ಅಂತರಾಷ್ಟ್ರೀಯ

Porn Industryಯಲ್ಲಿ ಚಿತ್ರೀಕರಣ ಹೇಗೆ ನಡೆಯುತ್ತೆ?

Pinterest LinkedIn Tumblr


ನವದೆಹಲಿ: ಪ್ರಪಂಚದ ಪ್ರತಿಯೊಂದು ರೀತಿಯ ಮನರಂಜನೆಗಾಗಿ ವಿಭಿನ್ನ ಉದ್ಯಮವನ್ನು ರಚಿಸಲಾಗಿದೆ. ಇವುಗಳಲ್ಲಿ ಒಂದು ವಯಸ್ಕರ ಚಲನಚಿತ್ರೋದ್ಯಮ ಕೂಡ ಒಂದು. ಎಲ್ಲರೊಂದಿಗೆ ಸಂಪರ್ಕ ಹೊಂದಿದ್ದರೂ ಸಹ, ಈ ಉದ್ಯಮದಲ್ಲಿನ ಅನೇಕ ವಿಷಯಗಳು ಇತರ ಮನರಂಜನಾ ಉದ್ಯಮಗಳಿಗೆ ಹೋಲುತ್ತವೆ. ಇಲ್ಲಿಯೂ ನಟರು ನಟಿಸುತ್ತಾರೆ ಹಾಗೂ ತಮ್ಮ ಶಾಟ್ಸ್ ಗಳಿಗಾಗಿ ಕಾಯುತ್ತಾರೆ ಮತ್ತು ಸಂಭಾಷಣೆಗಳನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಮಾತನಾಡುತ್ತಾರೆ. ಆದರೆ ವಯಸ್ಕರ ಚಿತ್ರೋದ್ಯೋಮದ ಕುರಿತು ಒಂದು ವಿಭಿನ್ನ ಚಿತ್ರಣ ನಮ್ಮೆಲ್ಲರ ಮನಸ್ಸಿನಲ್ಲಿದೆ.

ಪ್ರತಿಯೊಂದು ಉದ್ಯಮವು ತನ್ನದೇ ಆದ ವಿಶೇಷತೆ ಮತ್ತು ನ್ಯೂನತೆಗಳನ್ನು ಹೊಂದಿದೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಇದೆ ರೀತಿ ಕೆಲ ವಯಸ್ಕರ ಚಿತ್ರಗಳಲ್ಲೂ ಇರುತ್ತದೆ. ವಿಶ್ವಾದ್ಯಂತ ಹೆಚ್ಚಿನ ಸಂಕ್ಯೆಯ ಜನರು ಅಶ್ಲೀಲ ವೀಡಿಯೊಗಳು ಮತ್ತು ಚಲನಚಿತ್ರಗಳನ್ನು ವಿಕ್ಷೀಸುತ್ತಾರೆ. ಆದರೆ. ಅಲ್ಲಿ ನಡೆಯುವುದೆಲ್ಲವೂ ನಿಜ ಎಂದು ನಂಬುತ್ತಾರೆ. ಆದರೆ ಅದು ನಿಜ ಅಲ್ಲ. ವಯಸ್ಕ ಚಲನಚಿತ್ರೋದ್ಯಮವು ತನ್ನದೇ ಆದ ವೈಶಿಷ್ಟ್ಯ ಹಾಗೂ ರಹಸ್ಯಗಳನ್ನು ಒಳಗೊಂಡಿದೆ, ಕೇವಲ ಈ ಚಿತ್ರೋದ್ಯೋಮಕ್ಕೆ ಸಂಬಂಧಿಸಿದವರು ಮಾತ್ರ ಈ ಕುರಿತು ನಿಮಗೆ ನಿಖರ ಮಾಹಿತಿ ನೀಡಬಲ್ಲರು.

