ಬೆಂಗಳೂರು (ಜೂನ್ 27); ರಾಜ್ಯದಲ್ಲಿ ಕೊರೋನಾ ಸೋಂಕಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ದಾಖಲೆಯ ಸಂಖ್ಯೆಯಲ್ಲಿ ಒಂದೇ ದಿನಕ್ಕೆ 918 ಕೊರೋನಾ ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 11923ಕ್ಕೆ ಏರಿಕೆಯಾಗಿದೆ. ಈ ಪ್ರಸಂಗ ಜನರಲ್ಲಿ ಕೊರೋನಾ ಕುರಿತು ಮತ್ತಷ್ಟು ಆತಂಕ ಹೆಚ್ಚಾಗಲು ಕಾರಣವಾಗಿದೆ.
ರಾಜ್ಯಾದ್ಯಂತ 918 ಕೊರೋನಾ ಪ್ರಕರಣಗಳು ಕಾಣಿಸಿಕೊಂಡಿದ್ದರೆ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ಒಂದೇ ದಿನದಲ್ಲಿ ಸುಮಾರು 596 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಬೆಂಗಳೂರು ಕೊರೋನಾ ಡೇಂಜರಸ್ ಸಿಟಿಯಾಗಿ ಬದಲಾಗುತ್ತಿದೆಯೇ? ಎಂಬ ಆತಂಕ ಜನ ಸಾಮಾನ್ಯರಲ್ಲಿ ಮೂಡಿದೆ.
ಇದು ಸೋಂಕಿತರ ಲೆಕ್ಕಾಚಾರವಾದರೆ ಇನ್ನೂ ಇಂದು ಒಂದೇ ದಿನ ರಾಜ್ಯಾದ್ಯಂತ 11 ಜನ ಕೊರೋನಾದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ 3 ಜನ ಈ ಮಾರಣಾಂತಿಕ ಖಾಯಿಲೆಗೆ ಜೀವ ತ್ಯಜಿಸಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 191ಕ್ಕೆ ಏರಿಕೆಯಾಗಿದೆ. ಸೋಂಕಿತರ ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ರಾಜ್ಯ ಸರ್ಕಾರಕ್ಕೆ ತಲೆನೋವಿನ ಸಂಗತಿಯಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ಪ್ರತಿ ಭಾನುವಾರ ರಾಜ್ಯಾದ್ಯಂತ ಕರ್ಫ್ಯೂ ಹೇರಲು ಮುಂದಾಗಿದೆ ಎನ್ನಲಾಗುತ್ತಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?
ಬೆಂಗಳೂರು ನಗರ -596, ದಕ್ಷಿಣ ಕನ್ನಡ -49, ಕಲಬುರಗಿ -33, ಬಳ್ಳಾರಿ -24, ಗದಗ -24, ಧಾರವಾಡ -19, ಬೀದರ್ -17,, ಉಡುಪಿ -14, ಹಾಸನ -14, ಕೋಲಾರ -14 ಯಾದಗಿರಿ, ಶಿವಮೊಗ್ಗ, ತುಮಕೂರು, ಚಾಮರಾಜನಗರ -13, ಮಂಡ್ಯ 12, ಮೈಸೂರು -12 ಪ್ರಕ್ರಣಗಳು ಬೆಳಕಿಗೆ ಬಂದಿದೆ.
ಕೊಡಗು 9, ರಾಯಚೂರು ಮತ್ತು ದಾವಣಗೆರೆ 6, ಬೆಂಗಳೂರು ಗ್ರಾಮಾಂತರ 5 ಪ್ರಕರಣಗಳು ವರದಿಯಾಗಿದೆ.
ಉತ್ತರಕನ್ನಡ, ಬಾಗಲಕೋಟೆ, ಚಿಕ್ಕಮಗಳೂರು, ಚಿತ್ರದುರ್ಗ ತಲಾ 2 ಬೆಳಗಾವಿ , ಚಿಕ್ಕಬಳ್ಳಾಪುರ , ಕೊಪ್ಪಳ ಮತ್ತು , ಹಾವೇರಿ ತಲಾ 1 ಕೇಸ್ ಪತ್ತೆಯಾಗಿವೆ.
Comments are closed.