ಮನೋರಂಜನೆ

ಪುತ್ರನ ಅಂತ್ಯ ಸಂಸ್ಕಾರದಲ್ಲಿ ನನ್ನನ್ನು ಮಾತನಾಡಿಸಿದ್ದು ಆ ನಟಿ ಮಾತ್ರ: ಬಾಲಿವುಡ್ ನಟ ಸುಶಾಂತ್‌ ಸಿಂಗ್‌ ತಂದೆ!

Pinterest LinkedIn Tumblr


ಭಾರತೀಯ ಚಿತ್ರರಂಗಕ್ಕೆ ಜೂ.14 ಕರಾಳ ದಿನವಾಗಿತ್ತು. ಪ್ರತಿಭಾವಂತ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಅಂದು ನೇಣಿಗೆ ಶರಣಾದರು. ಈ ದುರ್ಘಟನೆಯಿಂದ ಅಭಿಮಾನಿಗಳು ಶಾಕ್‌ಗೆ ಒಳಗಾದರು. ಮರುದಿನ ಅಂದರೆ, ಜೂ.15ರಂದು ಸುಶಾಂತ್‌ ಅಂತ್ಯ ಸಂಸ್ಕಾರ ನೆರವೇರಿತು. ಅನೇಕ ಸೆಲೆಬ್ರಿಟಿಗಳು ಹಾಜರಿ ಹಾಕಿದ್ದರು.

ಅಚ್ಚರಿ ಎಂದರೆ ಸುಶಾಂತ್‌ ಸಿಂಗ್‌ ರಜಪೂತ್‌ ಅಂತ್ಯ ಸಂಸ್ಕಾರದಲ್ಲಿ ಚಿತ್ರರಂಗದ ಅನೇಕರು ಭಾಗಿ ಆಗಿದ್ದರೂ ಸಹ ಅಂದು ಸುಶಾಂತ್‌ರ ತಂದೆಯ ಜೊತೆ ಮಾತನಾಡಿದ್ದು ನಟಿ ಕೃತಿ ಸನೋನ್‌ ಮಾತ್ರ. ಈ ವಿಚಾರವನ್ನು ಸುಶಾಂತ್‌ ತಂದೆ ಕೆಕೆ ಸಿಂಗ್‌ ಸ್ವತಃ ಹೇಳಿಕೊಂಡಿದ್ದಾರೆ. 2017ರಲ್ಲಿ ತೆರೆಕಂಡ ‘ರಾಬ್ತಾ’ ಚಿತ್ರದಲ್ಲಿ ಸುಶಾಂತ್‌ ಮತ್ತು ಕೃತಿ ಜೋಡಿಯಾಗಿ ನಟಿಸಿದ್ದರು.

‘ಮಗನ ಅಂತ್ಯಕ್ರಿಯೆಗೆ ಅನೇಕರು ಬಂದಿದ್ದರು. ಕೊರೊನಾ ವೈರಸ್‌ ಹರಡುವ ಭೀತಿ ಬಿದ್ದಿದ್ದರಿಂದ ಎಲ್ಲರೂ ಮಾಸ್ಕ್‌ ಧರಿಸಿದ್ದರು ಮತ್ತು ದೂರ ನಿಂತಿದ್ದರು. ಯಾರನ್ನೂ ಗುರುತಿಸಲು ಆಗಲಿಲ್ಲ. ನನ್ನ ಪಕ್ಕ ನಿಂತಿದ್ದ ಹುಡುಗಿ ಕೃತಿ ಸನೋನ್‌ ಎಂದು ಆಮೇಲೆ ಯಾರೋ ಹೇಳಿದ ಮೇಲೆ ಗೊತ್ತಾಯಿತು. ಸುಶಾಂತ್‌ ಒಳ್ಳೆಯ ವ್ಯಕ್ತಿ ಆಗಿದ್ದರು ಎಂದು ಆಕೆ ನನಗೆ ಹೇಳಿದಳು’ ಎಂದಿದ್ದಾರೆ ಕೆ.ಕೆ. ಸಿಂಗ್‌.

ಸಿನಿಮಾ ರಂಗದಲ್ಲಿ ಎತ್ತರಕ್ಕೆ ಬೆಳೆಯುವುದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನೂ ಮಾಡಬೇಕು ಎಂದು ಸುಶಾಂತ್ ಕನಸು ಕಂಡಿದ್ದರು. ಬಿಹಾರದಲ್ಲಿ ಶಾಲೆ, ಕಾಲೇಜು ಮತ್ತು ಆಸ್ಪತ್ರೆಗಳನ್ನು ಕಟ್ಟಿಸಬೇಕು ಎಂಬುದು ಅವರ ಆಸೆ ಆಗಿತ್ತು ಎಂದು ಕೆಕೆ ಸಿಂಗ್‌ ಮಾಹಿತಿ ನೀಡಿದ್ದಾರೆ.

Comments are closed.