ಬ್ರಿಟನ್ ನ ಖ್ಯಾತ ವಯಸ್ಕರ ಚಲನಚಿತ್ರ ನಟಿ ಮತ್ತು ಪರ್ಫಾರ್ಮರ್ ಕಿಕಿ ಮಿನಾಜ್ ಇದೀಗ ಈ ಉದ್ಯಮದ ಬಗ್ಗೆ ಕೆಲ ಮಾಹಿತಿಗಳನ್ನೂ ಬಹಿರಂಗಪಡಿಸಿದ್ದಾರೆ. ವಯಸ್ಕ ಚಲನಚಿತ್ರಗಳ ಸೆಟ್ ಗಳಲ್ಲಿ ನಿಜವಾಗಿಯೂ ಏನಾಗುತ್ತದೆ ಮತ್ತು ಅದರಲ್ಲಿ ಕೆಲಸ ಮಾಡಲು ನಟನಿಗೆ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬುದನ್ನು ಅವಳು ಹೇಳಿದ್ದಾಳೆ. ಜೊತೆಗೆ ಮಹಿಳೆಯರಿಗಾಗಿ ವಯಸ್ಕರ ಚಿತ್ರೋದ್ಯಮ ಹೇಗಿರಲಿದೆ ಎಂಬುದರ ಬಗ್ಗೆಯೂ ಕೂಡ ಕಿಕಿ ಹೇಳಿದ್ದಾಳೆ.

ಬ್ರಿಟನ್ ನ ಜನಪ್ರೀಯ ವಯಸ್ಕರ ನಟಿಯರಲ್ಲಿ ಒಬ್ಬರಾಗಿರುವ ಕಿಕಿ ಮಿನಾಜ್ ಅವರ ಪ್ರಕಾರ, ಒಬ್ಬ ನಟ ಅಥವಾ ನಟಿ ವಯಸ್ಕ ಚಲನಚಿತ್ರಗಳನ್ನು ಮಾಡಲು ದಿನಕ್ಕೆ $ 2000 ವರೆಗೆ ಪಡೆಯಬಹುದು. ಕೇವಲ ಮೂರು ದಿನ ಕೆಲಸ ಮಾಡುವ ಮೂಲಕ, ಯಾವುದೇ ನಟ 6000 ಡಾಲರ್ ವರೆಗೆ ಸಂಪಾದಿಸಬಹುದು ಎನ್ನುತ್ತಾರೆ.

ವಯಸ್ಕರ ಚಲನಚಿತ್ರೋದ್ಯಮ ಮಹಿಳೆಯರಿಂದ ನಿರ್ಮಾಣಗೊಂಡಿದೆ ಎಂದು ಕಿಕಿ ಹೇಳುತ್ತಾರೆ. ಈ ಉದ್ಯಮದಲ್ಲಿ, ನಟಿಯರೇ ಚಿತ್ರದ ಮೂಲ ಸ್ಟಾರ್ ಆಗಿರುತ್ತಾರೆ ಮತ್ತು ಬೇರೆ ಬೇರೆ ನಟಿಯರಿಗೆ ಅವರ ಕೆಲಸಕ್ಕೆ ತಕ್ಕಂತೆ ಹಣವನ್ನು ನೀಡಲಾಗುತ್ತದೆ. ಇದೇ ವೇಳೆ, ವಯಸ್ಕ ಉದ್ಯಮದಲ್ಲಿ, ತಮ್ಮ ಪುರುಷ ಸಹನಟರಿಗೆ ಸಮನಾಗಿ ಕೆಲಸ ಮಾಡಲು ನಟಿಯರು ಅವರಿಗಿಂತ ಎರಡು ಪಟ್ಟು ಹೆಚ್ಚು ಶುಲ್ಕವನ್ನು ಕೇಳುವ ಅವಕಾಶ ಇದೆ ಎಂದು ಕಿಕಿ ಹೇಳಿದ್ದಾರೆ.

