ಮನೋರಂಜನೆ

ಆಲ್ ಇಂಡಿಯಾ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದ ಬಾಲಿವುಡ್‌ ನಟ ಸುಶಾಂತ್ ಸಿಂಗ್ ರಜಪೂತ್!

Pinterest LinkedIn Tumblr


ಬಾಲಿವುಡ್‌ನ ಪ್ರಖ್ಯಾತ ನಟ, ‘ಎಂ ಎಸ್ ಧೋನಿ; ದಿ ಅನ್‌ಟೋಲ್ಡ್ ಸ್ಟೋರಿ’ ನಾಯಕ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಎಲ್ಲರೂ ಕಂಬನಿ ಮಿಡಿದಿದ್ದಾರೆ. ಸುಶಾಂತ್ ಒಳ್ಳೆಯ ನಟ. ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿದ್ದವು. ಹೀಗಾಗಿ ಅವರು ಅವಕಾಶ ವಂಚಿತರಾಗಿ ಸಾಯಲು ಸಾಧ್ಯವಿಲ್ಲ ಎಂದು ಅವರ ಸಹನಟರು, ಪರಿಚಯಸ್ಥರು ಹೇಳುತ್ತಿದ್ದಾರೆ. ನಟನೆ ಜೊತೆಗೆ ಸುಶಾಂತ್ ಉತ್ತಮ ವಿದ್ಯಾರ್ಥಿಯಾಗಿದ್ದರು.

DCE Entrance Examನಲ್ಲಿ ಸುಶಾಂತ್ ಅವರಿಗೆ ಏಳನೇ ಸ್ಥಾನ
ಪಾಟ್ನಾದಲ್ಲಿ ಕೃಷ್ಣಕುಮಾರ್ ಮತ್ತು ಉಷಾ ಸಿಂಗ್ ಅವರ ಮಗನಾಗಿ ಜನಿಸಿದ್ದ ಸುಶಾಂತ್ ಸಿಂಗ್ ರಜಪೂತ್, ಓದಿನಲ್ಲಿ ಮುಂದಿದ್ದರು. ಇವರ ಸಹೋದರಿ ಮಿತು ಸಿಂಗ್ ರಾಜ್ಯಮಟ್ಟದ ಕ್ರಿಕೆಟರ್ ಆಗಿದ್ದರು. 2002ರಲ್ಲಿ ತಾಯಿ ತೀರಿಕೊಂಡಮೇಲೆ ಸುಶಾಂತ್ ಕುಟುಂಬ ದೆಹಲಿಯಲ್ಲಿ ನೆಲೆಸಿತು. 2003ರಲ್ಲಿ DCE Entrance Examನಲ್ಲಿ ಸುಶಾಂತ್ ಏಳನೇ ಸ್ಥಾನ ಪಡೆದಿದ್ದರು. ದೆಹಲಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸುಶಾಂತ್ ಸೀಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

11 ಇಂಜಿನಿಯರಿಂಗ್ ಎಂಟ್ರೆನ್ಸ್ ಪರೀಕ್ಷೆ ಪಾಸ್ ಮಾಡಿದ್ದ ಸುಶಾಂತ್
ಫಿಸಿಕ್ಸ್‌ನಲ್ಲಿ ನ್ಯಾಶನಲ್ ಒಲಿಂಪೈಡ್ ವಿನ್ನರ್ ಆಗಿದ್ದ ಸುಶಾಂತ್, ಇಂಡಿಯನ್ ಸ್ಕೂಲ್ ಆಫ್ ಮೈನ್ಸ್‌ ಒಳಗೊಂಡಂತೆ, 11 ಇಂಜಿನಿಯರಿಂಗ್ ಎಂಟ್ರೆನ್ಸ್ ಪರೀಕ್ಷೆಗಳನ್ನು ಪಾಸ್ ಮಾಡಿದ್ದರು. ರಂಗಭೂಮಿ, ನೃತ್ಯದಲ್ಲಿ ಭಾಗವಹಿಸುತ್ತಿದ್ದ ಸುಶಾಂತ್‌ಗೆ ಓದಲು ಅಷ್ಟಾಗಿ ಸಮಯ ಸಿಗುತ್ತಿರಲಿಲ್ಲ. ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟ ಸುಶಾಂತ್, ನಟನೆ, ಡಾನ್ಸ್‌ನಲ್ಲಿ ಜೀವನ ಕಂಡುಕೊಳ್ಳಲು ನಿರ್ಧಾರ ಮಾಡಿದ್ದರು.

