ನವದೆಹಲಿ: ಕರೋನಾ ವೈರಸ್ ಮಹಾಮಾರಿಯ ಬಳಿಕ ಇದೀಗ ಚೀನಾದಲ್ಲಿ ಮತ್ತೊಂದು ಹೊಸ ಮಾರಕ ಕಾಯಿಲೆ ಹರಡಿರುವ ಕುರಿತು ವರದಿಯಾಗಿದೆ. ಈ ರೋಗಕ್ಕೆ ಬ್ಯುಬೊನಿಕ್ ಪ್ಲೇಗ್ ಎಂದು ಹೆಸರಿಡಲಾಗಿದೆ. ಉತ್ತರ ಚೀನಾದ ಪ್ರಾಂತ್ಯದಲ್ಲಿರುವ ನಗರವೊಂದರಲ್ಲಿ ಬ್ಯುಬೊನಿಕ್ ಪ್ಲೇಗ್‌ನ ಶಂಕಿತ ರೋಗಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಪೀಪಲ್ಸ್ ಡೈಲಿ ಆನ್‌ಲೈನ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಮಂಗೋಲಿಯನ್ ಸ್ವಾಯತ್ತ ಪ್ರದೇಶವಾದ ಬಯನ್ನೂರ್ ನಗರದಲ್ಲಿ ಭಾನುವಾರ ಬ್ಯುಬೊನಿಕ್ ಪ್ಲೇಗ್ ಬಗ್ಗೆ ಎಚ್ಚರಿಕೆ ಜಾರಿಗೊಳಿಸಲಾಗಿದೆ. ಬಳಿಕ ಆಸ್ಪತ್ರೆಯೊಂದರಲ್ಲಿ ಬ್ಯುಬೋನಿಕ್ ಪ್ಲೇಗ್ ಪ್ರಕರಣ ದಾಖಲಿಸಲಾಗಿದೆ. ಬಯನ್ನೂರ್ ನಲ್ಲಿ ಬ್ಯುಬೊನಿಕ್ ಪ್ಲೇಗ್ ಅನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಲೆವಲ್ 3 ಹಂತದ ಎಚ್ಚರಿಕೆ ನೀಡಲಾಗಿದೆ. ಏತನ್ಮಧ್ಯೆ, ಈ ವೈರಸ್ ಯಾವುದು ಮತ್ತು ಅದು ಜನರಲ್ಲಿ ಹೇಗೆ ಹರಡುತ್ತದೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಏನಿದು ಬ್ಯುಬೋನಿಕ್ ಪ್ಲೇಗ್?
ಮಧ್ಯ ಯುಗದಲ್ಲಿ ಬ್ಲಾಕ್ ಡೆತ್ (Black Death) ರೂಪದಲ್ಲಿ ಪತ್ತೆಹಚ್ಚಲಾಗಿರುವ ಬ್ಯುಬೋನಿಕ್ ಪ್ಲೇಗ್ ಒಂದು ಅತ್ಯಧಿಕ ಸಾಂಕ್ರಾಮಿಕ ಹಾಗೂ ಅಪಾಯಕಾರಿ ರೋಗವಾಗಿದೆ, ಇದು ರೋಡೆಂಟ್ಸ್ (ಒಂದು ಪ್ರಜಾತಿಯ ಇಲಿ) (Rodents) ನಿಂದ ಹರಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಈ ಕಾಯಿಲೆ ಯಸೀನಿಯಾ ಪೇಸ್ಟಿಸ್ ಹೆಸರಿನ ಬ್ಯಾಕ್ಟೀರಿಯಾದಿಂದ ಬರುತ್ತದೆ. ಈ ಬ್ಯಾಕ್ಟೀರಿಯಾ ಸಣ್ಣ ಸಸ್ತನಿಗಳು ಹಾಗೂ ತಿಗಣಿಗಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಜೀವಾಣು ಆಗಿದೆ. ಈ ರೋಗದ ಲಕ್ಷಣಗಳು 7 ದಿನಗಳ ಬಳಿಕ ಕಾಣಿಸಲು ಆರಂಭವಾಗುತ್ತವೆ. ತಿಗಣಿಗಳು ಕಚ್ಚುವುದರಿಂದ ಇದು ಹರಡುತ್ತದೆ. ಈ ತಿಗಣಿಗಳು ಹೆಚ್ಚಾಗಿ ಆಹಾರಕ್ಕಾಗಿ ಇಲಿ, ಮೊಲ ಹಾಗೂ ಅಳಿಲುಗಳ ಮೇಲೆ ಪರಾವಲಂಭಿಯಾಗಿರುತ್ತವೆ.
ಚೀನಾದಲ್ಲಿ ಪ್ಲೇಗ್ ಸ್ಥಿತಿ ಅಸಾಮಾನ್ಯವಾಗಿಲ್ಲ ಆದರೆ, ಇದರ ಪ್ರಕೋಪ ನಿರಂತರ ಹೆಚ್ಚಾಗುತ್ತಿದೆ. 2009 ರಿಂದ 2018ರ ನಡುವೆ ಚೀನಾದಲ್ಲಿ ಒಟ್ಟು 26 ಪ್ಲೇಗ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಅವಧಿಯಲ್ಲಿ ಪ್ಲೇಗ್ ಕಾರಣ ಇಲ್ಲಿ ಒಟ್ಟು 11 ಜನರು ಮೃತಪಟ್ಟಿದ್ದಾರೆ.
