ಮನೋರಂಜನೆ

ತೆಲುಗು ನಟ ನಿತಿನ್ ನಿಶ್ಚಿತಾರ್ಥದಲ್ಲಿ​ ಧರಿಸಿದ್ದ ಕುರ್ತಾ ಬೆಲೆ ಎಷ್ಟು ಗೊತ್ತಾ?

Pinterest LinkedIn Tumblr


ಹೈದರಾಬಾದ್​: ತೆಲುಗು ನಟ ನಿತಿನ್​ ಬುಧವಾರವಷ್ಟೇ ಬಹುಕಾಲದ ಗೆಳತಿ ಶಾಲಿನಿ ಕಂದುಕುರಿ ಅವರೊಟ್ಟಿಗೆ ನಿಶ್ಚಿತಾರ್ಥ ನೆರವೇರಿಸಿಕೊಂಡರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ನಿತಿನ್​ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಸ್​ ಸಹ ಆಗಿವೆ.

ಇನ್ನು ಫೋಟೋಗಳಲ್ಲಿ ನಿತಿನ್​ ಸಾಂಪ್ರದಾಯಿಕ ಕುರ್ತಾ-ಪೈಜಾಮ ಧರಿಸಿದ್ದರೆ, ಶಾಲಿನಿ ರೆಡ್​​ ಆ್ಯಂಡ್​ ಗೋಲ್ಡ್​ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಇನ್ನು ಇವರ ವಿವಾಹ ಮೂಹರ್ತ ಲಾಕ್​ಡೌನ್​ ನಡುವೆಯೂ ಇಂದು ಹೈದರಾಬಾದ್​ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ನಡೆಯಲಿದ್ದು, ಕರೊನಾ ವೈರಸ್​ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

ನಿಶ್ಚಿತಾರ್ಥದಲ್ಲಿ ಅಭಿನವ್​ ಮಿಶ್ರಾ ಬಿಗೆ ಕುರ್ತಾದಲ್ಲಿ ಸಖತ್​ ಕೂಲ್​ ಆಗಿ ನಿತಿನ್​ ಕಾಣಿಸಿಕೊಂಡಿದ್ದಾರೆ. ಇನ್ನು ಇದರ ಬೆಲೆ ಕೇಳಿದ್ರೆ ಅಚ್ಚರಿಯಾಗದೇ ಇರದು. ಬರೋಬ್ಬರಿ 67,200 ರೂಪಾಯಿಯ ಕುರ್ತಾ ಇದಾಗಿದ್ದು, ಇದೀಗ ಎಲ್ಲಡೆ ಇದರದ್ದೇ ಮಾತಾಗಿದೆ.

ಅಂದಹಾಗೆ ನಿತಿನ್​ ವರಿಸುತ್ತಿರುವ ಶಾಲಿನಿ ಎಂಬಿಎ ಪದವೀಧರೆ, ಯುನೈಟೆಡ್​ ಕಿಂಗ್​ಡಮ್​ನಲ್ಲಿ ಶಿಕ್ಷಣ ಮುಗಿಸಿದ್ದಾರೆ. ಹಲವು ವರ್ಷಗಳಿಂದ ನಿತಿನ್​-ಶಾಲಿನಿ ಪರಿಚಿತರು. ಇನ್ನು ನಿತಿನ್​ ಸಿನಿಮಾ ವಿಚಾರಕ್ಕೆ ಬಂದರೆ ರಂಗ್​ ದೆ ಮತ್ತು ಚೆಕ್​ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

Comments are closed.