ರಾಷ್ಟ್ರೀಯ

ನೀರಿನ ಸಮಸ್ಯೆಯಿಂದಲೂ ಕೊರೋನಾ ಹರಡುತ್ತಿದೆ: ಹೊಸ ಸಂಶೋಧನೆ

Pinterest LinkedIn Tumblr


ನವದೆಹಲಿ (ಜೂ. 15): ಇಡೀ ವಿಶ್ವವನ್ನೇ ಆತಂಕಕ್ಕೆ ಈಡುಮಾಡಿರುವ ಕೊರೋನಾ ವೈರಸ್​ ಯಾವ ಕಾರಣದಿಂದ ಹರಡುತ್ತದೆ ಎಂಬ ಬಗ್ಗೆ ಇನ್ನೂ ಸಂಶೋಧನೆಗಳು ನಡೆಯುತ್ತಲೇ ಇವೆ. ಸಾಂಕ್ರಾಮಿಕ ರೋಗವಾಗಿರುವ ಕಾರಣದಿಂದ ಕೊರೋನಾ ನಿಯಂತ್ರಿಸಲು ವೈದ್ಯರು ಮಾರ್ಗಗಳನ್ನು ಹುಡುಕುತ್ತಲೇ ಇದ್ದಾರೆ. ಇದೀಗ ಹೊಸ ಸಂಶೋಧನೆಯನ್ನು ಮತ್ತೊಂದು ವಿಚಾರ ಬಯಲಾಗಿದ್ದು, ನೀರಿನ‌ ಸಮಸ್ಯೆಯಿಂದಲೂ‌ ಕೊರೋನಾ ಹರಡಲಿದೆ ಎಂದು ಸ್ಪಷ್ಟವಾಗಿದೆ.

ಇಂಡಿಯಾ ಸ್ಪೆಂಡ್‌ ಎಂಬ‌ ಸಂಸ್ಥೆಯಿಂದ ಸಮೀಕ್ಷೆ ನಡೆಸಲಾಗಿದ್ದು, ಇದರಲ್ಲಿ ವಿಭಿನ್ನ ಮಾಹಿತಿಯನ್ನು ಹೊರಹಾಕಲಾಗಿದೆ. ಅತಿಹೆಚ್ಚು ಜನಸಂಖ್ಯೆ ಹೊಂದಿರುವ 5 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿರುವ ಇಂಡಿಯಾ ಸ್ಪೆಂಡ್‌ ಈ ವರದಿ ಪ್ರಕಟಿಸಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ಈ 5 ರಾಜ್ಯಗಳಲ್ಲಿ ದೇಶದ ಶೇ. 46ರಷ್ಟು ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಈ ರಾಜ್ಯಗಳಲ್ಲಿ ಕೊರೋನಾ ಹರಡಲು ಮುಖ್ಯ ಕಾರಣ ನೀರು. ನೀರಿನ ಸಮಸ್ಯೆಯಿಂದ ಜನ‌ ಹೊರಗೆ ಹೋಗಲೇಬೇಕಾಗಿದೆ. ನೀರಿನ‌ ಕೊರತೆಯಿಂದ ಸ್ವಚ್ಛತೆ ಕಾಪಾಡಲು ಸಾಧ್ಯವಿಲ್ಲ. ನೀರಿಲ್ಲದೆ ಜನರಿಗೆ ಕೈ ತೊಳೆಯುವ ಅಭ್ಯಾಸ ಕಡಿಮೆಯಾಗಿದೆ. ಇಂಥ ಕಡೆ ಕರೋನಾ ಸೋಂಕು ಹರಡುವಿಕೆ ತಡೆಗಟ್ಟುವುದು ಸವಾಲಾಗಿದೆ.

ಮೇ 4ರ ಬಳಿಕ ವಲಸೆ ಕಾರ್ಮಿಕರು ಓಡಾಟ ಶುರುವಾಯಿತು. ಬಳಿಕ ಉತ್ತರ ಪ್ರದೇಶ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಬಿಹಾರಗಳಲ್ಲಿ ಶೇ. 70ರಿಂದ 90ರಷ್ಟು ಕೊರೋನಾ ಪ್ರಮಾಣ ಹೆಚ್ಚಾಗಿದೆ. ಭಾರತದಲ್ಲಿ ಶೇ. 35.8ರಷ್ಟು ಜನ ಮಾತ್ರ ಊಟಕ್ಕೆ ಮುನ್ನ ಕೈ ತೊಳೆಯುತ್ತಾರೆ. ಮೂರನೇ ಒಂದು ಭಾಗದಷ್ಟು ಜನ ಮಲ ವಿಸರ್ಜನೆ ಬಳಿಕ ಸೋಪ್ ಹಾಕಿ ಕೈ ತೊಳೆಯುವುದಿಲ್ಲ. ಇವು ಕೊರೋನಾ ಹರಡಲು ಪ್ರಮುಖ ಕಾರಣಗಳಾಗಿವೆ ಎಂದು ಇಂಡಿಯಾ ಸ್ಪೆಂಡ್‌ ಸಮೀಕ್ಷೆಯಲ್ಲಿ ಮಾಹಿತಿ ಬಹಿರಂಗವಾಗಿದೆ.

Comments are closed.