ಏನಿದು ರೋಗ..?
ಪ್ಲೇಗ್ ನಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ- ಬ್ಯುಬಾನಿಕ್ ಮಾತು ನ್ಯುಮೊನಿಕ್, WHO ಪ್ರಕಾರ ಬ್ಯುಬಾನಿಕ್ ಪ್ಲೇಗ್ ಒಂದು ಸಾಮಾನ್ಯ ಪ್ಲೇಗ್ ರೋಗವಾಗಿದ್ದು, ಲಿಂಪ್ಹ್ ನೋಡ್ ಗಳಲ್ಲಿ ಉರಿಯೂತ ಅಥವಾ ‘ಬ್ಯುಬೇಕ್’ ಇದರ ವಿಶೇಷತೆಯಾಗಿದೆ. ಇದು ಒಂದು ತುಂಬಾ ಕಡಿಮೆ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. 201೦ ರಿಂದ 2015 ರಲ್ಲಿ ವಿಶ್ವದಲ್ಲಿ ಈ ಕಾಯಿಲೆಯ ಒಟ್ಟು 3248 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇವುಗಳಲ್ಲಿ 584 ಜನರು ಮೃತಪಟ್ಟಿದ್ದಾರೆ. ಸದ್ಯ ಮೆಡಗಾಸ್ಕರ್, ಕಾಂಗೋ ಹಾಗೋ ಪೆರು ದೇಶಗಳಲ್ಲಿ ಇದರ ಹೆಚ್ಚಿನ ಪ್ರಕರಣಗಳು ಕಂಡುಬರುತ್ತವೆ.
ಇದು ಹೇಗೆ ಹರಡುತ್ತದೆ?
ಮನುಷ್ಯರಲ್ಲಿ ಬ್ಯುಬೋನಿಕ್ ಪ್ಲೇಗ್ ಹೇಗೆ ಹರಡುತ್ತದೆ ಎಂಬುದರ ಕುರಿತು ಸದ್ಯ ಯಾವುದೇ ನಿಖರ ಮಾಹಿತಿ ದೊರೆತಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮವಾಗಿ ಜನರು ಸತ್ತಿರುವ ಮರ್ಮಾಟ್ (ದೊಡ್ಡ ಹಾಗೂ ಭಾರಿ ಗಾತ್ರದ ಅಳಿಲು ಪ್ರಜಾತಿಯ ಪ್ರಾಣಿ) ನಿಂದ ದೂರ ಉಳಿದು, ಈ ಕುರಿತು ಮಾಹಿತಿ ನೀಡಬೇಕು. ಪ್ಲೇಗ್ ಸೋಂಕನ್ನು ಹರಡುವ ಪ್ರಾಣಿಗಳ ಬೇಟೆ ಹಾಗು ಸೇವನೆಯಿಂದ ದೂರವಿರಲು ಚೀನಾದಲ್ಲಿ ಜನರಿಗೆ ಸೂಚಿಸಲಾಗಿದೆ. ಐದು ದಿನಗಳ ಹಿಂದೆ ಈ ಕುರಿತು ವರದಿ ಮಾಡಿದ್ದ ಚೀನಾದ ಸುದ್ದಿ ಸಂಸ್ಥೆ ಶಿನ್ಹುವಾ, ಪಶ್ಚಿಮ ಮಂಗೋಲಿಯಾದ ಖೋಡಾ ಪ್ರಾಂತ್ಯದಲ್ಲಿ ಬ್ಯುಬೋನಿಕ್ ಪ್ಲೇಗ್ ನ ಎರಡು ಶಂಕಿತ ಪ್ರಕರಣಗಳು ಪತ್ತೆಯಾಗಿರುವ ಕುರಿತು ವರದಿ ಮಾಡಿತ್ತು.
ಈ ಕಾಯಿಲೆ ಎಷ್ಟೊಂದು ಅಪಾಯಕಾರಿಯಾಗಿದೆ?
ಮಧ್ಯಯುಗದಲ್ಲಿ ಬ್ಯುಬೋನಿಕ್ ಪ್ಲೇಗ್ ಮಹಾಮಾರಿ ಅಂದರೆ ಬ್ಲಾಕ್ ಡೆತ್ ಗೆ ಯೂರೋಪಿನ ಅರ್ಧದಷ್ಟು ಜನಸಂಖ್ಯೆ ಬಲಿಯಾಗಿತ್ತು. ಆದರೆ, ಆಂಟಿಬಯೋಟಿಕ್ ಔಷಧಿಗಳು ಇರುವ ಕಾರಣ ಇಂದು ಈ ಕಾಯಿಲೆಯನ್ನು ಬಹಳಷ್ಟು ಮಟ್ಟಿಗೆ ನಿಯಂತ್ರಿಸಬಹುದಾಗಿದೆ.
Comments are closed.