ಮನೋರಂಜನೆ

ನನ್ನನ್ನು ತುಂಬ ಇಷ್ಟಪಟ್ಟವರನ್ನು ನೋಯಿಸಿದ್ದೇನೆ: ನಟಿ ರಮ್ಯಾ!

Pinterest LinkedIn Tumblr


ಸ್ಯಾಂಡಲ್‌ವುಡ್‌ ಕ್ವೀನ್ ರಮ್ಯಾ ಅವರು ವರ್ಷಗಳ ನಂತರ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರು ಕೇರಳದಲ್ಲಿ ಗರ್ಭಿಣಿ ಆನೆ ಕೊಂದಿರುವ ಬಗ್ಗೆ, ನಟ ಚಿರಂಜೀವಿ ನಿಧನದ ಬಗ್ಗೆ ಮಾತನಾಡಿದ್ದರು. ಈಗ ಅವರು ಜೀವನದಲ್ಲಿ ಸುಖ-ದುಃಖಗಳು ಬರುತ್ತವೆ. ಇದನ್ನು ಹೇಗೆ ಅವರು ಬ್ಯಾಲೆನ್ಸ್ ಮಾಡುತ್ತಿದ್ದಾರೆ ಎಂಬುದನ್ನು ‘ಟೈಮ್ಸ್ ಆಫ್ ಇಂಡಿಯಾ’ಕ್ಕೆ ತಿಳಿಸಿಕೊಟ್ಟಿದ್ದಾರೆ.

‘ನನ್ನನ್ನೂ ಸೇರಿಸಿಕೊಂಡು, ಭಾವೋದ್ರಿಕ್ತ ವ್ಯಕ್ತಿತ್ವವುಳ್ಳವರು ಪ್ರಪಂಚವನ್ನು ನೋಡಿ ಬೇಸರ ಮಾಡಿಕೊಳ್ಳುತ್ತೇವೆ. ಇಂತಹ ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳುವುದರಿಂದ ನಾವು ನಮ್ಮ ಜೀವನದಲ್ಲಿ ಬಹುಬೇಗ ದಣಿದು ಹೋಗುತ್ತೇವೆ. ಹೀಗಾದಾಗ ನಾವು ಹಿಂದೆ ಹೆಜ್ಜೆ ಇಡುತ್ತೇವೆ, ಪ್ರತ್ಯೇಕವಾಗುತ್ತೇವೆ, ಬೇಸರ ಮಾಡಿಕೊಳ್ಳುತ್ತೇವೆ. ನನ್ನನ್ನೂ ಸೇರಿಸಿಕೊಂಡು, ನಾನು ಯಾರು? ಯಾಕೆ ಇದ್ದೀನಿ? ಏನು ಮಾಡಬೇಕು? ನನ್ನ ಜೀವನದ ಅರ್ಥವೇನು? ಹೀಗೆಲ್ಲ ನಾವು ನಮ್ಮನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ಜೀವನದ ಬಗ್ಗೆ ಉತ್ಸಾಹವೇ ಇಲ್ಲದೆ ಪ್ರಪಂಚದಿಂದ ದೂರ ಸರಿಯುತ್ತೇವೆ, ಆಧ್ಮಾತ್ಮಿಕದಲ್ಲಿ ನಾವು ನೆಮ್ಮದಿ ಕಾಣಲು ಆರಂಭಿಸುತ್ತೇವೆ. ನಮ್ಮ ಮನಸ್ಸಿನಲ್ಲಿ ಯಾವುದಕ್ಕೂ ಹೆಸರು ಇರೋದಿಲ್ಲ. ಜೀವನದಲ್ಲಿ ಎಲ್ಲವನ್ನು ಲೆಕ್ಕಾಚಾರ ಮಾಡಿಯೇ ಮಾಡಿದ್ದೇವೆ ಎಂದು ತಿಳಿದು, ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಆಮೇಲೆ ಇದೇನು ಅಂತ ಆಶ್ಚರ್ಯಪಡ್ತೀವಿ. ಇದು ನನಗೂ ಕೂಡ ಆಗಿದೆ’ ಎಂದು ರಮ್ಯಾ ಅವರು ಹೇಳಿದ್ದಾರೆ.

‘ಕಷ್ಟದ ಸಮಯ ಹಾಗೂ ಜೀವನ ಎಂಜಾಯ್ ಮಾಡೋದನ್ನೂ ಕೂಡ ನಾವು ಬ್ಯಾಲೆನ್ಸ್ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ. ನಾವು ಇಲ್ಲಿ ನಮ್ಮ ಸ್ಥಾನ ಏನು ಎಂಬುದು ತಿಳಿದುಕೊಳ್ಳಬೇಕು. ನಾವು ಯಾರು? ನಮ್ಮ ಉದ್ದೇಶವೇನು? ಎಂದು ನಮ್ಮನ್ನು ನಾವು ತಿಳಿದುಕೊಳ್ಳುವುದರ ಜೊತೆಗೆ ನಮ್ಮ ಬದುಕಿಗೆ ನಾವು ಕೃತಜ್ಞರಾಗಿರಬೇಕು’ ಎಂದು ರಮ್ಯಾ ಹೇಳಿದ್ದಾರೆ.

‘ಜೀವನವು ಒಂದು ನಿಜವಾದ ಹೋರಾಟ. ನನ್ನನ್ನು ಇಷ್ಟಪಟ್ಟವರನ್ನು ನಾನು ನೋಯಿಸಿದ್ದೇನೆ. ಅವರು ಇದರ ಅರ್ಥ ಹುಡುಕಿಕೊಳ್ಳಲು ಹೋದಾಗ, ಬ್ಯಾಲೆನ್ಸ್ ಮಾಡುವುದು ಹೇಗೆ ಎಂದು ತಿಳಿಸಿದಾಗ ನಾನು ಅವರನ್ನು ದೂರ ತಳ್ಳಿದ್ದೇನೆ. ಬ್ಯಾಲೆನ್ಸ್ ಮಾಡುವುದು ನಿಜವಾದ ಕೀ ಎಂದು ನಾನು ಕಲಿತಿದ್ದೇನೆ. ಜಗತ್ತಿನಲ್ಲಿ ಮತ್ತು ಅದರ ಸಮಸ್ಯೆಗಳಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ, ತುಂಬಾ ದೂರ ಹೋಗಬೇಡಿ, ಇಲ್ಲೇ ಇರಿ. ಈಗಿರುವ ಜೀವನವನ್ನು ಜೀವಿಸಿ’ ಎಂದು ರಮ್ಯಾ ಅಭಿಪ್ರಾಯಪಟ್ಟಿದ್ದಾರೆ.

Comments are closed.