ಸ್ಯಾಂಡಲ್ವುಡ್ನಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಕೊರೋನಾ ವೈರಸ್ ಅಂಟುತ್ತಲೇ ಇದೆ. ಇತ್ತೀಚೆಗಷ್ಟೇ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾಗೆ ಕೊರೋನಾ ಸೋಂಕು ತಗುಲಿತ್ತು. ಈಗ ಸರ್ಜಾ ಕುಟುಂಬದ ಮತ್ತೋರ್ವ ಸದಸ್ಯೆಗೆ ಕೊರೋನಾ ಅಂಟಿದೆ. ಅವರು ಬೇರಾರೂ ಅಲ್ಲ ನಟಿ ಐಶ್ವರ್ಯಾ ಅರ್ಜುನ್.
ಜುಲೈ15ರಂದು ಟ್ವೀಟ್ ಮಾಡಿದ್ದ ಧ್ರುವ ಸರ್ಜಾ , ತಮಗೆ ಕೊರೋನಾ ವೈರಸ್ ಇರುವುದನ್ನು ಖಚಿತಪಡಿಸಿದ್ದರು. “ಕೊರೋನಾ ಲಕ್ಷಣಗಳು ಇದ್ದಿದ್ದರಿಂದ ನಾವು ಪರೀಕ್ಷೆಗೆ ಒಳಪಟ್ಟಿದ್ದೆವು. ಈ ವೇಳೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದೇವೆ. ನಾವು ಬೇಗ ಗುಣಮುಖರಾಗುತ್ತೇವೆ ಎನ್ನುವ ನಂಬಿಕೆ ಇದೆ. ನಮ್ಮ ಜೊತೆ ಸಂಪರ್ಕಕ್ಕೆ ಬಂದವರು ಕೊರೋನಾ ಟೆಸ್ಟ್ ಮಾಡಿಸಿ ಮನೆಯಲ್ಲೇ ಇರಿ,” ಎಂದು ಧ್ರುವ ಕೋರಿದ್ದರು.
ಈಗ ಅರ್ಜುನ್ ಸರ್ಜಾ ಮಗಳು ತಮಗೂ ಕೊರೋನಾ ಇರುವ ಬಗ್ಗೆ ಹೇಳಿಕೊಂಡಿದ್ದಾರೆ. ನನಗೆ ಇತ್ತೀಚೆಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ಹೋಂ ಕ್ವಾರಂಟೈನ್ ಆಗಿದ್ದು, ಮನೆಯಲ್ಲೇ ಅಗತ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರು ಟೆಸ್ಟ್ ಮಾಡಿಸಿಕೊಳ್ಳಿ ಮತ್ತು ಮನೆಯಲ್ಲೇ ಇರಿ, ಎಂದು ಕೋರಿದ್ದಾರೆ ಐಶ್ಚರ್ಯಾ.
ಐಶ್ವರ್ಯಾ ಇತ್ತೀಚೆಗೆ ಹೆಚ್ಚು ಜನರ ಸಂಪರ್ಕಕ್ಕೆ ಬಂದಿದ್ದರು. ಅದಕ್ಕೆ ಕಾರಣ ಚಿರಂಜೀವಿ ಸರ್ಜಾ ಅವರ ಸಾವು. ಚಿರಂಜೀವಿ ಅಂತ್ಯ ಕ್ರಿಯೆ ವೇಳೆ ಸಾವಿರಾರು ಜನರು ಸೇರಿದ್ದರು.ಈ ವೇಳೆ ಐಶ್ವರ್ಯಾ ಕೂಡ ಪಾಲ್ಗೊಂಡಿದ್ದರು.
ಚಿರಂಜೀವಿ ಸರ್ಜಾ ಸಾವಿನ ನಂತರ ಧ್ರುವ ಸರ್ಜಾ ತುಂಬಾನೇ ಸೊರಗಿ ಹೋಗಿದ್ದಾರೆ. ಅಲ್ಲದೆ, ಚಿರು ಸಾವು ಅವರ ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ನೋವು ತಂದಿದೆ. ಹೀಗಿರುವಾಗಲೇ ಧ್ರುವಾ ಹಾಗೂ ಪ್ರೇರಣಾಗೆ ಕೊರೋನಾ ವೈರಸ್ ಅಂಟಿತ್ತು. ಈಗ ಅವರ ಕುಟುಂಬದಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಕೊರೋನಾ ಬರುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
Comments are closed.