ್ಲಿ ಪ್ರಥಮ ಬಾರಿಗೆ ಅಭಿನಯಿಸಿದರು. ನಂತರ ಸೂರ್ಯವಂಶ, ರಂಗಣ್ಣ, ಡ್ಯಾಡಿ ನಂ.1, ಕನಕಾಂಬರಿ, ಜೋಡಿಹಕ್ಕಿ ಮುಂತಾದ ಅನೇಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

ಇದಕ್ಕೂ ಮೊದಲು ಕೂಡ ವಿಜಯಲಕ್ಷ್ಮೀ ಆತ್ಮಹತ್ಯೆಗೆ ಯತ್ನಿಸಿದ್ದರು. 2006ರಲ್ಲಿ, ವಿಜಯಲಕ್ಷ್ಮಿ ಅವರನ್ನು ಮದುವೆಯಾಗಲು ಬಯಸಿದ್ದ ಸಹಾಯಕ ನಿರ್ದೇಶಕರಿಂದ ಕಿರುಕುಳಕ್ಕೊಳಗಾದ ನಂತರ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರ ತಂದೆ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.

ಬಳಿಕ ತಮಿಳಿನ ನಟ ಹಾಗೂ ರಾಜಕಾರಣಿ ಸೀಮನ್ ಅವರು ವಿಜಯಲಕ್ಷ್ಮೀಗೆ ಬಹಳ ಹತ್ತಿರವಾಗಿದ್ದರು. 2-3 ವರ್ಷ ಇಬ್ಬರೂ ಡೇಟಿಂಗ್ ನಡೆಸಿದ್ದರು. ನಂತರ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. ಇದೀಗ ಅದೇ ಸೀಮನ್ ತನ್ನ ಸಾವಿಗೆ ಕಾರಣ ಎಂದು ವಿಜಯಲಕ್ಷ್ಮೀ ವಿಡಿಯೋ ಮಾಡಿದ್ದಾರೆ. ಸೀಮನ್​ ಅನೇಕ ನಟಿಯರಿಗೆ ಹಿಂಸೆ ನೀಡಿದ್ದಾರೆ. ನಾನು ಕನ್ನಡದವಳು ಎಂಬ ಒಂದೇ ಕಾರಣಕ್ಕೆ ಬಹಳ ಹಿಂಸೆ ನೀಡಿದ್ದೇನೆ. ಹೀಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ವಿಜಯಲಕ್ಷ್ಮೀ ಹೇಳಿದ್ದರು.

Comments are closed.