ಡಿಬೀಟ್ಸ್ ಯ್ಯೂಟೂಬ್ ಖಾತೆಯಲ್ಲಿ ಈ ಹಾಡು ಬಿಡುಗಡೆಗೊಂಡಿತ್ತು. ಆದರೀಗ ಈ ಹಾಡು ಯ್ಯೂಟೂಬ್ ಡಿಬೀಟ್ಸ್ ಖಾತೆಯಿಂದ ಕಣ್ಮರೆಯಾಗಿದೆ!
ಮಹಾಮಾರಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸಲು ಸ್ಯಾಂಡಲ್ವುಡ್ನ ಅನೇಕ ತಾರೆಯನ್ನು ಸೇರಿಸಿಕೊಂಡು ‘ಬದಲಾಗು ನೀನು ಬದಲಾಯಿಸು ನೀನು‘ ಎಂಬ ಹಾಡನ್ನು ಬಿಡುಗಡೆ ಮಾಡಿದ್ದರು. ಡಿಬೀಟ್ಸ್ ಯ್ಯೂಟೂಬ್ ಖಾತೆಯಲ್ಲಿ ಈ ಹಾಡು ಬಿಡುಗಡೆಗೊಂಡಿತ್ತು. ಆದರೀಗ ಈ ಹಾಡು ಯ್ಯೂಟೂಬ್ ಡಿಬೀಟ್ಸ್ ಖಾತೆಯಿಂದ ಕಣ್ಮರೆಯಾಗಿದೆ!
‘ಬದಲಾಗು ನೀನು ಬದಲಾಯಿಸು ನೀನು’ ವಿಡಿಯೋ ಹಾಡನ್ನು ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ಮಿಸಿತ್ತು. ನಿರ್ದೇಶಕ ಪವನ್ ಒಡೆಯರು ನಿರ್ದೇಶನ ಮಾಡಿದ್ದರು. ಚಂದನವನದ ನಟ ದರ್ಶನ್, ಯಶ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಉಪೇಂದ್ರ, ಧ್ರುವ ಸರ್ಜಾ, ಅನುಶ್ರೀ, ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್ ಸೇರಿದಂತೆ ರಾಜಕೀಯ ನಾಯಕರುಗಳಾದ ಮುಖ್ಯಮಂತ್ರಿ ಯಡಿಯರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಟೀಂ ಇಂಡಿಯಾದ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದರು. ಆದರೀಗ ಈ ಹಾಡು ಡಿಬೀಟ್ಸ್ ಖಾತೆಯಿಂದ ಮಾಯವಾಗಿದೆ. ಅನೇಕರಿಗೆ ಈ ಸುದ್ದಿ ಶಾಕ್ ನೀಡಿದೆ.
ಬದಲಾಗು ಹಾಡಿನಲ್ಲಿ ಕಿಚ್ಚ ಸುದೀಪ್ ಇರಲಿಲ್ಲ!
ಜೂನ್ 5 ರಂದು ಬಿಡುಗಡೆಯಾಗಿತ್ತು. ಸ್ಯಾಂಡಲ್ವುಡ್ನ ಅನೇಕ ತಾರೆಯರು ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕಿಚ್ಚ ಸುದೀಪ್ ಇಲ್ಲದಿರುವುದು ರಿಲೀಸ್ಗೂ ಮೊದಲೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಅದರಲ್ಲೂ ಭಾರತೀಯ ಚಿತ್ರರಂಗದಲ್ಲೇ ಹೆಸರು ಮಾಡಿರುವ ಅಭಿನಯ ಚಕ್ರವರ್ತಿಯನ್ನು ಕೈ ಬಿಟ್ಟಿರುವುದು ಏಕೆ? ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಯನ್ನಿಡುವ ಮೂಲಕ ಅಸಮಾಧಾನ ಹೊರಹಾಕಿದ್ದರು.
ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿನ ಡಾ. ಕೆ ಸುಧಾಕರ್ ಅವರು ಸ್ಪಷ್ಟನೆ ನೀಡಿದ್ದರು. ಬದಲಾಗು ನೀನು…ಹಾಡಿಗಾಗಿ ಎಲ್ಲರಂತೆ ಕಿಚ್ಚ ಸುದೀಪ್ ಅವರನ್ನು ನಾನು ಸಂಪರ್ಕಿಸಿದ್ದೆ. ಅವರ ಮ್ಯಾನೇಜರ್ ನನ್ನ ಜೊತೆ ಮಾತನಾಡಿದ್ದರು. ಈ ವಿಚಾರ ತಿಳಿಸುವಂತೆ ಅವರಲ್ಲಿ ಕೇಳಿಕೊಳ್ಳಲಾಗಿತ್ತು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗೆಯೇ ಯಾಕೆ ಸ್ಪಂದಿಲ್ಲ ಎಂಬುದು ನನಗೂ ತಿಳಿದಿಲ್ಲ. ಬಹುತೇಕ ಕಲಾವಿದರು, ಕ್ರೀಡಾಪಟುಗಳು ಸ್ವಯಂ ಪ್ರೇರಿತರಾಗಿ ಹಾಡಿನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸುಧಾಕರ್ ತಿಳಿಸಿದರು.
ಆದರೀಗ ಬದಲಾಗು ನೀನು… ಹಾಡು ಅಧಿಕೃತ ಖಾತೆಯಿಂದ ಮಾಯವಾಗಿರುವು ಅನೇಕರಿಗೆ ಶಾಕ್ ನೀಡಿದೆ. ಯಾವ ಕಾರಣಕ್ಕಾಗಿ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಇನ್ನಷ್ಟೇ ತಿಳಿದು ಬರಬೇಕಿದೆ.
Comments are closed.