ಸುಶಾಂತ್ ಸಿನಿ ಬದುಕಿಗೆ ನಾಂದಿಯಾದ ‘ಪವಿತ್ರ ರಿಷ್ತಾ’
51ನೇ ಫಿಲ್ಮ್‌ಫೇರ್ ಅವಾರ್ಡ್ ಫಂಕ್ಷನ್‌ನಲ್ಲಿ ಒಂದು ಡಾನ್ಸ್‌ನಲ್ಲಿ ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ ಆಗಿದ್ದ ಸುಶಾಂತ್‌ ಮುಂದೊಂದು ದಿನ ಫಿಲ್ಮ್‌ಫೇರ್ ಅವಾರ್ಡ್‌ಗೆ ನಾಮಿನೇಟ್ ಆಗಿದ್ದರು. ನಾಟಕಗಳಲ್ಲಿ ಸುಶಾಂತ್ ಅಭಿನಯ ನೋಡಿದ್ದ ಧಾರಾವಾಹಿ ತಂಡವೊಂದು ‘ಕಿಸ್ ದೇಶ್ ಮೇ ಹೇ ಮೇರಾ ದಿಲ್’ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಅವರಿಗೆ ನೀಡಿತು. ಅಲ್ಲಿಂದ ಸುಶಾಂತ್ ಬಣ್ಣದ ಲೋಕದ ಪಯಣ ಆರಂಭವಾಯ್ತು. ‘ಪವಿತ್ರ ರಿಷ್ತಾ’ ಧಾರಾವಾಹಿಯ ಮಾನವ್ ಪಾತ್ರದಲ್ಲಿ ಸುಶಾಂತ್ ಹಲವರಿಗೆ ಇಷ್ಟವಾದರು. ಇದರಲ್ಲಿನ ಅಭಿನಯದಿಂದ ಸುಶಾಂತ್‌ಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು. ಅಲ್ಲಿಂದ ಅವರು ಮತ್ತೆ ಕಿರುತೆರೆಗೆ ಮರಳಲೇ ಇಲ್ಲ.

ಪವಿತ್ರ ರಿಷ್ತಾ ಧಾರಾವಾಹಿಯಲ್ಲಿ ಸುಶಾಂತ್‌ಗೆ ಸುಲಭವಾಗಿ ನಟಿಸುವ ಅವಕಾಶ ಸಿಕ್ಕಿರಲಿಲ್ಲ
2009ರಿಂದ 2014ರವರೆಗೆ ಈ ಧಾರಾವಾಹಿ ಪ್ರಸಾರವಾಗಿತ್ತು. ಮೊದಲು ವಾಹಿನಿ ಸುಶಾಂತ್‌ರನ್ನು ಈ ಧಾರಾವಾಹಿಯಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಕಾರಣ ಸುಶಾಂತ್ ಕಿಸ್ ದೇಶ್ ಮೇ ಹೇ ಮೇರಾ ದಿಲ್’ ಧಾರಾವಾಹಿಯಲ್ಲಿ ಪೋಷಕ ಪಾತ್ರ ಮಾಡುತ್ತಿದ್ದರು. ನಿರ್ಮಾಪಕಿ ಏಕ್ತಾ ಕಪೂರ್ ವಾಹಿನಿಯವರನ್ನು ಒಪ್ಪಿಸಿ ಸುಶಾಂತ್‌ರಿಂದ ಮಾನವ್ ಪಾತ್ರಕ್ಕೆ ಜೀವ ತುಂಬಿಸಿದರು. 2011ರಲ್ಲಿ ಸುಶಾಂತ್ ಈ ಧಾರಾವಾಹಿ ಬಿಟ್ಟಿದ್ದರು.

ಕಷ್ಟದಲ್ಲಿದ್ದರಾ ಸುಶಾಂತ್ ಸಿಂಗ್?
ಸುಶಾಂತ್ ಡಿಪ್ರೆಶನ್‌ನಿಂದ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಕಲಾವಿದರು ಸುಶಾಂತ್ ಸಾವಿಗೆ ಮರುಗಿದ್ದಾರೆ. ಇನ್ನೂ ಕೆಲವರು ಬಾಲಿವುಡ್‌ನಲ್ಲಿ ಯಾರೂ ಸಹಾಯ ಮಾಡೋದಿಲ್ಲ. ಯಾರಿಗೂ ಯಾರೂ ಇಲ್ಲ. ಸುಶಾಂತ್ ಕಳೆದ ಕೆಲ ವರ್ಷಗಳಿಂದ ತುಂಬ ಕಷ್ಟದಲ್ಲಿದ್ದರು ಎಂದು ಕೂಡ ಹೇಳುತ್ತಿದ್ದಾರೆ.

Comments are closed.