ರಾಷ್ಟ್ರೀಯ

ವಾಟ್ಸ್​ಆ್ಯಪ್ ನಿಂದ ಡಿಜಿಟಲ್​ ಪೇಮೆಂಟ್​ ಸೇವೆ ಆರಂಭ​!

Pinterest LinkedIn Tumblr


ಅತಿ ಹೆಚ್ಚು ಬಳಕೆದರಾರರನ್ನು ಹೊಂದಿರುವ ವಾಟ್ಸ್​ಆ್ಯಪ್​ ಯುಪಿಐ ಆಧಾರಿತ ಪೇಮೆಂಟ್​​​ ಸೇವೆಯನ್ನು ಆರಂಭಿಸುವುದಾಗಿ ಈ ಹಿಂದೆ ಹೇಳಿತ್ತು. ಮೇ ತಿಂಗಳಿನ ಕೊನೆಯಲ್ಲಿ ಈ ಸೇವೆಯನ್ನು ತನ್ನ ಬಳಕೆದಾರರಿಗೆ ಪರಿಚಯಿಸುವುದಾಗಿ ತಿಳಿಸಿತ್ತು. ಇದೀಗ ವಾಟ್ಸ್​ಆ್ಯಪ್​​​​ ಬ್ರೆಜಿಲ್​ನಲ್ಲಿ ಪೇಮೆಂಟ್​​​ ಸೇವೆಯನ್ನು ಪರಿಚಯಿಸಿದೆ.

2018ರಲ್ಲಿ ವಾಟ್ಸ್​​ಆ್ಯಪ್ ಪೇಮೆಂಟ್​​ ಸೇವೆಗಾಗಿ​ ಭಾರತದಲ್ಲಿ ಬೇಟಾ ಟೆಸ್ಟ್​​​ ನಡೆಸಿದೆ. ಮಾತ್ರವಲ್ಲದೆ, ಈ ಸೇವೆಗಾಗಿ ಭಾರತದ ಮೂರು ಖಾಸಗಿ ಬ್ಯಾಂಕ್​ಗಳ ಜೊತೆ ಕೈಜೋಡಿಸಿದೆ. ಇದೀಗ ವಾಟ್ಸ್ಆ್ಯಪ್​ ಬ್ರೆಜಿಲ್​ನಲ್ಲಿ ಪೇಮೆಂಟ್​ ಸೇವೆಯನ್ನು ಬಳಕೆದಾರರಿಗೆ ಪರಿಚಯಿಸಿದ್ದು, ಅನೇಕರು ಈ ಸೇವೆ ಸಹಕಾರಿಯಾಗಲಿದೆ ಎಂದು ಹೇಳಿದೆ.

ಇನ್ನು ಬ್ರೆಜಿಲ್​ನಲ್ಲಿ 120 ಮಿಲಿಯನ್​ ಜನರು ವಾಟ್ಸ್ಆ್ಯಪ್​ ಬಳಸುತ್ತಿದ್ದಾರೆ. ಹಾಗಾಗಿ ಅನೇಕರಿಗೆ ಈ ಸೇವೆ ಸಹಕಾರಿಯಾಗಲಿದೆ. ಭಾರತದಲ್ಲೂ ಕೂಡ ಹೆಚ್ಚಿನ ಜನರು ವಾಟ್ಸ್​ಆ್ಯಪ್​ ಅನ್ನು ಬಳಸುತ್ತಿದ್ದಾರೆ. ಸದ್ಯದಲ್ಲೇ ಭಾರತೀಯರಿಗೂ ಈ ಸೇವೆ ಸಿಗಲಿದೆ.

ಸದ್ಯದಲ್ಲೇ ಭಾರತೀಯರಿಗೂ ಸಿಗಲಿದೆ ವಾಟ್ಸ್​​​ಆ್ಯಪ್​​ ಪೇಮೆಂಟ್​ ಸೇವೆ!

ಭಾರತದಲ್ಲಿ ಪೇಮೆಂಟ್​ ಸೇವೆಗಾಗಿ ಆರಂಭಿಸಲು ವಾಟ್ಸ್ಆ್ಯಪ್​​ ಐಸಿಐಸಿಐ, ಆ್ಯಕ್ಸಸ್​​ ಬ್ಯಾಂಕ್​​​, ಹೆಚ್​ಡಿಎಫ್​ಸಿ ಬ್ಯಾಂಕ್​ ಜೊತೆ ಕೈಜೋಡಿಸಿಕೊಂಡಿದೆ. ನಂತರದ ದಿನಗಳಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಜೊತೆಗೂ ಕೈಜೋಡಿಸಲಿದೆ ಎಂದು ಈ ಹಿಂದೆ ಮನಿ ಕಂಟ್ರೋಲ್​​ ವರದಿ ಮಾಡಿತ್ತು.

ವಾಟ್ಸ್​ಆ್ಯಪ್​​ ಪೇಮೆಂಟ್​ ಸೇವೆಗಾಗಿ ನಾವು ಸರ್ಕಾರದ ಜೊತೆ ಕೆಲಸ ಮಾಡುತ್ತೇವೆ. ಇದರಿಂದ ಭಾರತೀಯ ಎಲ್ಲಾ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಪಾವತಿ ಸೇವೆ ಒದಗಿಸಬಹುದು. ವಾಟ್ಸ್​​ ಪೇಮೆಂಟ್​ ಡಿಜಿಟಲ್​ ಪೇಮೆಂಟ್​ ಸೇವೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಸಣ್ಣ ಉದ್ಯಮದಾರರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಕೊವೀಡ್​-19 ಸಮಯದಲ್ಲಿ ಈ ಸೇವೆ ಮುಖ್ಯವಾಗಿದೆ. ಮಾತ್ರವಲ್ಲದೆ 400 ಮಿಲಿಯನ್​ ಭಾರತೀಯರಿಗೆ ವಹಿವಾಟು ನಡೆಸಲು ಇದು ಸುರಕ್ಷಿತವಾಗಿದೆ ಎಂದು ವಾಟ್ಸ್​​​​ಆ್ಯಪ್​ ವಕ್ತಾರೊಬ್ಬರು ಈ ಹಿಂದೆ ಮನಿ ಕಂಟ್ರೋಲ್​ಗೆ ತಿಳಿಸಿದ್ದರು.ಬ್ರೆಜೆಲ್​ ನಂತರ ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಕೆದಾರರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಸದ್ಯದಲ್ಲೇವ ಈ ಸೇವೆಯನ್ನು ಆರಂಭಿಸಲು ವಾಟ್ಸ್​ಆ್ಯಪ್​​ ಸಂಸ್ಥೆ ಮುಂದಾಗಿದೆ.

Comments are closed.