ಮನೋರಂಜನೆ

‘ಬಿಗ್ ಬಿ’ ಅಮಿತಾಭ್‌ ಬಚ್ಚನ್‌ಗೆ ಕೊರೊನಾ ಪಾಸಿಟಿವ್‌! ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು; ಕುಟುಂಬದ ಇತರೆ ಸದಸ್ಯರಿಗೂ ಪರೀಕ್ಷೆ

Pinterest LinkedIn Tumblr

ಭಾರತೀಯ ಚಿತ್ರರಂಗದ ಮಹಾನ್‌ ಪ್ರತಿಭೆ ಅಮಿತಾಭ್‌ ಬಚ್ಚನ್ ಅವರಿಗೆ ಕೊರೊನಾ ಪಾಸಿಟಿವ್‌ ಆಗಿದೆ. ಶನಿವಾರ (ಜು.11) ಅವರು ಮುಂಬೈನ ಖಾಸಗಿ ಆಸ್ಪತ್ರಗೆ ದಾಖಲಾಗಿದ್ದು, ಕುಟುಂಬದ ಇತರೆ ಸದಸ್ಯರಿಗೂ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದು ‘ಬಿಗ್‌ ಬಿ’ ಹೇಳಿದ್ದಾರೆ.

ಅಭಿಮಾನಿಗಳ ಜೊತೆ ಪ್ರತಿಯೊಂದು ವಿಚಾರವನ್ನೂ ಅಮಿತಾಭ್‌ ಬಚ್ಚನ್‌ ಶೇರ್‌ ಮಾಡಿಕೊಳ್ಳುತ್ತಾರೆ. ಅದೇ ರೀತಿ, ತಮಗೆ ಕೊರೊನಾ ಸೋಂಕು ತಗುಲಿರುವ ವಿಷಯವನ್ನೂ ಟ್ವಿಟರ್‌ ಮೂಲಕ ಬಹಿರಂಗ ಪಡಿಸಿದ್ದಾರೆ. ‘ನನಗೆ ಕೋವಿಡ್‌-19 ಪಾಸಿಟಿವ್‌ ಆಗಿದೆ. ಆಸ್ಪತ್ರೆಗೆ ದಾಖಲಾಗಿದ್ದೇನೆ. ನನ್ನ ಕುಟುಂಬದವರು ಮತ್ತು ಸಿಬ್ಬಂದಿಯನ್ನೂ ಪರೀಕ್ಷೆ ಮಾಡಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ. ಕಳೆದ 10 ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ದಯವಿಟ್ಟು ನೀವಾಗಿಯೇ ಟೆಸ್ಟ್‌ ಮಾಡಿಸಿಕೊಳ್ಳಿ’ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Comments are closed.