‘ಪಾರ್ನ್ ಉದ್ಯಮದಲ್ಲಿ ಸೆಕ್ಸಿಸಮ್ ನಂತಹದ್ದು ಏನೂ ಇರುವುದಿಲ್ಲ ಏಕೆಂದರೆ ಈ ಉದ್ಯಮವು ಯುವತಿಯರಿಂದಲೇ ಕೂಡಿದೆ’. ಎಂದು ಕಿಕಿ ಹೇಳುತ್ತಾರೆ., ‘ವಯಸ್ಕ ಉದ್ಯಮದಲ್ಲಿ ಹುಡುಗಿಯರನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಏಕೆಂದರೆ ಅದು ಅವರ ಬಗ್ಗೆ ಮಾತ್ರ ಇರುತ್ತದೆ. ಯಾರೇ ಆಗಲಿ ವಯಸ್ಕರ ಚಿತ್ರ ನೋಡುತ್ತಿರುವಾಗ ಯುವಕ-ಯುವತಿಯರಲ್ಲಿ ಎಲ್ಲರ ಗಮನ ಯುವತಿಯರ ಮೇಲೆಯೇ ಹೆಚ್ಚಾಗಿರುತ್ತದೆ. ಒಂದು ವೇಳೆ ನೀವು ಅಶ್ಲೀಲ ಚಿತ್ರಗಳಲ್ಲಿ ಸ್ಟಾರ್ ಆಗಿದ್ದರೆ. ನೀವು ಸೆಕ್ಸಿಸಮ್ ಬಗ್ಗೆ ಯೋಚಿಸಲು ಸಾಧ್ಯವಿಲ್ಲ.

ಇದೆ ವೇಳೆ ತೆರೆಮರೆಯಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಸಹ ಕಿಕಿ ಬಹಿರಂಗಪಡಿಸಿದ್ದಾರೆ. ಕ್ಯಾಮೆರಾ ಮುಂದೆ ದೃಶ್ಯವನ್ನು ಚಿತ್ರೀಕರಿಸುವುದು ಅವರ ಕೆಲಸದಲ್ಲಿ ಕೇವಲ ಶೇ.30 ರಷ್ಟು ಮಾತ್ರ ಎಂದು ಅವರು ಹೇಳಿದ್ದಾರೆ. ಏಕೆಂದರೆ ಅವರ ಉಳಿದ ಸಮಯ ಕಾಯುವುದರಲ್ಲೇ ಕಳೆದು ಹೋಗುತ್ತದೆ. ಕೆಲವೊಮ್ಮೆ ಒಂದು ದೃಶ್ಯಕ್ಕಾಗಿ 15 ಗಂಟೆಗಳ ಕಾಲ ಕಾಯಬೇಕಾಗುತ್ತದೆ ಎಂದು ಕಿಕಿ ಹೇಳುತ್ತಾರೆ. ಇಷ್ಟು ಹೊತ್ತು ಕಾದ ಬಳಿಕವೂ ಕೂಡ ಹಲವರ ಕೆಲಸ ಕೆಲವೇ ನಿಮಿಷಗಳಲ್ಲಿ ಮುಗಿಯುತ್ತದೆ.

ನಿಮ್ಮ ಶಾಟ್ ಗಾಗಿ ಕುಳಿತು ದಾರಿ ಕಾಯುವುದೇ ಅಲ್ಲಿನ ಜೀವನ. ನೀವು ನಿಮ್ಮ ಮನೆಯಲ್ಲಿ ಇಂಟಿಮೆಟ್ ಆಗಿರುವಾಗ ನೀವು ಕೇವಲ ಇಂಟಿಮೆಟ್ ಆಗಿರುತ್ತಿರಿ. ನೀವು ನಿಮ್ಮ ಜೊತೆಗಿರುವ ಸಂಗಾತಿಗೆ ಪ್ರೀತಿಸುತ್ತಿರಿ. ಆದರೆ, ನೀವು ಒಂದು ಅಡಲ್ಟ್ ಚಿತ್ರದ ಚಿತ್ರೀಕರಣದಲ್ಲಿರುವಾಗ ಪ್ರತಿಯೊಂದು ಸಂಗತಿ ಒಂದು ಕೋನದಲ್ಲಿ ಇರಬೇಕು. ಹೀಗಾಗಿ ನೀವು ಪ್ರತಿ ಬಾರಿ ಸಹಜರಾಗಿರುವುದಿಲ್ಲ ಎನ್ನುತ್ತಾರೆ ಕಿಕಿ.

