ಮನೋರಂಜನೆ

ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್’ಗೆ 45 ಲಕ್ಷ ರೂ. ವಂಚನೆ ಮಾಡಿದ ಮಹಿಳೆ !

Pinterest LinkedIn Tumblr

ಚೆನ್ನೈ‌: ಮಹಿಳೆಯೊಬ್ಬರು ತಮಗೆ 45 ಲಕ್ಷ ರೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ತಮಿಳು ಚಿತ್ರರಂಗದ ಖ್ಯಾತ ನಟ ವಿಶಾಲ್ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.

ಹೌದು.. ವಿಶಾಲ್ ಹೀರೋ ಮಾತ್ರವಲ್ಲ, ನಿರ್ಮಾಪಕರೂ ಹೌದು. ವಿಶಾಲ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಲ್ಲಿ ಹಲವು ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ವಿಶಾಲ್ ಅವರ ಸಿನಿಮಾ ನಿರ್ಮಾಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಕಳೆದ ಆರು ವರ್ಷಗಳಲ್ಲಿ 45 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ವಿಶಾಲ್‌ ಅವರ ಮ್ಯಾನೇಜರ್ ಹರಿ ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಸದ್ಯ ಪೊಲೀಸರು ಆ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ನಟ ವಿಶಾಲ್ ಕಳೆದ ಏಳು ವರ್ಷಗಳಿಂದ ಎಂಟು ಚಿತ್ರಗಳನ್ನು ನಿರ್ಮಾಣ ಮಾಡಿದ್ದು, ಸದ್ಯ ವಿಶಾಲ್ ಚಕ್ರ ಈ ಚಿತ್ರದಲ್ಲಿ ನಟಿಸುತ್ತಿದ್ದು, ಇದರ ಟೀಸರ್ ಬಿಡುಗಡೆಯಾಗಿದೆ.

Comments are closed.