ಬಾಲಿವುಡ್ ಚಿತ್ರರಂಗದಲ್ಲಿ ಸಾಲು ಸಾಲು ಕೊರೋನಾ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗೆ ಬಿಗ್ ಬಿ ಅಮಿತಾಭ್ ಬಚ್ಚನ್, ಮಗ ಅಭಿಷೇಕ್ ಬಚ್ಚನ್, ಸೊಸೆ ಐಶ್ವರ್ಯಾ ರೈ, ಮೊಮ್ಮಗಳು ಆರಾಧ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರ ಬೆನ್ನಲ್ಲೇ ನಟ ಅನುಪಮ್ ಖೇರ್ ಅವರ ತಾಯಿ ಮತ್ತು ಸಹೋದರನಿಗೆ ಕೊರೋನಾ ಪಾಸಿಟಿವ್ ಬಂದಿವೆ. ಇದೀಗ ನಟಿ ಸಾರಾ ಅಲಿ ಖಾನ್ ಅವರ ಕಾರ್ ಡ್ರೈವರ್ಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ.
ಸಾರಾ ಅಲಿ ಖಾನ್ ಮತ್ತು ಅವರ ಕುಟುಂಬ ಕೋವಿಡ್ ಟೆಸ್ಟ್ ಮಾಡಿಕೊಂಡಿದ್ದಾರೆ. ಈ ವೇಳೆ ರಿಸಲ್ಟ್ ನೆಗೆಟಿವ್ ಎಂದು ಬಂದಿದೆ. ಕಾರ್ ಡ್ರೈವರ್ಗೆ ಕೊರೋನಾ ಸೋಂಕು ದೃಢಪಟ್ಟಿರುವ ವಿಚಾರವನ್ನು ಸಾರಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ನಟಿ ಸಾರಾ ಅಲಿ ಖಾನ್, ‘ನನ್ನ ಕಾರು ಚಾಲಕನಿಗೆ ಕೊರೋನಾ ಸೋಂಕು ತಗುಲಿದೆ. ಈ ವಿಚಾರ ಹೊರಬಂದಂತೆ ತಕ್ಷಣ ಬಿಎಂಸಿ ತಿಳಿಸಲಾಗಿತು. ಕಾರು ಚಾಲಕನನ್ನು ಕ್ವಾರಂಟೈನ್ ಮಾಡಲಾಗಿದೆ. ನನ್ನ ಮತ್ತು ಕುಟುಂಬದ ಸುರಕ್ಷಿತಕ್ಕಾಗಿ ಸಹಾಯ ಮಾಡಿದ ಬಿಎಂಸಿಗೆ ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಸಾರಾ ಅಲಿ ಖಾನ್ ಆವರ ಸಿನಿಮಾ ವಿಚಾರಕ್ಕೆ ಬಂದಾಗ ಡೇವಿಡ್ ಧವನ್ ಅವರ ‘ಕೂಲಿ ನಂ.1’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ . ವರುಣ್ ಧವನ್ ಅವರ ಜೊತೆಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಅಂದುಕೊಂಡತೆ ಆಗಿದ್ದರೆ ಮೇ 1 ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೋನಾ ಲಾಕ್ಡೌನ್ನಿಂದಾಗಿ ಸಿನಿಮಾ ಬಿಡುಗಡೆ ಮುಂದಕ್ಕೆ ಹೋಗಿದೆ. ಪರಿಸ್ಥಿತಿ ಎಲ್ಲವೂ ಸಹಜ ಸ್ಥಿತಿಗೆ ಬಂದಂತೆ ‘ಕೂಲಿ ನಂ 1’ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇನ್ನು ಬಾಲಿವುಡ್ ಖ್ಯಾತ ನಟಿ ರೇಖಾ ಅವರ ಬಂಗಲೆಯನ್ನು ಸೀಲ್ ಡೌನ್ ಮಾಡಲಾಗಿದೆ. ರೇಖಾ ಅವರ ಬಂಗಲೆಯ ಕಾವಲು ಸಿಬ್ಬಂದಿಗೆ ಕೊರೋನಾ ವೈರಸ್ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಕ್ರಮವನ್ನು ತೆಗೆದುಕೊಂಡಿದೆ.
ಬಾಲಿವುಡ್ ತಾರೆಯರಾದ ಜಾಹ್ನವಿ ಕಪೂರ್, ಅಮೀರ್ ಖಾನ್, ಕರಣ್ ಜೋಹರ್ ಅವರ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಕಂಡು ಬಂದಿತ್ತು. ಹಾಗಾಗಿ ಈ ಸೆಲೆಬ್ರಿಟಿಗಳ ಮನೆಯನ್ನು 14 ದಿನಗಳವರೆಗೆ ಸೀಲ್ ಡೌನ್ ಮಾಡಲಾಗಿದೆ.
Comments are closed.