ಕಿಕಿ ಮಿನಾಜ್ ಮೂಲತಃ ವೆಸ್ಟ್ ಮಿಡ್ಲ್ಯಾಂಡ್ಸ್ ನವರಾಗಿದ್ದಾರೆ. ಅಕೌಂಟೆಂಟ್ ಆಗಲು ಅವರು ಲಂಡನ್‌ಗೆ ಬಂದಿದ್ದರು. ಅವರು ಬ್ರಿಟನ್ ನ ವಯಸ್ಕರ ಉದ್ಯಮದಲ್ಲಿ ಕೆಲಸ ಮಾಡಲು ಹೇಗೆ ಪ್ರಾರಂಭಿಸಿದರು ಎಂಬುದರ ಕುರಿತು ಮಾತನಾಡಿರುವ ಅವರು, ಮೊದಲು ಪ್ಲೇಬಾಯ್‌ನಿಂದ ಅವರಿಗೆ ಒಂದು ಸಲಿಂಗ ದೃಶ್ಯಕ್ಕಾಗಿ ಕೆಲಸ ಮಾಡಲು ಪ್ರಸ್ತಾಪ ಬಂತು ಎನ್ನುತ್ತಾರೆ. ಆ ಜನರು ಅದಕ್ಕಾಗಿ ನನಗೆ ಉತ್ತಮ ಮೊತ್ತವನ್ನು ನೀಡುತ್ತಿದ್ದ ಕಾರಣ ನಾನು ನಿರಾಕರಿಸಲಿಲ್ಲ ಎಂದು ಕಿಕಿ ಹೇಳಿದ್ದಾರೆ.

ಅಶ್ಲೀಲತೆ ನನ್ನ ಆಯ್ಕೆಯಲ್ಲ ಎನ್ನುವ ಕಿಕಿ. ನನಗೆ ಜನರ ಗಮನ ಸೆಳೆಯುವುದು ಇಷ್ಟ ಎನ್ನುತ್ತಾರೆ. ಇದರಿಂದ ನನಗೆ ತುಂಬಾ ಅಟೆನ್ಶನ್ ಸಿಕ್ಕಿತು. ಪ್ಲೇ ಬಾಯ್ ನನಗೆ ಮೊದಲ ಆಫರ್ ನೀಡಿತು ಮತ್ತು ಇದು ಯುವಕ-ಯುವತಿಯರ ಪಾರ್ನ್ ಗೆ ಹೋಗುವುದಕ್ಕಿಂತಲೂ ಸ್ವಲ್ಪ ಉತ್ತಮವಾಗಿತ್ತು ಹಾಗೂ ನನಗೆ ಉತ್ತಮ ಮೊತ್ತ ಕೂಡ ಸಿಕ್ಕಿತು ಎಂದು ಕಿಕಿ ಹೇಳುತ್ತಾರೆ.

ನಂತರದ ದಿನಗಳಲ್ಲಿ ಕ್ರಮೇಣ, ವಯಸ್ಕರ ಉದ್ಯಮದಲ್ಲಿ ತನ್ನ ಗೌರವ ಹೆಚ್ಚಾಯಿತು ಮತ್ತು ಅವರ ಕೌಶಲ್ಯವೂ ಉತ್ತಮವಾಯಿತು. ತಾನು 2000 ರಿಂದ 6000 ಡಾಲರ್ ವರೆಗೆ ಹಣವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ ಎನ್ನುತ್ತಾಳೆ. ಈಗ ಅವರು ಶೂಟಿಂಗ್ಗಾಗಿ ಯುರೋಪಿನ ವಿವಿಧ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಹೊಸ ಪ್ರಾಜೆಕ್ಟ್ಗಾಗಿ ದೊಡ್ಡ ಪ್ರೊಡಕ್ಷನ್ ಹೌಸ್ ಅವರು ಪರಾಗ್ನಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದಾರೆ. ಸೆಟ್‌ಗಳಲ್ಲಿ ಪ್ಯಾಂಪರ್ ಒಳಗಾಗುವುದು ನನತೆ ಇಷ್ಟ ಕಿಕಿ ಹೇಳುತ್ತಾರೆ.

ಕಿಕಿ ಮಿನಾಜ್ ತನ್ನ ಕೆಲಸದ ಬಗ್ಗೆ ಹೆಮ್ಮೆಪಡುತ್ತಾಳೆ ಮತ್ತು ಅದನ್ನು ಕಡಿಮೆ ಎಂದು ಎಂದಿಗೂ ಪರಿಗಣಿಸುವುದಿಲ್ಲ. ಇತರೆ ಕೆಲಸಗಳಂತೆ ಇದು ಕೂಡ ಹಣ ಸಂಪಾದಿಸುವ ಸಾಧನವಾಗಿದೆ ಎಂದು ಅವರು ಹೇಳುತ್ತಾರೆ. ಕಿಕಿ ಇದು ಹಣ ಸಂಪಾದಿಸಲು ಸುಲಭವಾದ ಮಾರ್ಗವಾಗಿದೆ ಮತ್ತು ಆಕೆ ತನ್ನ ಗಳಿಕೆಯನ್ನು ಸಹ ಆನಂದಿಸುತ್ತಾಳೆ ಎಂದು ಹೇಳುತ್ತಾರೆ.

ನಾನು ಕೇವಲ ಹಣ ಸಂಪಾದಿಸುತ್ತಿದ್ದೇನೆ. ನನ್ನ ಕೆಲಸಕ್ಕೆ ಅಧಿಕೃತ ಮಾನ್ಯತೆ ಇದೆ. ನಾನು ಸುರಕ್ಷಿತ ಎಂದು ನನಗೆ ತಿಳಿದಿದೆ. ನಾನು ನನ್ನ ತೆರಿಗೆಯನ್ನು ಪಾವತಿಸುತ್ತೇನೆ. ನಾನು ಏನು ಮಾಡಬೇಕೆಂದು ಬಯಸುತ್ತೇನೋ ಅದನ್ನೆಲ್ಲಾ ಮಾಡುತ್ತೇನೆ. ನಾನು ಯಾರಿಗೂ ನೋವನ್ನುಂಟು ಮಾಡುವುದಿಲ್ಲ ಎಂಬುದು ನನಗೆ ತಿಳಿದಿದೆ.

‘ಪ್ರಪಂಚ ಬದಲಾಗುತ್ತಿದೆ. ಒಳ್ಳೆಯ ಮಹಿಳೆಯರು, ದಾದಿಯರು, ವೈದ್ಯರು ಎಲ್ಲರೂ ತಮ್ಮ ಮನೆಯ ವೆಬ್‌ಕ್ಯಾಮ್‌ನಲ್ಲಿ ಏನನ್ನಾದರೂ ಮಾಡಿ ಹೆಚ್ಚು ಹಣ ಗಳಿಸಲು ಕಾತರರಾಗಿದ್ದಾರೆ. ಜನರು ಮಾಡುವಂತೆ, ಇದು ನನಗೆ ಕೇವಲ ಕೆಲಸ. ನಾನು ಕೆಲವು ನಿಮಿಷಗಳ ಕಾಲ ಸೆಕ್ಸ್ ಮಾಡುತ್ತೇನೆ. ಜನರು ಅದನ್ನು ನಂಬುತ್ತಿದ್ದಾರೆ. ಹಾಗಾಗಿ ಇದರಲ್ಲಿ ಯಾವುದೇ ಸಮಸ್ಯೆ ಇದೆ ಎಂದು ನಾನು ಭಾವಿಸುವುದಿಲ್ಲ’ ಎಂದು ಕಿಕಿ ಹೇಳುತ್ತಾರೆ.

ಕಿಕಿ ಮಿನಾಜ್‌ಗೆ ಕೆಲಸ ಹೇಗೆ ಇರಬಹುದು. ಆದರೆ ಖಾಸಗಿ ಜೀವನದಲ್ಲಿ ಅವಳು ಸಾಮಾನ್ಯ ಜೀವನ ನಡೆಸಲು ಇಷ್ಟಪಡುತ್ತಾಳೆ. ಅವಳು ಬೇಯಿಸುವಂತಹ ಸರಳ ವಿಷಯಗಳನ್ನು ಪ್ರೀತಿಸುತ್ತಾಳೆ. ಇದಲ್ಲದೆ, ಸ್ನೇಹಿತರೊಂದಿಗೆ ಸಮಯ ಕಳೆಯಲು ಮತ್ತು ಮನೆಯಲ್ಲಿ ಕೂಲ್ ಆಗಿರಲು ಇಷ್ಟಪಡುತ್ತಾಳೆ.

Comments are closed.